WAR BETWEEN CONG-BJP: ಬಿಜೆಪಿ ಕಾಂಗ್ರೆಸ್ ನಡುವಿನ ಟ್ವೀಟ್ ಸಮರ: ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಮೊದಲು ಉತ್ತರ ನೀಡಿ ಬಿಜೆಪಿಯಿಂದ ಆಗ್ರಹ

ಬೆಂಗಳೂರು : ರಾಜ್ಯ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಬೆಂಗಳೂರು ನಗರದಲ್ಲಿ ಸುಮಾರು 200 ಕಡೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ. ಟ್ವೀಟ್ ಮಾಡಿರುವ ಸಂಪೂರ್ಣ ವಿವರ ಹೀಗಿದೆ.
ರಾಜ್ಯದಲ್ಲಿ 2013ರಲ್ಲಿ @INCKarnataka ಅಧಿಕಾರದ ಗದ್ದುಗೆ ಏರಿದ್ದೇ @INCIndia ಪಾಲಿಗೆ ಎಟಿಎಂ ಆಗಿತ್ತು. ಇಳಿಜಾರಿನಲ್ಲಿ ಕಾಲಿಟ್ಟ ಪಕ್ಷಕ್ಕೆ ಅಹರ್ನಿಶಿ ಸಂಪನ್ಮೂಲ ಒದಗಿಸುತ್ತಿದ್ದ @siddaramaiah ಹೈ ಕಮಾಂಡ್‌ಗೆ 1000 ಕೋಟಿ ರೂ. ಕಳುಹಿಸಿದ ಬಗ್ಗೆ ಗೋವಿಂದರಾಜು ಆಪ್ತರ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸಾಕ್ಷಿಯಿದೆ #CorruptCongress ಎಂದು ಹ್ಯಾಷ್ ಟ್ಯಾಗ್ ಬಳಸಿ ಆರೋಪಿಸಿದಲ್ಲದೆ, ಕೆಲವು ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ನಂತರ ಪ್ರತಿಭಟನೆ ಮಾಡಿ ಎಂದು ಟ್ವೀಟ್ ಮಾಡಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್‌ಗಳಿಗೆ ಹಾಸಿಗೆ-ದಿಂಬು ಖರೀದಿಯಲ್ಲೂ @siddaramaiah ಸರ್ಕಾರ ನೋಡಿದ್ದು ಹಣ ಕಬಳಿಸುವ ದಾರಿಯನ್ನೇ. 14 ಕೋಟಿ ರೂ. ಆ ರೀತಿ ನುಂಗಿದರೆ ಆಹಾರ ಪೂರೈಕೆ ಗುತ್ತಿಗೆಗೆ ಎಚ್.‌ ಆಂಜನೇಯ ಪತ್ನಿ 7 ಲಕ್ಷ ರೂ. ಲಂಚಕ್ಕೆ ಕೈ ಒಡ್ಡಿ ವೀಡಿಯೋ ಸಹಿತ ಸಿಕ್ಕುಬಿದ್ದರು.
ಇವು ಕೇವಲ ಸ್ಯಾಂಪಲ್‌ಗಳು. ಇಂಥ ಘನಂದಾರಿ ಕೆಲಸ ಮಾಡಿದ @INCKarnataka ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಯಾವ ನೈತಿಕತೆಯೂ ಉಳಿದಿಲ್ಲದ ಕೈ ನಾಯಕರು ಆಡುವ ಮಾತಿಗೆ ಆಧಾರಗಳೂ ಕೊಡುತ್ತಿಲ್ಲ. ಸುಳ್ಳನ್ನೇ ನೂರು ಬಾರಿ ಗಟ್ಟಿಯಾಗಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಹಳೇ ಸೂತ್ರದಲ್ಲೇ ಇದ್ದಾರೆ.

ಸೋಲಾರ್ ಹಗರಣದ ರೂವಾರಿ ಯಾರು? ಸೌರ ವಿದ್ಯುತ್‌ ಹೆಸರಲ್ಲಿ @DKShivakumar ತಂತ್ರಜ್ಞಾನವನ್ನೇ ಮೀರಿಸುವಂತೆ ಭ್ರಷ್ಟಾಚಾರ ನಡೆಸಿದ್ದರು. ಇದಕ್ಕೆ ಮೊದಲು ಉತ್ತರಿಸಿ ನಂತರ ಪ್ರತಿಭಟಿಸಿ ಎಂದು ಆಕ್ರೋಶ ಹೊರಹಾಕಿದೆ.

ಆ ವೇಳೆ @laxmi_hebbalkar ಅವರ ತಾಯಿ ಹಾಗೂ ಸಹೋದರನ ಹೆಸರಲ್ಲೂ ಟೆಂಡರ್‌ ಮಾಡಿಸಿದ @DKShivakumar ಬೇನಾಮಿ ವ್ಯವಹಾರದ ಎಕ್ಸ್‌ಪರ್ಟ್‌. ಈಗಲೂ ತಾವು ಇಡಿ ಕರೆದಾಗ ಪಿಕ್ನಿಕ್‌ ರೀತಿ ಹೋಗಿ ಮಾಧ್ಯಮಗಳ ಮುಂದೆ ಅವಲತ್ತುಕೊಳ್ಳುತ್ತಾರೆಯೇ ವಿನಃ ಆರೋಪ ಅಲ್ಲಗಳೆಯುವ ಯಾವುದೇ ಸಾಕ್ಷ್ಯ ಒದಗಿಸಿಲ್ಲ.

ಇವು ಕೇವಲ ಸ್ಯಾಂಪಲ್‌ಗಳು. ಇಂಥ ಘನಂದಾರಿ ಕೆಲಸ ಮಾಡಿದ @INCKarnataka ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಯಾವ ನೈತಿಕತೆಯೂ ಉಳಿದಿಲ್ಲದ ಕೈ ನಾಯಕರು ಆಡುವ ಮಾತಿಗೆ ಆಧಾರಗಳೂ ಕೊಡುತ್ತಿಲ್ಲ, ಸುಳ್ಳನ್ನೇ ನೂರು ಬಾರಿ ಗಟ್ಟಿಯಾಗಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಹಳೇ ಸೂತ್ರದಲ್ಲೇ ಇದ್ದಾರೆ ಎಂದು ತಿರುಗೇಟು ನೀಡಿದೆ.

More News