Bigg Boss ; Jashwant : ನಾವು ಡಿಸೈಡ್ ಮಾಡಿದ್ದೀವಿ, ಮೂವ್ ಆನ್ ಆಗಲು : ಬ್ರೇಕಪ್ ಸುದ್ದಿ ತಿಳಿಸಿದ ನಂದು

ಬೆಂಗಳೂರು :ಜ:13: ನಾವು ಡಿಸೈಡ್ ಮಾಡಿದ್ದೀವಿ, ನಮ್ಮ ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಎಂದು ಅಂತ ನಂದು ಸೋಷಿಯಲ್ ಮೀಡಿಯಾದಲ್ಲಿ ಬರೆಯುವ ಮೂಲಕ ಜಶ್ವಂತ್ ಜೊತೆಗಿನ ಬ್ರೇಕಪ್ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ತೆರೆ ಮೇಲೆ ಈ ಜೋಡಿ ಕಮಾಲ್ ಮಾಡಿತ್ತು.. ತೆರೆ ಮೇಲೆ ಲವ್ ಬರ್ಡ್ಸ್ ಗಳಾಗಿ ಒಂದಾದ ಈ ಜೋಡಿ ಒಂದಷ್ಟು ವರ್ಷ ರಿಲೇಷನ್ ಶಿಪ್ ನಲ್ಲಿದ್ದು, ಈಗ ದೂರವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಂದು, ನಾವು ಮೂವ್ ಆನ್ ಆಗಿದ್ದೇವೆ ಎಂದು ತಿಳಿಸಿದ್ದಾರೆ.

ಏನಿದೆ ನಂದು ಪೋಸ್ಟ್ ನಲ್ಲಿ..?

ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ವಿ. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ವಿ. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್ ಅಪ್ ಮಾಡಬಾರು ಎಂದು ಯೋಚಿಸಿದ್ದೆ. ಆದರೆ ರಿಲೇಷನ್ ಶಿಪ್ ಬ್ರೇಕಪ್ ಸಮಯದಲ್ಲಿ ಹಾಗೇ ಇರಲಿಲ್ಲ. ಜಶ್ವಂತ್, ನನಗೆ ಸ್ವಲ್ಪ ಸಮಯ ಬೇಕು ಎಂದು ಹೇಳಿದಾಗ ಅವನ ಖುಷಿ ಕೂಡ ನಾನು ಆಯ್ಕೆ ಮಾಡಬೇಕಾಗುತ್ತದೆ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ನಾವು ಡಿಸೈಡ್ ಮಾಡಿದ್ದೀವಿ. ನಮ್ಮ ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಎಂದು. ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದ್ದೇನೆ ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ಸ್ಮೈಲ್ ಇದೆ..
ನಾನು ಯಾವಗಲೂ ಅವರ ಖುಷಿನಾ ಅವರೇ ಚ್ಯೂಸ್ ಮಾಡಲಿ ಅಂತಾ ಬಿಡ್ತೀನಿ. ಸೋ, ಅವನ ಖುಷಿ ಅವನಿಗೆ ಏನು ಬೇಕು ಅನ್ನೋದನ್ನ ಯೋಚನೆ ಮಾಡಿದ್ದಾನೆ. ನನ್ನ ಖುಷಿ ಅಷ್ಟೇ ಮುಖ್ಯ ಆಗಲ್ಲ. ಅವನ ಖುಷಿ ಕೂಡ ಅಷ್ಟೇ ಮುಖ್ಯ. ಈ ಬಗ್ಗೆ ಜಶ್ವಂತ್‌ಗೆ ಎನನ್ನೂ ಹೇಳಬೇಡಿ, ಸಮಯ ಬಂದಾಗ ಅವನು ಏನು ಎಂಬುದನ್ನು ಅವನೇ ಪ್ರೂವ್ ಮಾಡುತ್ತಾನೆ ಎಂದು ಜಶ್ವಂತ್ ಬಗ್ಗೆ ನಂದು ಪಾಸಿಟಿವ್ ಆಗೇ ಬರೆದುಕೊಂಡಿದ್ದಾರೆ.

More News