ಮುಂಬೈ: ಸಧ್ಯ ಊರ್ಫಿ ಜಾವೇದ್ ವಿರುದ್ಧ ವಿವಾದಗಳು ಒಂದಾದ ಮೇಲೆ ಇನ್ನೊಂದು ಸೃಷ್ಟಿಯಾಗುತ್ತಿವೆ. ನಾನಾಯ್ತು. ನನ್ನ ಗ್ಲ್ಯಾಮರ್ ಜಗತ್ತಾಯ್ತು ಅಂತಿದ್ದ ನಟಿ ವಿರುದ್ಧ ಕೇಸ್ ಮೇಲೆ ಕೇಸ್ ದಾಖಲಾಗುತ್ತಿದೆ. ಅಶ್ಲೀಲ ಉಡುಪು ಧರಿಸುತ್ತಾರೆ ಎಂಬ ಆರೋಪ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಪೊಲೀಸ್ ಠಾಣೆಗೆ ಹೋಗಿ ಬಂದ ನಟಿಗೆ ಮತ್ತೊಮ್ಮೆ ಬುಲಾವ್ ಬಂದಿದೆ.
ಸಾರ್ವಜನಿಕವಾಗಿ ಅಶ್ಲೀಲ ಉಡುಪು ಧರಿಸುವುದು, ದೇಹ ಪ್ರದರ್ಶನ, ಅಸಮಂಜಸ ವರ್ತನೆಗಳ ವಿರುದ್ದ ಬಿಜೆಪಿ ಮುಖ್ಯಸ್ಥೆ ಚೈತ್ರಾ ಎಂಬುವವರು ಉರ್ಫಿ ವಿರುದ್ಧ ಆರೋಪ ಹೊರಿಸಿದ್ದರು. ಅದಕ್ಕೆ ತಕ್ಕಂತೆ ಉರ್ಫಿ ಜಾವೇದ್ ಸಹ ಬಿಜೆಪಿ ನಾಯಕಿ ವಿರುದ್ಧ ಪ್ರತಿದೂರು ನೀಡಿದ್ದರು.

ನನಗೆ ಜೀವ ಬೆದರಿಕೆ, ಮಾನಹಾನಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರುಗಳನ್ನು ದಾಖಲಿಸಿದ್ದರು. ಇದೀಗ ಬಿಜೆಪಿ ಮುಖ್ಯಸ್ಥೆ ಚೈತ್ರ ನೀಡಿದ್ದ ದೂರಿನ ಆಧಾರದ ಮೇಲೆ ಉರ್ಫಿಯನ್ನು ಮುಂಬೈ ಪೊಲೀಸರು ವಿಚಾರಣೆಗೆ ಕರೆಸಿದ್ದಾರೆ.
ಈ ಮೊದಲು ಬಿಜೆಪಿ ಮುಖ್ಯಸ್ಥೆ ಚೈತ್ರಾ ತನ್ನ ವಿರುದ್ಧ ದೂರು ನೀಡಿದಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಉರ್ಫಿ ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ಬೇಕಿದೆ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದ ಅವರು, ”ರಾಜಕಾರಣಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಬಹಳ ಅಪಾಯಕಾರಿ. ಅದು ನನಗೆ ತಿಳಿದಿದೆ. ಆದರೆ ಈ ಜನ ನನ್ನನ್ನು ಬಿಡುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ನನ್ನನ್ನು ಪೀಡಿಸುತ್ತಿದ್ದಾರೆ.

ಒಂದೋ ನಾನು ನನ್ನನ್ನೇ ಕೊಂದುಕೊಳ್ಳಬೇಕು ಅಥವಾ ಅವರೇ ನನ್ನನ್ನು ಕೊಲ್ಲುವವರೆಗೂ ಕಾಯಬೇಕು. ಮತ್ತೊಮ್ಮೆ ಹೇಳುತ್ತಿದ್ದೇನೆ. ಈ ವಿವಾದವನ್ನು ನಾನು ಪ್ರಾರಂಭಿಸಿದ್ದಲ್ಲ. ನಾನು ಎಂದಿಗೂ ಯಾರಿಗೂ ತೊಂದರೆ ಮಾಡಿದವಳಲ್ಲ. ಆದರೆ ಇವರು ನನ್ನ ಹಿಂದೆ ಬಿದ್ದಿದ್ದರೆ ಅದೂ ಯಾವುದೇ ಕಾರಣಗಳಿಲ್ಲದೆ ಎಂದು ಬೇಸರ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಮುಂಬೈ ಠಾಣೆಯಿಂದ ಬುಲಾವ್ ಬಂದಿದೆ.
ಸಧ್ಯ ಮುಂಬೈ ಠಾಣೆಗೆ ಊರ್ಫಿ ತೆರಳಲಿದ್ದು, ಸಾರ್ವಜನಿಕವಾಗಿ ಅಂಗಾಂಗ ಕಾಣುವಂಥಹಾ ಬಟ್ಟೆಗಳನ್ನು ಧರಿಸದಂತೆ ಉರ್ಫಿ ಜಾವೇದ್‌ಗೆ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.
#URFI JAVED #CONTROVERSY #POLICE PROTECTION #DEMANDED #BJP LEADER #CHAITRA #MUMBAI POILICE #INQUIRY #GLAMOUR #LIFE




