TEAM INDIA PERFORMENCE: ODIನಲ್ಲಿ ಬೃಹತ್ ಮೊತ್ತ ಕಲೆಹಾಕುವುದನ್ನ ಕರಗತ ಮಾಡಿಕೊಂಡಿರುವ ಟೀಂ ಇಂಡಿಯಾ

ದಶಕಗಳ ಹಿಂದೆ ODI ಪಂದ್ಯಗಳಲ್ಲಿ 250+ ರನ್ ಸ್ಕೋರ್ ಮಾಡಿದರೆ ಪಂದ್ಯದ ಗೆಲುವು ಖಚಿತ ಎಂಬ ಕಾಲವಿತ್ತು. ಆದರೆ ದಿನ ಕಳೆದಂತೆ ಕ್ರಿಕೆಟ್‌ನ ಹೊಸ ಆಯಾಮಗಳು ತೆರೆದುಕೊಂಡಂತೆ ಏಕದಿನ ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ರನ್‌ಗಳಿಸುವುದು ಸರ್ವೇ ಸಾಮಾನ್ಯವಾಗಿದೆ.
ಅದರಲ್ಲೂ T20I ಕ್ರಿಕೆಟ್‌ನ ಅನುಕೂಲದಿಂದಾಗಿ ಇಂದು ಭಾರತ ಸೇರಿದಂತೆ ಹಲವು ತಂಡಗಳು ಸುಲಭವಾಗಿ ODI ಕ್ರಿಕೆಟ್‌ನಲ್ಲಿ 300+ ಮೊತ್ತವನ್ನ ಕಲೆಹಾಕುತ್ತಿವೆ. ಇನ್ನೂ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ತಯಾರಿಯಲ್ಲಿರುವ ಟೀಂ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಬೃಹತ್ ಮೊತ್ತವನ್ನೇ ಕಲೆಹಾಕುತ್ತಾ ಬಂದಿದೆ.

ವಿಶ್ವಕಪ್ ಪಂದ್ಯಗಳ ಸಂದರ್ಭದಲ್ಲಿ ಸಂಜೆಯ ವೇಳೆ ಹಿಮ ಬೀಳುವುದರಿಂದ ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಇದನ್ನ ಮನಗಂಡಿರುವ ಭಾರತ ನಿಗದಿಗಿಂತ 30-40 ಅಧಿಕ ರನ್‌ಗಳನ್ನ ಕಲೆಹಾಕುತ್ತಾ ಬಂದಿದೆ.
ಇದೇ ಕಾರಣದಿಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಬಾರಿ ಟಾಸ್ ಗೆದ್ದ ಸಂದರ್ಭದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ODI ವಿಶ್ವಕಪ್ ಸಂದರ್ಭದಲ್ಲಿ ಅಂಡರ್ ಲೈಟ್ ನಲ್ಲಿ ಬೌಲಿಂಗ್ ಮಾಡುವುದರ ತಯಾರಿ ಮಾಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಮಾಡುತ್ತಿರುವುದಾಗಿಯೂ ರೋಹಿತ್ ಶರ್ಮಾ ಈಗಾಗಲೇ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಇಶಾನ್ ಕಿಶನ್ ಅವರ ದ್ವಿಶತಕದ ನೆರವಿನಿಂದ 409/8 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಇದಾದ ಬಳಿಕ ಪ್ರಸಕ್ತ ವರ್ಷದಲ್ಲಿ ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ODI ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ 373 ರನ್ ಕಲೆಹಾಕಿತ್ತು. ಇದೇ ಸರಣಿಯ ಮೂರನೇ ಪಂದ್ಯದಲ್ಲೂ ಸಹ ವಿರಾಟ್ ಕೊಹ್ಲಿ ಅವರ ಅಜೇಯ 166 ರನ್‌ಗಳ ಸಹಾಯದಿಂದ 390 ರನ್‌ಗಳ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು.

ಈ ಅಭ್ಯಾಸವನ್ನ ನ್ಯೂಜಿ಼ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಮುಂದುವರಿಸಿರುವ ಭಾರತ ಮೊದಲ ODIನಲ್ಲಿ 349 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಭರ್ಜರಿ ಡಬಲ್ ಸೆಂಚುರಿ ಬಾರಿಸಿ ಭಾರತದ ಪಾಲಿನ ಹೀರೋ ಆಗಿ ಮಿಂಚಿದರು. ಹೀಗಾಗಿ ಭಾರತದ ಇತ್ತೀಚಿನ ಪ್ರದರ್ಶನಗಳನ್ನ ಗಮನಿಸಿದರೆ ಈ ವರ್ಷದ ಅಂತ್ಯದಲ್ಲಿ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 350 ರನ್‌ಗಳು ಸಾಧಾರಣ ಗೆಲುವಿನ ಮೊತ್ತವಾಗಿ ಪರಿಗಣಿಸಬಹುದಾಗಿದೆ.

#TEAM INDIA #PERFORMECE #NEWZEALAND #BIG SCORE #SHUBHMAN GILL #ISHANT KISHAN #VIRAT KOHLI #WIN

More News