ACTRESS JACQUELINE FERNANDEZ : ವಂಚಕ ಸುಕೇಶ್ ನನ್ನ ಜೀವನ ಹಾಳು ಮಾಡಿದ: ದೆಹಲಿ ಕೋರ್ಟ್ ಎದುರು ಜಾಕ್ವಲೀನ್ ಗೋಳಾಟ

ವಂಚಕ ಸುಕೇಶ್ ಕೊಟ್ಟ ಗಿಪ್ಟ್ ಗಳ ಪಟ್ಟಿಯನ್ನು ದೆಹಲಿ ಕೋರ್ಟ್ ಮುಂದೆ ಬಿಚ್ಚಿಟ್ಟ ರಕ್ಕಮ್ಮ.. ಸುಕೇಶ್ ನನ್ನ ಜೀವನ ಹಾಳು ಮಾಡಿದ, ನರಕ ಮಾಡಿದ ಎಂದು ನೋವು ತೋಡಿಕೊಂಡಿದ್ದಾರೆ.

ವಂಚಕ ಸುಕೇಶ್ ಜೊತೆ ಸೇರಿ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್​​ ಫರ್ನಾಂಡಿಸ್​​ಗೆ ಸಂಕಷ್ಟ ಎದುರಾಗಿದೆ. ವಂಚಕ ಸುಕೇಶ್ ಜೊತೆ ಆಪ್ತವಾಗಿದ್ದ ಕಾರಣಕ್ಕೆ ಅವರು ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇಂದು ದೆಹಲಿ ಕೋರ್ಟ್​ಗೆ ಹಾಜರಾದ ನಟಿ, ಸುಕೇಶ್ ಜೊತೆಗಿನ ನಂಟಿನ ಸಂಕಟದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಏನದು ಜಾಕ್ವಲೀನ್ ಹೇಳಿಕೆ..?
ಸುಕೇಶ್ ಚಂದ್ರಶೇಖರ್ ಸಹಚರೆ ಪಿಂಕಿ ಇರಾನಿಯಿಂದ ನನಗೆ ಆತನ ಪರಿಚಯ ಆಗಿತ್ತು. ಸರ್ಕಾರಿ ಅಧಿಕಾರಿ ಎಂದು ಸುಕೇಶ್​​ನನ್ನು ಪಿಂಕಿ ಪರಿಚಯಿಸಿದ್ದಳು. ‘ನಾನು ಸನ್ ಟಿವಿ ಮಾಲೀಕ. ಜಯಲಲಿತಾ ತನ್ನ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ. ನಾನು ನಿಮ್ಮ ದೊಡ್ಡ ಫ್ಯಾನ್ ಎಂದಿದ್ದ, ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದಕೊಂಡಿದ್ದನಂತೆ.

ಸನ್​ ಟಿವಿ ಮಾಲೀಕ ಆಗಿರುವುದರಿಂದ ಹಲವು ಪ್ರಾಜೆಕ್ಟ್​​ಗಳು ಲೈನಪ್​ ಆಗಿವೆ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು‌ ಎಂದು ಸುಕೇಶ್ ನನ್ನ ದಾರಿ ತಪ್ಪಿಸಿದ. ನನ್ನ ಜೀವನ ಹಾಗೂ ವೃತ್ತಿಜೀವನವನ್ನು ಆತ ಹಾಳು ಮಾಡಿದ. ಸುಕೇಶ್ ಅರೆಸ್ಟ್​ ಆದ ನಂತರವೇ ಆತನ ನಿಜವಾದ ಹೆಸರು ನನಗೆ ಗೊತ್ತಾಗಿತ್ತು.

ಆತ ಮಾಡುತ್ತಿದ್ದ ಕೆಲಸಗಳ ಬಗ್ಗೆ ಗೊತ್ತಾಯಿತು. ಪಿಂಕಿ ನನಗೆ ಮೋಸ ಮಾಡಿದಳು. ಆತನ ಹಿನ್ನೆಲೆ ಬಗ್ಗೆ ಪಿಂಕಿ ಎಂದಿಗೂ ಹೇಳಿಲ್ಲ. ಸುಕೇಶ್ ಹಿನ್ನಲೆ ಬಗ್ಗೆ ಆಕೆಗೆ ಗೊತ್ತಿತ್ತು ಎಂದು ಕೋರ್ಟ್ ಎದುರು ಜಾಕ್ವೆಲಿನ್ ಹೇಳಿದ್ದಾರೆ.

#Jacqueline Fernandez #actress #SUKESH CHANDRASHEKAR #CHEATER #200CRORE CHEAT #DELHI COURT #SUN TV #PINKI #JAYALALITHA #FORMER CM #TAMILNADU #RELATION

More News