ಬೆಂಗಳೂರು : ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಆಸ್ತಿ ಜಫ್ತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕೊನೆಗೂ ಅಸ್ತು ನೀಡಿದೆ. ಇದರಿಂದ ಗಾಲಿ ಜನಾರ್ಧನ್ ರೆಡ್ಡಿಯವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿನ ಆಸ್ತಿಯನ್ನು ಸಿಬಿಐ ಜಫ್ತಿ ಮಾಡಲಿದೆ.
ಕಳೆದ ಹಲವಾರು ತಿಂಗಳಿಂದ ಆಸ್ತಿ ಜಫ್ತಿಗೆ ಸಿಬಿಐ ಮನವಿಯನ್ನು ಸಲ್ಲಿಸಿತ್ತಾದರೂ ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಇಂದು ರಾಜ್ಯ ಗೃಹ ಇಲಾಖೆ ಸಿಬಿಐಗೆ ಅನುಮತಿ ನೀಡಿ ಆದೇಶಿಸಿದೆ. ಹಾಗೂ ಈ ಸಂಬಂಧ ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಪರ ವಕೀಲರು ಮಾಹಿತಿಯನ್ನು ನೀಡಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲೇ ಸಿಬಿಐ ಆಸ್ತಿ ಜಫ್ತಿಗಾಗಿ ಅರ್ಜಿ ಸಲ್ಲಿಸಿತ್ತು, ತೆಲಂಗಾಣ, ಆಂಧ್ರಪ್ರದೇಶದಲ್ಲಿನ ಆಸ್ತಿ ಜಪ್ತಿಗೆ ಅನುಮತಿ ಕೇಳಿತ್ತು, ಆದರೆ ರಾಜ್ಯ ಸರ್ಕಾರ ವಿಳಂಬ ಧೋರಣೆ ತಾಳಿರುವ ಹಿನ್ನೆಲೆಯಲ್ಲಿ ಸಿಬಿಐ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ಸಿಬಿಐ ಪರ ಎಸ್ ಪಿಪಿ ಪ್ರಸನ್ನಕುಮಾರ್ ರಿಟ್ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಜನಾರ್ದನ ರೆಡ್ಡಿಯವರು ಹೊಂದಿರುವ ಆಸ್ತಿ ಜಪ್ತಿಗೆ ಅರ್ಜಿ ಸಲ್ಲಿಸಲು ಸರ್ಕಾರದ ಅನುಮತಿ ಕೇಳಿತ್ತು. ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಿಬಿಐಗೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಿಟ್ ಅರ್ಜಿ ಇತ್ಯರ್ಥವಾಗಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಕೊನೆಗೂ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಆಸ್ತಿ ಜಫ್ತಿಗೆ ಅನುಮತಿ ನೀಡಿದೆ.
#GALI JANARDHAN REDDY #FORMER MINISTER #STATE GOVERNMENT #BJP GOVERNMENT #HOME DEPARTMENT #PROPERTY SEIZE #CBI # TELENGANA #ANDRAPRADESH #CONGISCATION




