Yashpal Garg : ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ಬದುಕಿಸಿದ ಆರೋಗ್ಯ ಕಾರ್ಯದರ್ಶಿ

ಚಂಡೀಗಢ :ಜ.19: ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯ ಪ್ರಾಣವನ್ನು ಚಂಡೀಗಢ ಆರೋಗ್ಯ ಕಾರ್ಯದರ್ಶಿ ಯಶಪಾಲ್ ಗಾರ್ಗ್ ಉಳಿಸಿದ್ದಾರೆ. ವ್ಯಕ್ತಿಯ ಪ್ರಾಣವನ್ನು ಉಳಿಸೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ, ತಮ್ಮ ಕಚೇರಿಗೆ ಭೇಟಿಗೆ ಅಂತ ಬಂದಿದ್ದ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಕೂಡಲೇ ಆತನಿಗೆ ಪ್ರಥಮ ಚಿಕಿತ್ಸೆ ನೀಡೋ ಮೂಲಕ ಜೀವದಾನ ಮಾಡಿದ್ದಾರೆ.

ಚಂಡೀಗಢ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಜನಕ್ ಲಾಲ್ ಎಂಬ ವ್ಯಕ್ತಿ ತನ್ನ ವಿರುದ್ಧ ದಾಖಲಾಗಿದ್ದ ಕಟ್ಟಡ ಉಲ್ಲಂಘಟನೆಯ ದೂರಿನ ಬಗ್ಗೆ ಚರ್ಚಿಸಲು ಚಂಡೀಗಢ ಹೌಸಿಂಗ್ ಬೋರ್ಡ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಆತನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಕೂಡಲೇ ವ್ಯಕ್ತಿಯನ್ನು ಚೇರ್ ಮೇಲೆ ಕೂರಿಸಿದ್ದಾರೆ. ಅಲ್ಲೇ ಇದ್ದ ಚಂಡೀಗಢ ಹೌಸಿಂಗ್ ಬೋರ್ಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶಪಾಲ್ ಗಾರ್ಗ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

1 ನಿಮಿಷಗಳ ಕಾಲ ಎದೆಯನ್ನು ಜೋರಾಗಿ ಒತ್ತುವ ಮೂಲಕ ಗಾಳಿಯು ಹೃದಯಕ್ಕೆ ಹೋಗುವಂತೆ ಮಾಡಿದ್ದಾರೆ. ಬಳಿಕ ಆತನಿಗೆ ಪ್ರಜ್ಞೆ ಬಂದು ಸಾವಿನ ದವಡೆಯಿಂದ ಪಾರಾಗಿದ್ದಾನೆ. ನಂತ್ರ ಜನಕ್ ಲಾಲ್ ಎಂಬಾತವನ್ನು ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಐಎಎಸ್ ಅಧಿಕಾರಿ ಯಶಪಾಲ್ ಗಾರ್ಗ್ ಅವರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

More News