ಬೆಂಗಳೂರು :ಜ.20: ಕರ್ನಾಟಕ ವಿಧಾನಸಭೆ ಎಲೆಕ್ಷನ್ ಗೆ ಕೌಂಟ್ ಡೌನ್ ಶುರುವಾಗಿದೆ. ಶೀಘ್ರದಲ್ಲಿಯೇ ಎಲೆಕ್ಷನ್ ಕಮಿಷನ್ ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಲಿದೆ. ರಾಜಕೀಯ ಪಕ್ಷಗಳು ನಾ ಮುಂದೆ ತಾ ಮುಂದೆ ಅಂತಾ ಪೈಪೋಟಿಗೆ ಇಳಿದು ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.ಎಲ್ಲಾ ರಾಜಕೀಯ ನಾಯಕರು ಗೆಲ್ಲೋ ಕುದುರೆಗಳ ತಲಾಶ್ ನಡೆಸುತ್ತಿದ್ದಾರೆ. ಮತ್ತೊಂಡು ಕಡೆ ರಾಜಕೀಯ ನಾಯಕರು, ಮುಖಂಡರು ಪಕ್ಷಾಂತರ ಪರ್ವ ನಡೆಸಿದ್ದಾರೆ. ಹೀಗಿರುವಾಗ್ಲೆ ಹೈದ್ರಾಬಾದ್ ಮೂಲದ ಏಜೆನ್ಸಿಯೊಂದು ಸಮೀಕ್ಷಾ ವರದಿ ತಯಾರಿಸಿದ್ದು, ಈ ರಿಪೋರ್ಟ್ ನಲ್ಲಿ ಕರ್ನಾಟಕ ವಿಧಾನಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ವರದಿ ನೀಡಿದೆ. ಹೈದ್ರಬಾದ್ ಏಜೆನ್ಸಿಯ ಸಮೀಕ್ಷೆಯ ವರದಿ ಸಮೀಕ್ಷೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಈ ರಿಪೋರ್ಟ್ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗುತ್ತೆ
ಕಾಂಗ್ರೆಸ್ :108-114
ಬಿಜೆಪಿ: 65-76
ಜೆಡಿಎಸ್: 24-30
ಇತರೆ: 7


ನೆಕ್ ಟು ನೆಕ್ ಸ್ಪರ್ಧೆ: 10 ಸ್ಥಾನಗಳು
ಈ ಏಜೆನ್ಸಿಯ ಸಮೀಕ್ಷಾ ವರದಿಯ ಪ್ರಕಾರ ಕಾಂಗ್ರೆಸ್ 108-114 ಸ್ಥಾನ ಪಡೆಯೋ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇನ್ನು ಬಿಜೆಪಿ 65-76 ಸೀಟ್ ಗೆಲ್ಲುತ್ತೆ. ಜೆಡಿಎಸ್ 24-30 ಸ್ಥಾನ ಗೆಲ್ಲುತ್ತೆ. ಇತರರು 7 ಸ್ಥಾನದಲ್ಲಿ ಗೆದ್ದರೇ ನೇರಾ ನೇರಾ ಸ್ಪರ್ಧೆ 10 ಕ್ಷೇತ್ರಗಳಲ್ಲಿ ನಡೆಯಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಹಳೇ-ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ ಪ್ರಭಾವವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕರಾವಳಿ ಕರ್ನಾಟಕವನ್ನು ಬಿಜೆಪಿಯ ಭದ್ರಕೋಟೆ ಎಂದು ಸಮೀಕ್ಷಾ ವರದಿ ನೀಡಿದೆ.

3 ಹಂತಗಳಲ್ಲಿ ಎಲ್ಲಾ ಪ್ರದೇಶಗಳನ್ನು ಒಳಗೊಳ್ಳುವಂತೆ ಸಮೀಕ್ಷಾ ವರದಿಯನ್ನು ರೆಡಿ ಮಾಡಲಾಗಿದೆಯಂತೆ. 20.11.2022 ರಿಂದ 12.01.2023 ರವರೆಗೆ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪರ ಜನರು ಒಲವು ಹೊಂದಿದ್ದಾರಂತೆ. ಎಸ್.ಎ.ಎಸ್. ಗ್ರೂಪ್, ಹೈದರಾಬಾದ್ I.P.S.S ಜೊತೆಗೂಡಿ ಈ ಸಮೀಕ್ಷೆ ನಡೆದಿದೆ. ಯಾದೃಚ್ಛಿಕ ಮತ್ತು ಶ್ರೇಣೀಕೃತ (ಆಯ್ದ) ಮಾದರಿಗಳನ್ನು ಸಂಗ್ರಹಿಸುವ ಮೂಲಕ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.ಹೈದ್ರಾಬಾದ್ ಮೂಲಕ ಸಂಸ್ಥೆ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಸಮೀಕ್ಷೆ ನಡೆಸಿದೆ. ಆದ್ರೆ ಈ ಈ ಸರ್ವೆ ಬಗ್ಗೆ ಯಾವುದೇ ರೀತಿಯ ಸ್ಪಷ್ಟತೆ ಇಲ್ಲ. ಮತದಾರ ಪ್ರಭು ಯಾವ ಪಕ್ಷಕ್ಕೆ ಬಹುಪರಾಕ್ ಅಂತಾನೇ ಅನ್ನೋದು ನಿಜಕ್ಕೂ ಯಕ್ಷಪ್ರಶ್ನೆ. ಎಲೆಕ್ಷನ್ ಮುಗಿದು ರಿಸಲ್ಟ್ ಬರೋವರೆಗೂ ಎಲ್ಲಾ ಏನನ್ನು ಹೇಳೋಕೆ ಆಗೋದಿಲ್ಲ.ಕಾದು ನೋಡಬೇಕು ಅಷ್ಟೇ.




