ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಧಾನ ಸಭಾ ಚುನಾವಣೆಯ ಪೂರ್ವ ತಯಾರಿಗಾಗಿ ಆಗಮಿಸುತ್ತಿರುವ ಪ್ರಧಾನಿಯವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಕರ್ನಾಟಕ ರಾಜ್ಯದಲ್ಲಿನ 40% ಕಮಿಷನ್ ದಂಧೆ ಹಾಗೂ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಾರೆ.
ಟ್ವೀಟ್ ಮೂಲಕ ಪ್ರಶ್ನಿಸಿದ ಅವರು ಇವುಗಳನ್ನು ಸರಿಪಡಿಸಲು ಆಗ್ರಹಿಸಿದ್ದಾರಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯಬೇಕು ಮೋದಿ ಎಂದು ಅವರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಹೊಣೆಗೇಡಿತನದಿಂದ ನಾಡಿಗೆ ಬೆಳಕು ಕೊಟ್ಟ ಲಕ್ಷಾಂತರ ಮಂದಿಯ ಬಾಳು ಕತ್ತಲಾಗಿದೆ. ಶರಾವತಿ ಸಂತ್ರಸ್ಥ ಕುಟುಂಬಗಳ ಸಮಸ್ಯೆಗೆ ಸ್ಪಂದಿಸಿ ಪ್ರಧಾನಿಗಳೇ ಎಂದು ಆಗ್ರಹಿಸಿದ್ದಾರೆ.

ಕನ್ನಡ ನಾಡಿನ ಹೆಮ್ಮೆಯ ನಂದಿನಿ ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಕಣ್ಣು ಬಿದ್ದಿದೆ. ನಮ್ಮ ರೈತರ ಅನ್ನದ ತಟ್ಟೆಗೆ ಮಣ್ಮು ಹಾಕುವ ವ್ಯಾಪಾರಿ ಬುದ್ದಿ ಸಾಕು ಮಾಡಿ ಪ್ರಧಾನಿಗಳೇ, ನ್ಯಾಯಬೇಕು ಮೋದಿ ಎಂದು ಆಗ್ರಹಿಸಿದ್ದಾರೆ.

ಪರೇಶ್ ಮೆಹ್ತಾನ ಸಾವನ್ನೂ ತನ್ನ ಭರ್ಜರಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ಬಿಜೆಪಿ. ಈಗ ಈತನ ವಯೋವೃದ್ಧ ತಂದೆ ತಾಯಿ ಕುಟುಂಬಕ್ಕೆ ನ್ಯಾಯಬೇಕು ನ್ಯಾಯಬೇಕು ಮೋದಿ ಎಂದು ಆಗ್ರಹಿಸಿದ್ದಾರೆ.

ಕೆ ಆರ್ ಪುರಂ ಇನ್ಸಪೆಕ್ಟರ್ ನಂದೀಶ್ 80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಪಡೆದು ಬಂದ ಕಾರಣಕ್ಕೆ ಒತ್ತಡದಿಂದ ಸತ್ತಿದ್ದಾರೆ. ಎಂದು ಸ್ವತಹ ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇತತರರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಹೀಗಾದರೆ ಸಾಮಾನ್ಯರ ಗತಿ ಏನು ಮೋದಿ ಅವರೇ.

ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆಗಳ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ಬಿಲ್ ಹಣ ನೀಡದೇ ಇರುವುದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈತನಿಗೆ ನ್ಯಾಯ ಕೊಡಿಸಿ, ಪ್ರಾಣ ಉಳಿಸಬೇಕಾದವರು ನೀವಲ್ಲವೇ ಮೋದಿ ಅವರೇ.


#NEED JUSTICE MODI #SIDDARAMAIAH #PRIME MINISTER #NARENDRA MODI #FORMER CHIEF MINISTER #OPPOSITION LEADER #40%COMMISSION #JUSTICE #AMUL #NANDHINI #MILK




