RAKHI SAWANT AND ADIL KHAN: ನಟಿ ರಾಖಿ ಸಾವಂತ್ ಅತ್ತು ಕರೆದ ಬಳಿಕ ಕೊನೆಗೂ ಮದುವೆ ವಿಚಾರ ಬಾಯ್ಬಿಟ್ಟ ಪತಿರಾಯ ಆದಿಲ್..!!

ಆಹಾ ನನ್ನ ಮದುವೆ ಅಂತೇ.. ಹೋಹೋ ನನ್ನ ಮದುವೆ ಅಂತೆ ಅಂತ ಸೋಷಿಯಲ್ ಮೀಡಿಯಾ ತುಂಬೆಲ್ಲಾ ನಟಿ ರಾಖಿ ಸಾವಂತ್ ಬಣ್ಣ ಬಣ್ಣದ ಫೋಟೋಗಳನ್ನು ಹಂಚೋ ಮೂಲಕ ಉದ್ಯಮಿ ಆದಿಲ್ ಜೊತೆಗೆ ಹಸೆಮಣೆ ಏರಿದ ಕಥೆಯನ್ನು ಬಿಚ್ಚಿಟ್ಟಿದ್ದರು..
ಇನ್ನು ಸ್ವರ್ಗಕ್ಕೆ ಮೂರೇ ಗೇಣು.. ಜಗತ್ತೇ ಸುಂದರ ಅಂತಿದ್ದ ಕಾಂಟ್ರವರ್ಸಿ ಕ್ವೀನ್ ಗೆ ಮತ್ತೇ ಸಂಕಷ್ಟ ಎದುರಾಗಿತ್ತು.. ರಾಖಿ ಅಂದ್ರೆ ನಂಗ್ಯಾರಂತ ಗೊತ್ತಿಲ್ಲ.. ನಮ್ಮ ನಡುವೆ ಮದುವೆನೇ ಆಗಿಲ್ಲ ಎಂದು ತಾಳಿ ಕಟ್ಟಿದ ಪತಿರಾಯ ವರಸೆ ಬದಲಿಸಿದ್ದ..

ಇದನ್ನು ಕೇಳಿ ದಂಗಾದ ನಟಿ ರಾಖಿ ಅಯ್ಯೋ ನಂಗೆ ಮೋಸ ಮಾಡಿದ್ನಲ್ಲಾ ಎಂದು ಕ್ಯಾಮೆರಾಗಳ ಮುಂದೆ ಗಳಗಳನೆ ಕಣ್ಣೀರು ಹಾಕಿದ್ದರು. ಜೋರಾಗಿ ಅಳುತ್ತಾ, ನನ್ನ ಜೀವನದಲ್ಲಿ ಏಕೆ ಇಷ್ಟೋಂದು ನೋವು. ನಾನು ಮದುವೆಯಾಗಿರುವ ವಿಚಾರ, ಅವನು ಈಗ ನನ್ನನ್ನು ದೂರ ಮಾಡುತ್ತಿರುವ ವಿಚಾರ ನನ್ನ ತಾಯಿಗೆ ಇನ್ನೂ ಗೊತ್ತಿಲ್ಲ ಎಂದು ಬಿಕ್ಕಳಿಸಿದ್ದರು.. ಇದೀಗ ರಾಖಿ ಬಿಕ್ಕಳಿಗೆ ಮನನೊಂದ ಪತಿ ಆದಿಲ್ ನಾನೇ ರಾಖಿ ಪತಿ ಎಂದು ಕೊನೆಗೂ ಬಾಯ್ಬಿಟ್ಟಿದ್ದಾರೆ..

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ ಆದಿಲ್ ಖಾನ್, ಕೊನೆಗೂ ನಾನು ಈ ಮದುವೆಯನ್ನು ಘೋಷಿಸುತ್ತಿದ್ದೇನೆ. ಕೆಲವೊಂದು ಕಾರಣಗಳಿಂದ ನಮ್ಮ ಮದುವೆ ಸುದ್ದಿ ಮುಚ್ಚಿಟ್ಟಿದ್ದೆ. ರಾಖಿ ನಮಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಶುಭ ಕೋರಿದ್ದಾರೆ.. ಕೊನೆಗೂ ಪತಿಯಿಂದ ಈ ಹೇಳಿಕೆ ಪಡೆದು ಸಮಾಧಾನ ಗೊಂಡ ರಾಖಿ, ಮದುವೆ ಪೋಸ್ಟ್​ಗೆ ಕಮೆಂಟ್ ಮಾಡಿ, ಥ್ಯಾಂಕ್ಸ್ ಜಾನ್, ಲಾಟ್ಸ್ ಆಫ್ ಲವ್ ಎಂದು ಬರೆದಿದ್ದಾರೆ..!

ಕಳೆದ ವರ್ಷ ವಷ್ಟೇ ನಟಿ ರಾಖಿ ಸಾವಂತ್ ತಮ್ಮ ಪತಿ ರಿತೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆ ಬಳಿಕ ಪತಿಯಿಂದ ದೂರಾಗಿದ್ದರು. ಬಳಿಕ ರಾಖಿ ಸಾವಂತ್, ಮೈಸೂರಿನ ಆದಿಲ್ ಎಂಬುವರೊಡನೆ ಸುತ್ತಾಟ ಆರಂಭಿಸಿದ್ದರು. ಮೈಸೂರಿನ ಉದ್ಯಮಿ ಆದಿಲ್, ರಾಖಿ ಸಾವಂತ್‌ಗೆ ಐಶಾರಾಮಿ ಬಿಎಂಡಬ್ಲು ಕಾರು, ಮನೆ ಎಲ್ಲ ಕೊಡಿಸಿದ್ದರು ಎಂಬ ಸುದ್ದಿಯೂ ಸದ್ದು ಮಾಡಿತ್ತು. ಇದೀಗ ಈ ಜೋಡಿ ಕದ್ದುಮುಚ್ಚಿ ಮದುವೆ ಆಗಿ ಒಂದಷ್ಟು ರಂಪಾಟ ಕ್ರಿಯೇಟ್ ಮಾಡಿ ತಣ್ಣಗಾಗಿದೆ.

#RAKHI SWANT #ACTRESS #ADIL KHAN #MARRAIGE #ACCEPTED #AGREED

More News