Rishi Sunak : ಸೀಟ್ ಬೆಲ್ಟ್ ಧರಿಸದೇ ಕಾರಿನಲ್ಲಿ ಪ್ರಯಾಣ : ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೆ ದಂಡ

ಬ್ರಿಟನ್ :ಜ.21: ನಮ್ಮ ದೇಶದಲ್ಲಿ ಟ್ರಾಫಿಕ್ ರೂಲ್ಸ್ ಅಂದ್ರೆ ಬಹುತೇಕ ಜನರಿಗೆ ಕೇರ್ ಲೆಸ್. ಒಂದು ವೇಳೆ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಯಾರಾದ್ರೂ ಪೊಲಿಟಿಕಲ್ ಲೀಡಲ್ ಅಥವಾ ಪೊಲೀಸ್ ಅಧಿಕಾರಿಗಳ ಲಿಂಕ್ ಇದ್ದರೇ ಸಾಕು ಅವರಿಗೆ ಒಂದು ಫೋನ್ ಕಾಲ್ ಮಾಡಿಸಿ ದಂಡ ಹಾಕಲು ಮುಂದಾದವರಿಗೆ ಆವಾಜ್ ಹಾಕಿ ಹೋಗ್ತಾರೆ. ಆದ್ರೆ ಬ್ರಿಟನ್ ನಲ್ಲಿ ಹಾಗಲ್ಲಾ ಸಾಮಾನ್ಯ ಪ್ರಜೆಗೂ ಒಂದು ರೂಲ್ಸ್ ಅದು ಪ್ರಧಾನಿ ಆದ್ರೂ ಕೂಡ ಒಂದೇ ರೂಲ್ಸ್. ಹೌದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಸಲುವಾಗಿ ಕ್ಷಣ ಕಾಲ ಕಾರಿನ ಸೀಟ್ ಬೆಲ್ಟ್ ಧರಿಸದೇ ಕೂತಿದ್ದರು.

ಇದು ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಖುದ್ದು ಬ್ರಿಟನ್ ಪ್ರಧಾನಿ ಕಾರ್ಯಾಲಯವೇ ತಪ್ಪಾಗಿದೆ ಎಂದು ಕ್ಷಮೆ ಕೂಡ ಕೇಳಿತ್ತು. ಈಗ ಬ್ರಿಟನ್ ಪೊಲೀಸರು ಬ್ರಿಟನ್ ಪ್ರಧಾನಿಗೆ ಸೀಟ್ ಬೆಲ್ಟ್ ಧರಿಸದೇ ಕಾರಿನಲ್ಲಿ ಪ್ರಯಾಣ ಮಾಡಿದ್ದಕ್ಕಾಗಿ ಪ್ರಧಾನಿ ಆಗಿರೋ ರಿಷಿ ಸುನಕ್ ಗೆ ದಂಡ ವಿಧಿಸಿದ್ದಾರೆ. ಸ್ಥಳದಲ್ಲಿಯೇ ದಂಡ ವಿಧಿಸಿದ್ರೆ 100 ಪೌಂಡ್ ಪಾವತಿಸಬೇಕಾಗುತ್ತೆ. ಇದೇ ವಿಚಾರ ಕೋರ್ಟ್ ಮೆಟ್ಟಿಲೇರಿದ್ರೆ 500 ಪೌಂಡ್ ದಂಡ ವಿಧಿಸಲಾಗುತ್ತೆ. ಇನ್ನು ರಿಷಿ ಸುನಕ್ ದಂಡವನ್ನು ಖಂಡಿತವಾಗಿ ಪಾವತಿ ಮಾಡ್ತಾರೆಂದು ಅವರ ವಕ್ತಾರರು ಮಾಹಿತಿ ನೀಡಿದ್ದಾರೆ.

More News