S S RAJAMOULI SAYS ‘BIG HUG’:ಹುಚ್ಚು ಅಭಿಮಾನಿಗಳಿಗೆ ದೊಡ್ಡ ಅಪ್ಪುಗೆ: ನಾಟು ನಾಟು ಹಾಡಿಗೆ ಆಸ್ಕರ್ ಹಿನ್ನಲೆ ರಾಜಮೌಳಿ ಭಾವುಕ

ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು.. ರಾಜಮೌಳಿ ನಿರ್ದೇಶನದ, ಚರಣ್, ಜೂನಿಯರ್ ಎನ್ ಟಿ ಆರ್ ನಟನೆಯ ಸಿನಿಮಾ ಸಿನಿ ಪ್ರಿಯರ ಎದೆಯಲ್ಲಿ ದಂಗಲ್ ಸೃಷ್ಟಿಸಿತ್ತು.. ಇದೀಗ ಈ ಸಿನಿಮಾದ ನಾಟು ನಾಟು ಹಾಡು ಹೊಸ ದಾಖಲೆ ಸೃಷ್ಟಿಸಿದೆ.

https://twitter.com/ssrajamouli/status/1617922197313683458?s=20&t=0CZ37qLrs3B1ADOhCocb5g

RRR ಸಿನಿಮಾದ ನಾಟು ನಾಟು ಹಾಡು ಇತ್ತೀಚೆಗೆ ಅಷ್ಟೇ ಗೋಲ್ಡನ್​ ಗ್ಲೋಬ್​ 2023 ಅವಾರ್ಡ್​ ದಕ್ಕಿಸಿಕೊಂಡಿದ್ದು, ಇದೀಗ ಆಸ್ಕರ್​ ಪ್ರಶಸ್ತಿಗೆ ನಾಮಿನೇಟ್​ ಆಗಿದೆ. ಈಗ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸಗೊಂಡು ಬರೆದುಕೊಂಡಿರುವ ನಿರ್ದೇಶಕ ರಾಜಮೌಳಿ, ನಾನು ಆಸ್ಕರ್​ಗಾಗಿ ಎಂದಿಗೂ ಕನಸು ಕಂಡವನಲ್ಲ. ನಾಟು ನಾಟು ಹಾಗೂ ಆರ್​ಆರ್​​ಆರ್​ ಚಿತ್ರದ ಅಭಿಮಾನಿಗಳು ಇದರಲ್ಲಿ ನಂಬಿಕೆ ಇಟ್ಟಿದ್ದರು. ಅವರು ನಮ್ಮ ಮನಸ್ಸಿನಲ್ಲಿ ಕಲ್ಪನೆಯನ್ನು ಹುಟ್ಟುಹಾಕಿದರು ಮತ್ತು ನಮ್ಮನ್ನು ಮುಂದಕ್ಕೆ ಹೋಗುವಂತೆ ಬೆಂಬಲಿಸಿದರು. ಹುಚ್ಚು ಅಭಿಮಾನಿಗಳಿಗೆ ನನ್ನ ದೊಡ್ಡ ಅಪ್ಪುಗೆ’ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಸುದೀರ್ಘ ಪತ್ರ ಬರೆದಿರುವ ಮೌಳಿ, ನನ್ನ ದೊಡ್ಡಣ್ಣ (ಎಂಎಂ ಕೀರವಾಣಿ) ಅವರು ನನ್ನ ಚಿತ್ರದಲ್ಲಿನ ಹಾಡಿಗೆ ಆಸ್ಕರ್ ನಾಮನಿರ್ದೇಶನ ಪಡೆದಿದ್ದಾರೆ. ನಾನು ಹೆಚ್ಚಿನದನ್ನು ಕೇಳಲಾರೆ. ಚರಣ್ ಹಾಗೂ ತಾರಕ್​​ಗಿಂತ ಹೆಚ್ಚಿನ ಹುರುಪಿನೊಂದಿಗೆ ನಾಟು ನಾಟು ಹಾಡಿಗೆ ನಾನು ಡಾನ್ಸ್ ಮಾಡುತ್ತಿದ್ದೇನೆ.

ಚಂದ್ರ ಬೋಸ್​ ಅವರೇ ಅಭಿನಂದನೆಗಳು. ಆಸ್ಕರ್ ವೇದಿಕೆ ಮೇಲೆ ನಮ್ಮ ಹಾಡು ಲಗ್ಗೆ ಇಟ್ಟಿದೆ. ಪ್ರೇಮ್ ಮಾಸ್ಟರ್​ ನಿಮಗೆ ನನ್ನ ಧನ್ಯವಾದ. ಹಾಡಿಗೆ ನಿಮ್ಮ ಕೊಡುಗೆ ಬೆಲೆ ಕಟ್ಟಲಾಗದ್ದು. ನನ್ನ ವೈಯಕ್ತಿಕ ಆಸ್ಕರ್ ನಿಮಗೆ ಸಲ್ಲುತ್ತದೆ. ತಾರಕ್ ಹಾಗೂ ಚರಣ್​ ನಿಮಗೂ ಧನ್ಯವಾದ. ನಾನು ನಿಮಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಅದಕ್ಕೆ ಕ್ಷಮೆ ಇರಲಿ. ಈ ಹಾಡಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಎಂದು ಸಂತಸದಿಂದ ಬರೆದುಕೊಂಡಿದ್ದಾರೆ.

ನಾಟು ನಾಟು ಹಾಡನ್ನು ಎಂಎಂ ಕೀರವಾಣಿ ಸಂಯೋಜನೆ ಮಾಡಿದ್ದರೆ, ಕಾಲಭೈರವ ಹಾಗೂ ರಾಹುಲ್ ಸೊಪ್ಲಿಗಂಜ್ ಸಾಹಿತ್ಯ ಬರೆದಿದ್ದಾರೆ.

#RRR FILM #SS RAJAMOULI #DIRECTOR #MM KIRAVANI #NATU NATU SONG #RAM CHARAN #JUNIOR NTR #GLODEN GLOBE 2023 AWARD #OSCAR AWARD #NOMINATED

More News