ANJANEYASWAMI BLESSINGS ..? ಮಾಜಿ ಸಚಿವ ಜನಾರ್ಧನರೆಡ್ಡಿಗೆ ವರ ನೀಡಿದ್ರಾ ಆಂಜನೇಯ..?

ಕೊಪ್ಪಳ : ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP)ದ ಸಂಸ್ಥಾಪಕ ಜನಾರ್ಧನ ರೆಡ್ಡಿ ಹನುಮ ಜನ್ಮಸ್ಥಾನದಿಂದಲೇ ಒಲಿಯಲಿದೇಯಾ ಜಯ.? ಎಂಬ ಪ್ರಶ್ನೆ ಕಾಡಲು ಪ್ರಾರಂಭವಾಗುತ್ತಿದೆ.
ಗಂಗಾವತಿಯ ಜಬ್ಬಲಗುಡ್ಡ ಗ್ರಾಮದ ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ ಜನಾರ್ಧನ ರೆಡ್ಡಿ ಅವರಿಗೆ ದೇವರ ಹೊವಿನ ಪ್ರಸಾದ ದೊರೆತಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವಾಗ ಬಲಗಡೆಯಿಂದ ಹೂವಿನ ಹಾರ ಬಿದ್ದಿದೆ. ಇದು ಶುಭ ಸೂಚನೆ ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ. ಜನಾರ್ಧನರೆಡ್ಡಿಗೆ ಹೂವಿನ ಹಾರದ ಪ್ರಸಾದವನ್ನು ಆಂಜನೇಯಸ್ವಾಮಿ ನೀಡಿದೆ, ಇದು ಅವರಿಗೆ ಸಿಕ್ಕ ಮೊದಲ ಜಯ ಎನ್ನುತ್ತಿದ್ದಾರೆ ಸ್ಥಳೀಯರು.

ಗರ್ಭಗುಡಿಯಲ್ಲಿ ರೆಡ್ಡಿ ವಿಶೇಷ ಪೂಜೆ ಸಲ್ಲಿಸುವಾಗ ಈ ಘಟನೆ ನಡೆದಿದ್ದು, ನಂತರ ರೆಡ್ಡಿ, ಹೂವಿನ ಹಾರ ಸ್ವೀಕರಿಸಿ ದೇವರಿಗೆ ನಮಸ್ಕರಿಸಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕೆಆರ್ ಪಿ ಪಿ ಅಭ್ಯರ್ಥಿಯಾಗಿರುವ ಜನಾರ್ಧನರೆಡ್ಡಿ, ಕಳೆದೆರೆಡು ದಿನಗಳಿಂದ ಗಂಗಾವತಿ ಕ್ಷೇತ್ರದ್ಯಾಂತ ಮಿಂಚಿನ ಸಂಚಾರ ಆರಂಭಿಸಿದ್ದಾರೆ.

#KARNATAKA RAJYA PRAGATHI PAKSHA #KRPP #JANARDHANA REDDY #FORMER MINISTER #GANGAWATHI #ASSEMBLY #ANJANEYASWAMI TEMPLE #BLESSINGS #FLOWER

More News