ಬೆಂಗಳೂರು :ಜ.19: ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ಪ್ರಧಾನಿ ರಾಜ್ಯಕ್ಕೆ ಪದೇ ಪದೇ ಬರ್ತಾರೆ ಅದು ಗೊತ್ತಿರುವ ವಿಚಾರ. ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರಕ್ಕೆ ಬರ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹೆಸರು ಕೆಟ್ಟಿದೆ.
ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯ. ಬಿಜೆಪಿಗೆ ಒಂದೇ ಆಸರೆ ಅದು ಮೋದಿ ಅದಕ್ಕೆ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇದೆ. ಬಿಜೆಪಿಯಲ್ಲಿ ನಾಯಕತ್ವ ಇಲ್ಲ ಅದಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ಕುಹಕವಾಡಿದ್ರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ನಾಯಕತ್ವ ಇದೆ. ಹಿಂದೆ ಬಿಜೆಪಿಯಲ್ಲಿ ಯಡಿಯೂರಪ್ಪ ಇದ್ರು, ಈಗ ಯಾರಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ.

ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಪ್ರಧಾನಿ ಮೋಡಿ ನಡೆಯಲ್ಲ ಎಂದು ಎಂಬಿ ಪಾಟೀಲ್ ಕಿಡಿ ಕಾರಿದರು. ಬಿಜೆಪಿ ರಾಜ್ಯ ನಾಯಕರ ಬಳಿ ಯಾವುದೇ ಬಂಡವಾಳ ಇಲ್ಲ. 5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅಮಿತ್ ಶಾ, ಜೆಪಿ ನಡ್ಡಾ ಆಯ್ತು. ಮೋದಿಯವರ ಮೋಡಿ ಏನೂ ನಡೆಯಲ್ಲ. ರಾಜ್ಯ ನಾಯಕರಲ್ಲಿ ಮತ ಸೆಳೆಯುವ ಶಕ್ತಿ ಇಲ್ಲ. ಮೋದಿ ಬಂದ್ರೂ ಫರಕ್ ಆಗೋದಿಲ್ಲ. ಆದಿತ್ಯನಾಥ್ ಬಂದ್ರೂ ಫರಕ್ ಆಗೋದಿಲ್ಲ ಕಳೆದ ಬಾರಿಗಿಂತ ನಮ್ಮ ಸಾಧನೆ ಹೆಚ್ಚಲಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸಾಧನೆ ಮಾಡುತ್ತೇವೆ. ಖರ್ಗೆ ಕಲ್ಯಾಣ ಕರ್ನಾಟಕದ ಕಲ್ಪವೃಕ್ಷ, ಕಾಮಧೇನು ಇದ್ದಂತೆ ಎಂದು ಖರ್ಗೆಯನ್ನು ಹಾಡಿಹೊಗಳಿದರು.




