ಮೈಸೂರು ಅರಮನೆ ಪ್ರವೇಶ ಏಕಾಏಕಿ ಏರಿಕೆ : ಇಂದಿನಿಂದಲೇ ಜಾರಿ

ಮೈಸೂರು : ಕೊರೊನಾ ಮತ್ತು ಲಾಕ್ ಡೌನ್ ನಿಂದ ಮೈಸೂರು ಅರಮನೆ ಆದಾಯ ತೀವ್ರ ಪ್ರಮಾಣದಲ್ಲಿ ಕುಸಿತಕಂಡಿರುವ ಹಿನ್ನೆಲೆಯಲ್ಲಿ ಅರಮನೆ ಪ್ರವೇಶ ಟಿಕೆಟ್ ದರವನ್ನು ಏಕಾಏಕಿ ಏರಿಕೆ ಮಾಡಲಾಗಿದೆ.
ಇನ್ನೊಂದೆಡೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಸುತ್ತಿರುವ ಬೆನ್ನಲ್ಲೆ, ಇಂದಿನಿಂದಲೇ ಜಾರಿಯಾಗುವಂತೆ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.
ಅರಮನೆ ಪ್ರವೇಶ ಒಬ್ಬರಿಗೆ ದರ 70 ರೂಪಾಯಿನಿಂದ 100 ರೂಪಾಯಿಗೆ ಏರಿಸಲಾಗಿದೆ. ಮಕ್ಕಳಿಗೆ ಹಳೆಯ ದರ 30 ರೂಪಾಯಿಯಿಂದ 50ರೂಪಾಯಿಗೇರಿಸಲಾಗಿದೆ.
ಅರಮನೆಗೆ ಭೇಟಿ ನೀಡಲಿರುವ ಶಾಲಾ ಮಕ್ಕಳ ಟಿಕೆಟ್ ದರವನ್ನೂ ಏರಿಸಲಾಗಿದ್ದು, ದರ 20 ರೂಪಾಯಿಯಿಂದ ದರ 50 ರೂಪಾಯಿಗೇರಿಸಲಾಗಿದೆ. ಇಂಗ್ಲೀಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ದರ 120ರೂಪಾಯಿ ನಿಗದಿಮಾಡಲಾಗಿದೆ. ಆದರೆ, ಕನ್ನಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಹೆಚ್ಚಳ ಮಾಡಿಲ್ಲ.

More News