VARISHU FILM DIRECTOR: ಒಳ್ಳೆ ಸಿನಿಮಾ ಕೊಡಪ್ಪ ಅಂದ್ರೆ ನಿಮ್ಗೋಸ್ಕರ ಸಿನಿಮಾ ಮಾಡಿಲ್ಲ ಎಂದ ವಾರಿಸು ನಿರ್ದೇಶಕ ವಂಶಿ ಪೈಡಿಪಲ್ಲಿ..!

ದಳಪತಿ ವಿಜಯ್, ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಬಿಡುಗಡೆ ಕಂಡ ವಾರಿಸು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಕಂಡರೂ ಸಹ ಚಿತ್ರ ಕಥೆ ವಿಚಾರದಲ್ಲಿ ಟೀಕೆಗೆ ಗುರಿಯಾಗಿದೆ. ಎಲ್ಲಾ ಸಿನಿಮಾದ ಒಂದೊಂದು ಸೀನ್ ಗಳನ್ನು ಸೇರಿಸಿ ವಾರಿಸು ಎಂಬ ಚಿತ್ರಾನ್ನ ಮಾಡಿದ್ದಾರೆ. ಸಿನಿಮಾದ ಸೀನ್ ಗಳನ್ನು ಬೇಕಾಬಿಟ್ಟಿಯಾಗಿ ಲ್ಯಾಗ್ ಮಾಡಿದ್ದಾರೆ. ಅನಗತ್ಯವಾಗಿ ಎಳೆದಿದ್ದಾರೆ ಧಾರಾವಾಹಿ ರೀತಿ ಎಂಬ ಟೀಕಾಕಾರರ ಹೇಳಿಕೆಗೆ ನಿರ್ದೇಶಕ ವಂಶಿ ಪೈಡಿಪಲ್ಲಿ ಗರಂ ಆಗಿದ್ದಾರೆ..!

ವಾರಿಸು ಚಿತ್ರ ಬಿಡುಗಡೆ ಕಂಡ ಮೊದಲ ದಿನವೇ ವಿಶ್ವದಾದ್ಯಂತ 42 ಕೋಟಿ ಗಳಿಕೆ ಮಾಡಿ ಉತ್ತಮ ಆರಂಭ ಪಡೆದುಕೊಂಡಿತ್ತು. ಅಷ್ಟೇ ಅಲ್ಲ, ಮೂರು ದಿನಗಳಲ್ಲಿ 100 ಕೋಟಿ ಹಾಗೂ ಏಳು ದಿನಗಳಲ್ಲಿ 200 ಕೋಟಿ ಗಳಿಸಿ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿತ್ತು.
ಆದರೆ ಸಿನಿಮಾದಲ್ಲಿ ಒಳ್ಳೆ ಕಥೆಯೇ ಇಲ್ಲ. ಎಲ್ಲಾ ಸಿನಿಮಾದ ಸೀನ್ ತೆಗೆದು ಒಂದು ಚಿತ್ರ ಮಾಡಲಾಗಿದೆ ಎಂಬ ಟೀಕೆ ಕೇಳಿ ಬರುತ್ತಿದೆ, ಇದಕ್ಕೆ ಖಾಸಗಿ ಚಾನಲ್ ಜತೆ ಮಾತಾಡಿದ ನಿರ್ದೇಶಕ ವಂಶಿ, ವಿಮರ್ಷಕರಿಗೋಸ್ಕರ ಸಿನಿಮಾ ಮಾಡ್ತಿಲ್ಲ ಎಂದಿದ್ದಾರೆ.

ಖಾಸಗಿ ಚಾನಲ್ ನಲ್ಲಿ ಮಾತನಾಡಿದ ವಂಶಿ, ವಿಮರ್ಶಕರಿಗಾಗಿ ಚಿತ್ರ ಮಾಡುವುದಿಲ್ಲ. ವಾರಿಸು ಮಧ್ಯರಾತ್ರಿ ಪ್ರದರ್ಶನವನ್ನು ವೀಕ್ಷಿಸಲು ನಮ್ಮ ತಂಡ ಚಿತ್ರಮಂದಿರಕ್ಕೆ ತೆರಳಿದ್ದೆವು, ಚಿತ್ರ ಮುಗಿದು ಕೊನೆಗೆ ‘ಎ ಫಿಲ್ಮ್ ಬೈ ವಂಶಿ ಪೈಡಿಪಲ್ಲಿ ಅಂಡ್ ಟೀಮ್’ ಎಂದು ಪರದೆ ಮೇಲೆ ಬಂದಾಗ ವೀಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ನಾನು ಚಿತ್ರ ಮಾಡುವುದು ಇಂತಹ ವೀಕ್ಷಕರಿಗೋಸ್ಕರ. ನನ್ನ ಕಥೆಯನ್ನು ಕೇಳಿ ಚೆನ್ನಾಗಿದೆ ಎಂದು ಒಪ್ಪಿಕೊಂಡ ವಿಜಯ್ ನನ್ನ ವಿಮರ್ಶಕ ಎಂದಿದ್ದಾರೆ.
ವಾರಿಸು ಚಿತ್ರ ಧಾರಾವಾಹಿ ರೀತಿ ಇದೆ ಎಂದು ಟ್ರೋಲ್ ಆಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಅವರು, ಧಾರಾವಾಹಿಗಳನ್ನು ಯಾಕೆ ಕಳಪೆಯಾಗಿ ನೋಡುತ್ತಿದ್ದೀರ, ನಿಮ್ಮ ಮನೆಗಳಿಗೆ ಹೋಗಿ ನೋಡಿ ನಿಮ್ಮ ಚಿಕ್ಕಪ್ಪ, ಚಿಕ್ಕಮ್ಮಂದಿರೆಲ್ಲಾ ಪ್ರತಿದಿನ ಧಾರಾವಾಹಿಗಳನ್ನು ಮನರಂಜನೆಗಾಗಿ ನೋಡುತ್ತಿದ್ದಾರೆ,

ಧಾರಾವಾಹಿ ಮಾಡುವುದು ಸುಲಭದ ಮಾತಲ್ಲ, ಅದೊಂದು ಕ್ರಿಯೇಟಿವ್ ಜಾಬ್, ನಮ್ಮದೂ ಸಹ ಕ್ರಿಯೇಟಿವ್ ಜಾಬ್, ಯಾರನ್ನೂ ಸಹ ಕಳಪೆಯಾಗಿ ನೋಡಬೇಡಿ. ಚಿತ್ರವೊಂದನ್ನು ತಯಾರಿಸುವುದು ಎಷ್ಟು ಕಷ್ಟ ಗೊತ್ತಾ, ಚಿತ್ರತಂಡ ಜನರಿಗೆ ಮನರಂಜನೆ ನೀಡಲು ಎಷ್ಟು ಕಷ್ಟುಪಟ್ಟು ಕೆಲಸ ಮಾಡುತ್ತೆ ಗೊತ್ತಾ, ಭಾರತದ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾದ ವಿಜಯ್ ಎಷ್ಟು ಕಷ್ಟಪಟ್ಟು ತಯಾರಿ ನಡೆಸುತ್ತಾರೆ ಗೊತ್ತಾ ಎಂದಿದ್ದಾರೆ..!

#THALAPATHI VIJAY #RASHMIKA MANDANNA #VAMSHI PAIDIPALLY #DIRECTOR #SERIEL #CRITICISM

More News