NITIN GADKARI THREAT CALL: ಕೇಂದ್ರ ಸಚಿವ ಗಡ್ಕರಿ ಜೀವ ಬೆದರಿಕೆ ಕುರಿತು ತನಿಖೆ ನಡೆಸಲಾಗುತ್ತಿದೆ: ಸಿಎಂ

ಹುಬ್ಬಳ್ಳಿ : ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತೀವ್ರಗತಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂಡಲಗಾ ಜೈಲ್ ನಿಂದ ಕರೆ ಬಂದ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಸೂಕ್ತ ತನಿಖೆ ಮಾಡಲಾಗುವುದು, ಖಂಡಿತವಾಗಿಯೂ ಕರೆ ಮಾಡಿದವರು ಯಾರು ಎನ್ನುವುದನ್ನು ಪತ್ತೆಹಚ್ಚಲಾಗುವುದು, ಅವರಿಗೆ ಯಾರು ಮಾರ್ಗದರ್ಶನ ನೀಡಿದ್ದಾರೆ ಯಾತಕ್ಕಾಗಿ ಕರೆ ಮಾಡಿಸಿದ್ದಾರೆ, ಅವರ ಹಿನ್ನೆಲೆ ಏನು ಮುಂತಾದ ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿರು.

ನಾ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಗಳೂರಿಗೆ ಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾ ನಾಯಕಿ ಅಂತಾ ಸ್ವಯಂ ಘೋಷಣೆಯೇ ನನಗೆ ತಿಳಿಯದಾಗಿದೆ, ಕಾಂಗ್ರೆಸ್ ನಾಯಕಿ ಅಂತಾ ಸ್ವಯಂ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸ ಎಂದರು. ಅವರನ್ನು ನಾಯಕಿ ಮಾಡಲು ಕರ್ನಾಟಕ ಮಹಿಳೆಯರು ಸಿದ್ಧರಿಲ್ಲ ಎಂದು ಕಟುಕಿದರು.
ಕೀಳು ಮಟ್ಟದ ಮಾತು
ಯುವಜನೋತ್ಸವಕ್ಕೆ ಕಾಂಗ್ರೆಸ್ ತಿರುಗೇಟು ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಕಾಂಗ್ರೆಸ್ ಗೆ ವಿನಾಸದ ಕಾಲ ಬಂದಿದೆ, ಹೀಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಜನೋತ್ಸವ ಸಮಾರೋಪಕ್ಕೆ ಬಂದಿದ್ದೇನೆ, ಇಂದು ಧಾರವಾಡದಲ್ಲಿ ೨೬ ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಸಮಾರೋಪ ಸಮಾರಂಭದ ಭಾಗವಹಿಸುತ್ತಿದ್ದು ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಿದೆ ಎಂದರು.

#NITIN KADKARI #CM BASAVARAJ BOMMAI #UNION MINISTER #TRANSPORT MINISTER #THREAT CALL #LIFE THREAT #HINDALAGA JAIL #INVESTIGATION

More News