Kantara Team : ದೈವದ ಕೋಲಕ್ಕೆ ಹರಕೆ ತೀರಿಸಿದ ಕಾಂತಾರ ತಂಡ

ಬೆಂಗಳೂರು :ಜ.20: ನಟ ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಕಾಂತಾರ ಸಿನಿಮಾ ಭಾರಿ ಯಶಸ್ಸು ಕಂಡ ಹಿನ್ನಲೆಯಲ್ಲಿ ಸಿನಿಮಾ ತಂಡದ ಜೊತೆಗೆ ದೇವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ಕಾಂತಾರ ಕನ್ನಡದಲ್ಲಿ ಭಾರೀ ಹೆಸರು ಮಾಡಿತು. ಸಿನಿಮಾ ತೆಲುಗು, ತಮಿಳು, ಮಲೆಯಾಳಂ ನಲ್ಲಿ ಡಬ್ ಆಗಿ ಬಿಡುಗಡೆ ಕಂಡು, ಪ್ರೇಕ್ಷಕರಿಂದ ವ್ಹಾರೆ ವ್ಹಾ ಎನಿಸಿಕೊಂಡಿತ್ತು. ಇದೇ ಸಂದರ್ಭದಲ್ಲಿ ಬಾಲಿವುಡ್ ಗೂ ಲಗ್ಗೆ ಇಟ್ಟಿದ್ದ ಸಿನಿಮಾ ಬಾಕ್ಸ್ ಆಪೀಸ್ ನಲ್ಲಿ ದೂಳೆಬ್ಬಿಸಿತು. ಅನೇಕರು ಸಿನಿಮಾ ಬಗ್ಗೆ ವಿಮರ್ಶೆ ಬರೆದರು. ಕೊಂಡಾಡಿದರು..

ಅಷ್ಟೇ ಅಲ್ಲ, ಹಲವಾರು ಭಾಷೆಗಳಲ್ಲಿ ತೆರೆ ಕಂಡ ಸಿನಿಮಾವು ಕಾನೂನು ಹೋರಾಟವನ್ನೂ ಎದುರಿಸಬೇಕಾಯಿತು. ಸಿನಿಮಾದ ವರಹಾ ರೂಪಂ ಹಾಡು ಕಾಫಿ ಮಾಡಲಾಗಿದೆ ಎಂದು ಮಲೆಯಾಳಂ ಮೂಲದ ಸಂಸ್ಥೆಯೊಂದು ಕೇಸ್ ದಾಖಲಿಸಿದ್ದರು. ಆಗ ಬಹಳಷ್ಟು ವಾದ – ವಿವಾದಗಳು ನಡೆದವು. ಇನ್ನೂ, ಈ ಸಿನಿಮಾ ಕೋಲ ಧರ್ಮದ ಭಾಗವಲ್ಲ ಎಂಬ ಚರ್ಚೆಗಳು ಸಹ ನಡೆದವು. ಅದೂ ವಿವಾದಕ್ಕೀಡಾಯಿತು.


ಇವುಗಳೆಲ್ಲವ ನಡುವೆಯೇ ಸಿನಿಮಾ ಭಾರಿ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದು ಒಂದು ರೋಚಕ ಜಯವಾಗಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಅನೇಕ ವಿವಾದಗಳ ನಡುವೆಯೇ ಆಸ್ಕರ್ ಅಂಗಳಕ್ಕೆ ಬಂದು ತಲುಪಿದೆ. ಇದರ ಮಧ್ಯೆ ಕಾಂತಾರ’ ಚಿತ್ರದ ಯಶಸ್ಸಿನ ನಂತರ ಮಂಗಳೂರು ಭಾಗದ ಪಂಜುರ್ಲಿ ಕೋಲಾಗೆ ಹರಕೆ ತೀರಿಸಲಾಗಿತ್ತು‌. ಈ ವೇಳೆ ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು, ಸಪ್ತಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಹರಕೆ ತೀರಿಸುವ ಸಂದರ್ಭವನ್ನು ಹಂಚಿಕೊಂಡಿರುವ ಹೊಂಬಾಳೆ ತಂಡವು, ಸಾಮಾಜಿಕ ಜಾಲತಾಣದಲ್ಲಿ ವರಾಹ ರೂಪಂ ಸಿನಿಮಾದ ಹಾಡನ್ನು ಬಳಸಿಕೊಂಡು ಹರಕೆ ತೀರಿಸುತ್ತಿರುವ ವಿಡಿಯೋ ಸಹ ಅಪ್ಲೋಡ್ ಮಾಡಲಾಗಿದೆ. ಮನುಷ್ಯ ಜೀವನದಲ್ಲಿ ಪ್ರಕೃತಿಗೆ ಶರಣಾಗಲೇಬೇಕು. ಆಗ ಯಶಸ್ಸು ಮತ್ತು ಸ್ವಾತಂತ್ರ್ಯ ಸಿಗುತ್ತದೆ. ಅವೆಲ್ಲವೂ ನಿಮಗೆ ನೀಡಿದ ದೇವರನ್ನು ಆರಾಧಿಸಿ ಎಂದು ಬರೆದುಕೊಂಡಿರುವ ಚಿತ್ರತಂಡ, ನಮ್ಮ ತಂಡಕ್ಕೆ ದೈವದ ನಿಜವಾದ ದರ್ಶನವಾಯಿತು. ನಾವೆಲ್ಲರೂ ದೈವದ ದರ್ಶನ ಪಡೆದವು ಎಂದು ಬರೆದುಕೊಂಡಿದ್ದಾರೆ.

More News