ACTRESS BHAVANA SUPPORT RASHMIKA: ಮಹಿಳೆಯರನ್ನೇ ಬ್ಯಾನ್ ಮಾಡುವುದು ಯಾಕೆ..?: ರಶ್ಮಿಕಾ ಪರ ಭಾವನಾ ಬ್ಯಾಟಿಂಗ್

ಬ್ಯಾನ್ ಅನ್ನುವ ಪದ ಹುಡುಗಿಯರಿಗೆ ಮಾತ್ರ ಬಳಸಲಾಗುತ್ತಿದೆ. ಯಾವುದೇ ಒಬ್ಬ ನಾಯಕ ನಟನಾಗಿರಲಿ, ಸ್ಟಾರ್ ನಟನಾಗಿರಲಿ ಹೇಳಿಕೆ ನೀಡಿದಾಗ ಅವರ ಮೇಲೆ ಬ್ಯಾನ್ ಪದ ಬಳಕೆ ಆಗಲ್ಲ. ಬರೀ ಮಹಿಳೆಯರ ಮೇಲೆ ಬ್ಯಾನ್ ಪದ ಬಳಕೆ ಆಗುತ್ತಿರೋದು ದುರಂತ ಎಂದು ನಟಿ ಭಾವನಾ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹೆಚ್ಚಾಗಿ ಮಹಿಳಾ ಕಲಾವಿದರ ವಿರುದ್ಧ ಬ್ಯಾನ್ ಪದ ಕೇಳಿಬರುತ್ತಿದೆ. ವೈಯಕ್ತಿಕ ವಿಚಾರಕ್ಕೆ ಪವಿತ್ರಾ ಲೋಕೇಶ್ ಅವರನ್ನು ಮತ್ತು ಕನ್ನಡ ಸಿನಿಮಾ ನೋಡಲಾಗಲಿಲ್ಲ ಎಂಬ ರಶ್ಮಿಕಾ ಮಂದಣ್ಣ ಅವರ ಹೇಳಿಕೆ ವಿರುದ್ಧ ತೀರ ಸಲೀಸಾಗಿ ಬ್ಯಾನ್ ಎಂಬ ಪದ ಬಳಕೆ ಆಗುತ್ತಿದೆ.
ಈ ಬಗ್ಗೆ ಖಾಸಗಿ ಚಾನಲ್ ನಲ್ಲಿ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದ ನಟಿ ಭಾವನಾ, ಬೇರೆ ಇಂಡಸ್ಟ್ರಿ ಮಹಿಳೆಯರು ಇಲ್ಲಿ ಬಂದರೆ ಬ್ಯಾನ್ ಅಂತಾರೆ. ಇಲ್ಲಿನ ಕನ್ನಡದ ಯುವತಿಯರು ಬೇರೆ ಇಂಡಸ್ಟ್ರಿಗೆ ಹೋದರೆ ಬ್ಯಾನ್ ಅಂತಾರೆ. ಅದೇನು ಬರೀ ಹುಡುಗಿಯರ ಮೇಲೆಯೇ ಬ್ಯಾನ್ ಪದ ಬಳಕೆ ಆಗುತ್ತಿದೆ. ನಂಗೆ ಅರ್ಥ ಆಗಲ್ಲ. ಪ್ರೊಫೆಷನಲ್ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುವುದು ಅಂದ್ರೆ ಬೇರೆ, ಆದರೆ ವೈಯಕ್ತಿಕ ಕಾರಣಕ್ಕೆಲ್ಲಾ ಬ್ಯಾನ್ ಎಂದರೆ ಅರ್ಥ ಇಲ್ಲ ಎಂದರು.
ಬ್ಯಾನ್ ಎಂಬ ಪದವೇ ಮೊದಲು ಬ್ಯಾನ್ ಆಗಬೇಕು
ಮುಂದುವರೆದು ಮಾತನಾಡಿದ ಅವರು, ಆ್ಯಸ್ ಎ ಮಹಿಳೆಯಾಗಿ ನನಗೆ ರಶ್ಮಿಕಾ ಬಗ್ಗೆ ಪ್ರೌಡ್ ಇದೆ. ಚಿತ್ರರಂಗದಲ್ಲಿ ಬಹಳಷ್ಟು ಕಾಂಪಿಟೇಷನ್ ಇದೆ. ಸಾಕಷ್ಟು ಪ್ರತಿಭಾವಂತರಿದ್ದಾರೆ. ನಮ್ಮ ಹುಡುಗಿ ಇಲ್ಲಿಂದ ಹೋಗಿ ಬೇರೆ ಭಾಷೆಯಲ್ಲಿ ಕೆಲಸ ಮಾಡ್ತಾ ತಮ್ಮದೇ ಸ್ಥಾನ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭವಲ್ಲ. ನಾನು ಅವಕಾಶ ಕೊಡುತ್ತೀನಿ ಬಾ ಎಂದು ಯಾರೂ ಕರೆಯುವುದಿಲ್ಲ. ನಮ್ಮ ಟ್ಯಾಲೆಂಟ್ ಮೇಲೆ ನಾವು ಉಳಿಯಬೇಕಾಗುತ್ತೆ.
ಆದರೆ ಬ್ಯಾನ್ ಎಂದು ಚಿತ್ರರಂಗದಲ್ಲಿ ಯಾರೂ ಮಾಡಿಲ್ಲ. ಯಾರು ಈ ರೀತಿ ಪದ ಬಳಕೆ ಮಾಡ್ತಾರೆ ಗೊತ್ತಾಗಲ್ಲ. ಚಿತ್ರರಂಗ ಇದು ಒಂದು ಕಲೆ, ಕಲೆ ಅಂದರೆನೇ ಸ್ವಾತಂತ್ರ್ಯ. ಅಲ್ಲಿ ಎಷ್ಟು ಸ್ವಾತಂತ್ರ್ಯ ಇರುತ್ತೋ ಅಷ್ಟು ಕಲೆ ಬೆಳೆಯುತ್ತೆ. ಆದ್ರೆ ಬ್ಯಾನ್ ಎಂಬ ಪದವೇ ಮೊದಲು ಬ್ಯಾನ್ ಆಗಬೇಕು ಎಂದರು.
“ಮಹಿಳಾ ಕಲಾವಿದರನ್ನು ಬ್ಯಾನ್ ಮಾಡುತ್ತೇವೆ ಎಂದರೆ ಅವರ ಪರ ಧ್ವನಿ ಎತ್ತಲು ಯಾರು ಇದ್ದಾರೆ..?”
ಇವರಿಗೆ ಸಿಗೋದೆ ಪಾಪದ ಹುಡುಗಿಯರು. ಯಾವುದೇ ಮಹಿಳಾ ಕಲಾವಿದರನ್ನು ಬ್ಯಾನ್ ಮಾಡುತ್ತೇವೆ ಎಂದರೆ ಅವರ ಪರ ಧ್ವನಿ ಎತ್ತಲು ಯಾರು ಇದ್ದಾರೆ ಇವತ್ತು..? ಯಾರು ಕೇಳುವವರಿದ್ದಾರೆ.? ಯಾವುದೇ ಮಹಿಳೆಗೆ ಏನಾದ್ರು ಸಮಸ್ಯೆ ಆದರೆ ಯಾರೂ ಬರುವುದಿಲ್ಲ. ಸ್ಟಾರ್ ನಟರಿಗೆ ಏನಾದ್ರು ಸಮಸ್ಯೆ ಆದರೆ ಅವರಿಗೆ ಮಾರ್ಕೆಟಿಂಗ್ ಇದೆ. ಅವರಿಗೆ ಹಣ ಇದೆ. ಪಾರಾಗುತ್ತಾರೆ. ಮಹಿಳೆಯರ ಸಿನಿಮಾಗೆ ಹಣ ಇಲ್ಲ.. ಮಾರ್ಕೆಟಿಂಗ್ ಸಹ ಇಲ್ಲ.. ಮೆಚುರ್ಡ್ ಆಗಿ ಯುವ ಜನತೆ ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡಬೇಕಿದೆ.

