Shehnaz Gill : ಸಂತಾನೋತ್ಪತ್ತಿ ಪಾಠ ಪ್ರ್ಯಾಕ್ಟಿಕಲ್ ಮಾಡಿ ಅಂದ್ರೆ ಶಟಾಪ್ ಅಂದ್ರು ಮೇಡಂ: ಶೆಹನಾಜ್ ಗಿಲ್

ಬೆಂಗಳೂರು.ಜ.23: ಟೀಚರ್ ಸಂತಾನೋತ್ಪತ್ತಿ ಬಗ್ಗೆ ಪಾಠ ಮಾಡುತ್ತಿದ್ದರು. ಮೇಡಂ ಪ್ರ್ಯಾಕ್ಟಿಕಲ್ ಮಾಡ್ಬಹುದೇ ಎಂದು ನಾನು ಕೇಳಿದ್ದೆ ಆಗ ಮೇಡಂ ನನಗೆ ಶಟಾಪ್ ಎಂದಿದ್ರು ಎಂದು ಬಾಲಿವುಡ್ ನಟಿ ಶೆಹನಾಜ್ ಗಿಲ್ ತಮ್ಮ ಚೈಲ್ಡ್ ವುಡ್ ಘಟನೆಯನ್ನು ಮೆಲುಕು ಹಾಕಿದರು.

ಬಾಲಿವುಡ್ ನ ಇಬ್ಬರು ನಟಿಯರಾದ ಶೆಹನಾಜ್ ಗಿಲ್ ಮತ್ತು ನಟಿ ರಾಖುಲ್ ಪ್ರೀತ್ ಸಿಂಗ್ ನಡುವೆ ಲೈಂಗಿಕ ಶಿಕ್ಷಣ ಸಾಮಾನ್ಯೀಕರಿಸುವ ಪ್ರಾಮುಖ್ಯತೆಯ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಈ ವೇಳೆ ಮಾತನಾಡಿದ ನಟಿ, ಶೆಹನಾಜ್, ಲೈಂಗಿಕ ಶಿಕ್ಷಣ ದ ವಿಚಾರವನ್ನು ಜನ ಸಾಮಾನ್ಯವಾಗಿ ತೆಗೆದುಕೊಳ್ಳಬೇಕಿದೆ. ಮುಖ್ಯವಾಗಿ ಲೈಂಗಿಕ ಶಿಕ್ಷಣ ವನ್ನು ಮಕ್ಕಳಿಗೆ ನೀಡಬೇಕು.. ಅದರ ಪ್ರಾಮುಖ್ಯತೆ ನ್ನು ತಿಳಿಸಬೇಕಿದೆ ಎಂದು ತಿಳಸಿದರು.

ಸಂದರ್ಶನದಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆ ಕುರಿತು ಮಾತನಾಡಿದ ನಟಿ ಶೆಹನಾಜ್ ಗಿಲ್, ನಾನು ನನ್ನ ತಾಯಿಯನ್ನು ಕೇಳ್ತಿದ್ದೆ ನಾನು ಎಲ್ಲಿಂದ ಬಂದೆ ಅಮ್ಮಾ ಎಂದು. ನನ್ನ ತಾಯಿ‌ ಹೇಳುತ್ತಿದ್ದರು.. ಮಹಡಿಯ ಮೇಲೆ ಹೋಗಿ ನಂಗೊಂದು ಮುದ್ದಾದ ಮಗು ಬೇಕು ಎಂದು ಕೇಳಿದೆ.. ಆಗ ನೀನು ಮೇಲಿಂದ ಬಂದು ಬಿಟ್ಟೆ ನನ್ನ ಮಡಿಲಿಗೆ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಮಹಡಿಯ ಮೇಲೆ ಹೋಗೋದಕ್ಕೇ ಭಯ ಆಗುತ್ತಿತ್ತು.. ಮೇಲೆ ಹೋದ್ರೆ ನನಗೂ ಮಗು ಆಗ್ಬಿಡುತ್ತೆ.. ನನ್ನನ್ನ ಎಲ್ಲರೂ ಅವಮಾನ ಮಾಡ್ತಾರೆ ಎಂದು ಭಯ ಆಗ್ಬಿಡ್ತಿತ್ತು. ಎಂದು ಮೆಲುಕು ಹಾಕಿದರು.

ಮುಂದುವರೆದು ಮಾತನಾಡಿದ ನಟಿ, ನನಗೆ ವಿಜ್ಞಾನ ವಿಭಾಗದಲ್ಲಿ ಸಂತಾನೋತ್ಪತ್ತಿ ಪಾಠ ಕೇಳಿ ಬಹಳ ಖುಷಿ ಆಗ್ತಿತ್ತು. ಅದು ನನಗೆ ಇಷ್ಟದ ಟಾಪಿಕ್ ಆಗಿತ್ತು. ಒಮ್ಮೆ ತರಗತಿಯಲ್ಲಿ ಸಂತಾನೋತ್ಪತ್ತಿ ಕುರಿತು ಪಾಠ ಮಾಡುತ್ತಿದ್ದರು ಮೇಡಂ ಒಬ್ಬರು. ಮೇಡಂ ಇದನ್ನು ನಾವು ಪ್ರ್ಯಾಕ್ಟಿಕಲ್ ಮಾಡ್ಬಹುದಾ ಎಂದು ಕೇಳಿದ್ದೆ. ಅದಕ್ಕೆ ಮೇಡಂ ಶಟಾಪ್ ಎಂದಿದ್ದರು. ಆದರೆ ನನಗೆ ಅನಿಸೋದು ಎಲ್ಲಾ ವಿಚಾರಗಳನ್ನು ನಾವು ಸುಲಭವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

More News