ಬೆಂಗಳೂರು :ಜ.24: ಚಿತ್ರರಂಗದಲ್ಲಿ ದೊಡ್ಡ ಗ್ಯಾಪ್‌ಇದೆ.. ಎಲ್ಲರೂ ಸೇರಿ ಮಾತನಾಡುವ ಸಂಸ್ಕೃತಿ ಹಿರಿಯ ಕಲಾವಿದರ ಕಾಲಕ್ಕೆ ಹೊರಟುಹೋಯ್ತು.. ಈಗ ಏನಿದ್ರೂ ಸ್ಟಾರ್ ಡಮ್.. ನಾನೇ ಹೆಚ್ಚು, ಇಲ್ಲ ನಾನ್ ಹೆಚ್ಚು ಎಂಬ ಗಲಾಟೆ ಮನಸ್ಥಾಪದಲ್ಲೇ ಕನ್ನಡ ಸಿನಿ ಇಂಡಸ್ಟ್ರಿ ಮುಳುಗ್ಬಿಟ್ಟಿದೆ ಎಂಬ ಗಾಂಧಿ ನಗರದ ಗಾಸಿಪ್ ಗಳಿಗೆ ನಟ ಸುದೀಪ್ ಹೌದೆಂದು ಕತ್ತಾಡ್ಸಿದ್ದಾರೆ.






ಕರ್ನಾಟಕ ಚಲನಚಿತ್ರ ಕಪ್’ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಮ್ಮ ಇಂಡಸ್ಟ್ರಿ ಯಲ್ಲಿ ಚಿಕ್ಕದೊಂದು ಗ್ಯಾಪ್ ಇದೆ. ನಾವೆಲ್ಲರೂ ಸೇರುವುದಕ್ಕೆ ಒಂದು ಪ್ಲ್ಯಾಟ್ ಫಾರ್ಮ್ ಇಲ್ಲ ಎಂದು ವೇದಿಕೆ ಮೇಲೆ ನಟ ಸುದೀಪ್ ಮಾತನಾಡಿದ್ದಾರೆ..


ಕೋವಿಡ್ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ `ಕರ್ನಾಟಕ ಚಲನಚಿತ್ರ ಕಪ್’ ಈಗ ಚಾಲನೆ ಸಿಕ್ಕಿದೆ. ಕಳೆದ ಎರಡು ಸೀಸನ್‌ಗಳಲ್ಲಿ ಹಲವರು ಕೆಸಿಸಿಯಲ್ಲಿ ಆಡಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿಲ್ಲ. ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತಾಡ್ತಾ ಉತ್ತರಿಸಿದ ನಟ ಸುದೀಪ್, ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ ಎಂದರು.


ಹಾಗೇ ಮುಂದುವರಿದು ಮಾತನಾಡಿದ ಅವರು, ನಮ್ಮ ಇಂಡಸ್ಟ್ರಿ ಯಲ್ಲಿ ಚಿಕ್ಕದೊಂದು ಗ್ಯಾಪ್ ಇದೆ. ನಾವೆಲ್ಲರೂ ಸೇರುವುದಕ್ಕೆ ಒಂದು ಪ್ಲ್ಯಾಟ್ ಫಾರ್ಮ್ ಇಲ್ಲ. ಚಿತ್ರರಂಗ ಎಂದರೆ ನನ್ನ ಪ್ರಕಾರ ಬರೀ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು ಮಾತ್ರ ಅಲ್ಲ. ಸಿನಿಮಾದಲ್ಲಿ ಕೆಲಸ ಮಾಡೋ ಯಾರಾದರೂ ಆಗಿರ್ಬಹುದು ಉದಾಹರಣೆಗೆ ಟೆಕ್ನಿಷಿಯನ್ಸ್, ನಾನ್ ಟೆಕ್ನಿಷಿಯನ್ಸ್, ಎಗ್ಸಿಕ್ಯೂಟರ್, ಡಿಸ್ಟ್ರಿಬ್ಯೂಟರ್ ಎಲ್ಲರೂ ಸೇರಿದರೆನೇ ಒಂದು ಚಿತ್ರರಂಗ ಎಂದಿದ್ದಾರೆ.

ಇತ್ತೀಚೆಗೆ ಅಷ್ಟೇ ಹಿರಿಯ ಕಲಾವಿದೆ ಭಾವನ ಸಹ ಸಂದರ್ಶನ ವೊಂದರಲ್ಲಿ ಚಿತ್ರ ರಂಗ ನಡುವಿನ ಗ್ಯಾಪ್ ಕುರಿತು ಬೇಸರ ವ್ಯಕ್ತಪಡಿಸಿದ್ದರು.. ಸ್ಟಾರ್ ನಟರು ಟೀಕೆಗೆ ಗುರಿಯಾದ್ರೆ ಅವರನ್ನು ಕಾಪಾಡಲು ಮಾರ್ಕೆಟಿಂಗ್ ಇರುತ್ತೆ.. ಅವರ ಮೇಲೆ ದಾಳಿಯಾದಾಗ ಬಚಾವಾಗ್ಬಹುದು.. ಆದರೆ ಮಹಿಳಾ ಕಲಾವಿದರು ಟೀಕೆಗೆ ಗುರಿಯಾದಾಗ ಅವರ ಪರ ನಿಲ್ಲಲು ಇಲ್ಲಿ ಯಾರಿದ್ದಾರೆ..? ಎಂದು ಪ್ರಶ್ನಿಸಿದ್ದರು. ಅಂಬರೀಶ್ ಅವರಿದ್ದ ಕಾಲದಲ್ಲಿ ಸ್ವಲ್ಪ ಕೂತು ಮಾತುಕತೆ ನಡೆಯುತ್ತಿತ್ತು.. ಈಗ ಆ ರೀತಿಯ ಒಗ್ಗಟ್ಟು ನಮ್ಮ ಕನ್ನಡ ಸಿನಿ ಇಂಡಸ್ಟ್ರಿ ಯಲ್ಲಿ ಇಲ್ಲ. ಇದರ ಬಗ್ಗೆ ಯೋಚಿಸ್ಬೇಕಿದೆ ಎಂದು ತಿಳಿಸಿದ್ದರು.
#KICHHASUDEEP #SANDALWOOD #KCC #KANNADA ACTORS #SUDEEP #SHIVANNA #DARSHAN #YASH #GANESH #RISHAB SHETTY #SAPTAMIGOWDA #KANNADAFILM #JAGGESH




