Home Minister : HDK ಮಾಡಿದ ‘ಹಾದಿ-ಬೀದಿ’ ಸರ್ಕಾರದ ಆರೋಪಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ತೀರುಗೆಟು..!

 ಬೆಂಗಳೂರು :ಜ.24: ಹಾದಿ-ಬೀದಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಏನೂ ಮಾಡಲು ಆಗದೆ ಇದ್ದವರು. ಯಾರ್.. ಯಾರೋ ಬೆಂಬಲದಿಂದ ಅಧಿಕಾರಕ್ಕೆ ಬಂದವರು. ರಾಜ್ಯದ ಜನರಿಗೆ ಏನೂ ಮಾಡದೇ ಅಧಿಕಾರದಿಂದ ಇಳಿದ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಏನೂ ಮಾತನಾಡಲ್ಲ ಎಂದ ಹೇಳಿದರು.

ಸರ್ಕಾರದ ಅಭಿವೃದ್ಧಿ ಬಗ್ಗೆ ಜನತೆಗೆ ಗೊತ್ತಿದೆ

ರಾಜ್ಯದ ಜನರಿಗೆ ಗೊತ್ತಿದೆ ಈ ಸರ್ಕಾರ ಏನೂ ಅಭಿವೃದ್ಧಿ ಮಾಡಿದೆ ಎಂದು. ಸ್ಯಾಂಟ್ರೋ ರವಿ ಹಗರಣದಲ್ಲಿ ಗೃಹ ಸಚಿವ ಮೇಲೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವರು, ನಾನು ಸ್ವಚ್ಚವಾಗಿದ್ದೇನೆ. ಯಾರ್ ಯಾರೋ ಬಂದು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಅದನ್ನು ಇಟ್ಟು ಕೊಂಡು ಆರೋಪ ಮಾಡಿದ್ರೆ ಹೇಗೆ. COD ತಂಡಕ್ಕೆ ತನಿಖೆಗೆ ಆದೇಶ ಮಾಡಿದ್ದೇವೆ. ಸ್ವಾತಂತ್ರ್ಯವಾಗಿ ತನಿಖೆ ಮಾಡಲು ಅವಕಾಶ ಕೊಟ್ಟಿದ್ದೇವೆ. ಯಾವ ಆಫೀಸರ್ ಗೆ ಬೆದರಿಕೆ ಹಾಕಿದ್ದಾರೆ. ಏನೂ ಮಾಹಿತಿ ಇದೆ ಎಂದು ತಿಳಿದು ತನಿಖೆ ಮಾಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ರು.

ಪೊಲೀಸ್ ಹಗರಣವನ್ಜು ತನಿಖೆಯನ್ನು ಸಿಒಡಿಗೆ ಕೊಟ್ಟಿದ್ವಿ. ಅದು ತನಿಖೆ ನಡೆದು ಕೆಲವರ ಬಂಧನ ಆಗಿದೆ. ಯಾರು ಹೊರಗಡೆ ಮಾತನಾಡುತ್ತಾರೆ ಅವರು ಸಾಕ್ಷಿ ಕೊಡಲಿ‌. ಯಾರು ಇಂತಹ ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ಇರಬಾರದು ಎಂದು ಹೇಳುತ್ತಾರೋ ಅವರು ದಾಖಲೆ ಕೊಡಲಿ. ಸ್ಯಾಂಟ್ರೋ ರವಿ 20 ವರ್ಷಗಳಿಂದ ಇದ್ದಾನೆ, ಈ ಬಗ್ಗೆಯೂ ತನಿಖೆ ಆಗುತ್ತಿದೆ. ಕೇಸ್ ಕೋರ್ಟ್ ನಲ್ಲಿ ಇರುವುದರಿಂದ ಗೃಹ ಸಚಿವರಾಗಿ ನಾನು ಏನೇ ಮಾತನಾಡಿದ್ರೂ ತಪ್ಪು ಆಗುತ್ತೆ.

ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ

ಮುಂದಿನ ಬಾರೀ ಚುನಾವಣೆಯಲ್ಲಿ ಸ್ಪರ್ಧಿಸೋ ವಿಚಾರವಾಗಿ ಮಾತನಾಡಿದ ಸಚಿವತು, ನಮ್ಮ ಪಕ್ಷ ಟಿಕೆಟ್ ಕೊಟ್ಟು ನಿಲ್ಲಲೇ ಬೇಕು ಅಂದ್ರೆ ನಿಲ್ಲುತ್ತೇನೆ. ಬೇಡ ಅಂದ್ರೆ ನಿಲ್ಲಲ್ಲ.ಸೈದ್ಧಾಂತಿಕವಾಗಿ ಬೆಳೆದವರು ನಾವು. ನಾಲ್ಕು ಬಾರೀ ಶಾಸಕ ಆದ್ರೂ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಆಗಾ ನಾನು ಏನೂ ಕೇಳಿರಲಿಲ್ಲ. ಈಗ ಕೊಟ್ಟಿದ್ದರೆ ಪಕ್ಷ ಏನೂ ತೀರ್ಮಾನ ಮಾಡುತ್ತೋ ಅದನ್ನು ಪಾಲಿಸುತ್ತೇವೆ. 9 ಬಾರೀ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು 4 ಬಾರೀ ಗೆದ್ದಿದ್ದೇನೆ. ಪೊಲೀಸ್ ಇಲಾಖೆ ಆದ್ಯತೆ ಕೊಡುತ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತಮಾಡಿದ ಗೃಹ ಸಚಿವರು, ಪೊಲೀಸ್ ಇಲಾಖೆಗೆ ಯಾವುದೇ ಸರ್ಕಾರ ಕೊಡದ ಆದ್ಯತೆ ನಮ್ಮ ಸರ್ಕಾರ ಕೊಟ್ಟಿದೆ. ಹಲವು ಪೊಲೀಸರಿಗೆ ಡಬ್ಬಲ್ ಬೆಡ್ ರೂಮ್ ಮನೆ ಕಟ್ಟಿಸಿಕೊಟ್ಟು ಕೀ ಕೂಡ ಕೊಟ್ಟಿದ್ದೇವೆ ಎಂದು ಹೇಳಿದರು.

More News