ಇತ್ತೀಚಿನ ಸೋಷಿಯಲ್ ಮೀಡಿಯಾಗಳು ಜಡ್ಜ್ ಮೆಂಟ್ ಒರಿಯೆಂಟೆಡ್ ಆಗಿ ಕೆಲಸ ಮಾಡಲಾಗುತ್ತಿದೆ. ಹೊಸ ಜನರೇಷನ್ ಪ್ಲ್ಯಾಟ್ ಫಾರ್ಮ್. ಹೊಸ ಜನರೇಷನ್ ಜನ ಇದ್ದಾರೆ. ಇವರು ವಿಶಾಲವಾಗಿ ಯೋಚನೆ ಮಾಡುವ ಬದಲು ನ್ಯಾರೋ ಮೈಂಡ್ ಸೆಟ್, ತೀರ ಸಣ್ಣದಾಗಿ ಯೋಚ್ನೆ ಮಾಡ್ತಿದ್ದಾರೆ ಅನಿಸುತ್ತೆ.
ದೇಶದ ಯುವ ಜನತೆ ಯಾವ ಕಡೆ ಇದೆ ಅನ್ನೋದು ನೋಡ್ಬೇಕ್ ಅಂದ್ರೆ ಇವತ್ತು ಸೋಷಿಯಲ್ ಮೀಡಿಯಾ ದೊಡ್ಡ ವೇದಿಕೆ.. ಅದರಲ್ಲಿ ಅವರ ಮನಸ್ಥಿತಿ ಏನು..? ಅವರನ್ನು ಯಾವ ಕಡೆ ಕರೆದೊಯ್ತುತ್ತಿದೆ ಅನ್ನೋದು ಗೊತ್ತಾಗುತ್ತೆ ನಮಗೆ.. ಮುಂದಿನ ದಿನದಲ್ಲಿ ಒಂದು ಸರಿಯಾದ ಮಾರ್ಗದಲ್ಲಿ ನಮ್ಮನ್ನು ಕರೆದೊಯ್ಯುತ್ತೆ ಎಂದು ಭಾವಿಸುತ್ತೇನೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.

More News