ಹೇಳಿಕೊಳ್ಳೋದ್ದಕ್ಕೆ ನಾಯಕ ನಟ.. ಆದ್ರೆ ಮಾಡ್ತಿದ್ದದ್ದು ಹೆಣ್ಣು ಮಕ್ಕಳ ಸಪ್ಲೈ ಕೆಲಸ ಅಂತೆ.. !

ಸಿನಿಮಾ ಆಯ್ತು.. ನಾನಾಯ್ತು ಎಂದು ಇರಬೇಕಾದ ನಟನೊಬ್ಬ ಮಣ್ಣು ತಿನ್ನೋ ಕೆಲಸ ಮಾಡೋಕೆ ಹೋಗಿ ಪೊಲೀಸ್ ಠಾಣೆಯಲ್ಲಿ ಕಂಬಿ ಎಣೆಸುತ್ತಿದ್ದಾನೆ. ಕಾಮುಕರ ಅಡ್ಡ ಲೊಕೆಂಟೋ ಆ್ಯಪ್ ಹಿಂದೆ ಬಿದ್ದ ಸ್ಯಾಂಡಲ್ ವುಡ್ ನಟ ಮಂಜುನಾಥ್ ಸೇರಿದಂತೆ 6 ಮಂದಿಯನ್ನು ಸದ್ದುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಂಜುನಾಥ್ 2019 ರಲ್ಲಿ ನ್ಯೂರಾನ್ ಎಂಬ ಸೈಕಾಲಜಿ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದ. ಅಷ್ಟೇ ಅಲ್ಲ, ಸೈಡ್ ಬೈ ಸೈಡ್ ವೇಶ್ಯಾವಾಟಿಕೆ ದಂಧೆಯನ್ನೂ ನಡೆಸುತ್ತಿದ್ದ ಎಂಬ ಮಾಹಿತಿ ಬಹಿರಂಗ ಆಗಿದ್ದು, ಹೆಣ್ಣು ಮಕ್ಕಳ ಫೋಟೋ ಹಾಕಿ, ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ವ್ಯಶ್ಯಾವಾಟಿಕೆ ದಂಧೆ ಮಾಡಿಕೊಂಡಿದ್ದ ಮಂಜುನಾಥ್ ಅಲಿಯಾಸ್ ಸಂಜುನನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಂಡವನ್ನು ಕಟ್ಟಿಕೊಂಡಿದ್ದ ಮಂಜುನಾಥ್, ಆ ತಂಡದ ಮೂಲಕ ಎಲ್ಲಾ ಕೆಲಸವನ್ನು ಮಾಡಿಸುತ್ತಿದ್ದ ಎನ್ನಲಾಗಿದೆ. ಲೊಕೆಂಟೋ ಆ್ಯಪ್ ನಲ್ಲಿ ಚಂದವಾಗಿ ಕಾಣುತ್ತಿದ್ದ ಹುಡುಗಿಯರ ಪ್ರೊಫೈಲ್ ಕ್ರಿಯೇಟ್ ಮಾಡಿದ್ದರು. ಆತನ ತಂಡದ ಒಂದು ಗ್ಯಾಂಗ್ ಆಯ್ಕೆಯಾದ ಜನರ ಬಗ್ಗೆ ಮಾಹಿತಿ ನೀಡುತ್ತಿತ್ತಂತೆ ಎಂದು ತಿಳಿದುಬಂದಿದೆ.
ಮತ್ತೊಂದು ಗ್ಯಾಂಗ್ ಬಂದ ಜನರಿಗೆ ಸರ್ವಿಸ್ ನ್ನು ಕೊಡುತ್ತಿದ್ದ ಕೆಲಸ ಮಾಡುತ್ತಿತ್ತಂತೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದು, ಒಬ್ಬರು ಮಹಿಳೆಯನ್ನು ದಂಧೆಯಿಂದ ರೆಸ್ಕ್ಯೂ ಮಾಡಿದ್ದಾರೆ. ಇನ್ನೂ ಈ ನೆಟ್ವರ್ಕ್ ಜಾಲ ದೊಡ್ಡದಿದ್ದು, ಇನ್ನಷ್ಟು ತನಿಖೆ ಆಗ್ಬೇಕಿದೆ.

More News