ಬೆಂಗಳೂರು :ಜ.13 : ಕನ್ನಡ ಸಿನಿಮಾ ಇಂಡಸ್ಟ್ರಿ ಮೇಲೆ ತಮಿಳು, ತೆಲುಗು ಸಿನಿಮಾ ಡಾಮಿನೇಟ್ ಮಾಡುತ್ತಿದೆ. ನಮ್ಮ ಸಿನಿಮಾ ಕಲೆಕ್ಷನ್ ಬಹಳ ಚನ್ನಾಗಿ ಬರುತ್ತಿದ್ದರೂ ಚಿತ್ರಮಂದಿರಗಳಲ್ಲಿ ಅವಕಾಶ ಕೊಡುತ್ತಿಲ್ಲ ಎಂದು ನಟಿ ಪ್ರಿಯಾಂಕಾ ಉಪೇಂದ್ರ ದೂರಿದ್ದಾರೆ.
ಇಂದು ವಿಧಾನಸೌಧದಲ್ಲಿ ಸಚಿವ ಅಶ್ವಥ್ ನಾರಾಯಣ್ ಭೇಟಿ ಮಾಡಿದ ಬಳಿಕ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, ನಮ್ಮ ಚಿತ್ರ ಮಿಸ್ ನಂದಿನಿ ರಿಲೀಸ್ ಆಗಿದೆ. ಆದರೆ ಈ ಶುಕ್ರವಾರ 2 ತೆಲುಗು ಸಿನಿಮಾ, 2 ತಮಿಳು ಸಿನಿಮಾ ಬಿಡುಗಡೆ ಆಗಿದೆ. ಇದು ಕನ್ನಡ ಸಿನಿಮಾದ ಮೇಲೆ ಡಾಮಿನೇಟ್ ಮಾಡುತ್ತಿದೆ. ಥಿಯೇಟರ್ ಗಳಲ್ಲಿ ಹೋದ ವಾರದಿಂದಲೇ ಎಲ್ಲಾ ಕನ್ನಡ ಸಿನಿಮಾ ತೆಗೆದುಬಿಟ್ಟಿದ್ದಾರೆ. ವೀರೇಶ್ ಥಿಯೇಟರ್ ನಲ್ಲಿ ನಮ್ಮ ಸಿನಿಮಾಗೆ ಒಂದು ಲಕ್ಷ ಕಲೆಕ್ಷನ್ ಇತ್ತು. ಆದರೆ ಈಗ ಸಿನಿಮಾ ತೆಗಿಬೇಕು ಅಂತಿದ್ದಾರೆ. ಬೇರೆ ಭಾಷೆ ಸಿನಿಮಾಗೆ ಅವಕಾಶ ಕೊಡ್ತೀವಿ ಅಂತಿದ್ದಾರೆ. ಇದು ಒಂದು ಥರಾ ತೀರ ಡಾಮಿನೇಟ್ ಮಾಡುತ್ತಿದ್ದಾರೆ ಎಂದು ಹೇಳಿದರು ..

ಮುಂದುವರೆದು ಮಾತನಾಡಿದ ಅವರು, ಮಹಿಳಾ ಪ್ರಧಾನ ಚಿತ್ರಗಳಿಗೆ ಬಂಡವಾಳ ಹೆಚ್ಚಿರಲ್ಲ. ಹೆಚ್ಚು ಹಣ ಕೊಟ್ಟು ಪ್ರಚಾರ ಮಾಡೋದು ಕಷ್ಟ. ಆದರೂ ಮಿಸ್ ನಂದಿನಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡ್ತಿದೆ. ಆದರೆ ವೀರೇಶ್ ಥಿಯೇಟರ್ ನಲ್ಲಿ ಬೇರೆ ಭಾಷೆ ಚಿತ್ರಗಳಿಗೆ ಅವಕಾಶ ಇದೆ. ನಮ್ಮ ಚಿತ್ರ ಬಿಡುಗಡೆ ಮಾಡಲು ಸಿದ್ದರಿಲ್ಲ.. ಹೀಗೆ ಮಾಡಿದ್ರೆ ಕನ್ನಡ ಭಾಷೆಯ ಚಿತ್ರಗಳಿಗೆ ಬಹಳ ಸಮಸ್ಯೆ ಆಗುತ್ತೆ ಎಂದರು.
ಸರ್ಕಾರಿ ಶಾಲೆ ಉಳಿಸೋದು, ಕನ್ನಡ ಬಳಸೋ ಬಗ್ಗೆ ಸಿನಿಮಾದಲ್ಲಿ ಮೆಸೇಜ್ ಇದೆ. ಮಕ್ಕಳಿಗೆ ನೋಡಲು ಅವಕಾಶ ಮಾಡಿಕೊಡಲಿ.. ಫೋನ್ ಮೂಲಕ ಬೇರೆ ಮಾಧ್ಯಮಗಳ ಮೂಲಕ ಸಿನಿಮಾ ಕುರಿತ ಮೆಸೇಜ್ ತಲುಪಿಸೋ ಬಗ್ಗೆ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಮಾತನಾಡಿದೆ. ಆದರೆ ಇತ್ತೀಚೆಗಂತೂ ಕನ್ನಡ ಸಿನಿಮಾ ಇಂಡಸ್ಟ್ರಿ ಮೇಲೆ ತಮಿಳು, ತೆಲುಗು ಸಿನಿಮಾ ಡಾಮಿನೇಟ್ ಮಾಡುತ್ತಿದೆ. ನಮ್ಮ ಸಿನಿಮಾ ಕಲೆಕ್ಷನ್ ಬಹಳ ಚನ್ನಾಗಿ ಬರುತ್ತಿದ್ದರೂ ಚಿತ್ರಮಂದಿರಗಳಲ್ಲಿ ಅವಕಾಶ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.




