ಬೆಂಗಳೂರು:ಜ.26: ಕನಸ್ಸೊಂದನ್ನು ಕಟ್ಟಿಕೊಂಡು ಅದರ ದಾರಿಯಲ್ಲಿ ಹೋಗ್ತಿದ್ರೆ ಜಗತ್ತೇ ನಮ್ಮ ಕನಸ್ಸನ್ನು ಸಾಕಾರ ಮಾಡಲು ಮುಂದೆ ಬರುತ್ತೆ.. ಸ್ಪಂಧಿಸುತ್ತೆ ಅಂತಾರಲ್ಲಾ.. ಆ ರೀತಿಯ ಪವಾಡವೊಂದು ನಟ ರಜನೀಕಾಂತ್ ಬದುಕಲ್ಲಿ ನಡೆದಿದ್ದರಿಂದಲೇ ಆತ ಇಂದು ಶಿವಾಜಿ, ಪಡೆಯಪ್ಪ, ತಲೈವಾ ಎಂದು ಸಿನಿ ಜಗತ್ತನ್ನು ಆಳಲು ಸಾಧ್ಯವಾದದ್ದು.. ಒಂದು ಪ್ಯಾಂಟ್, 2 ಶರ್ಟ್, 1 ಲುಂಗಿಯನ್ನ ಬ್ಯಾಗ್ ನಲ್ಲಿ ತುಂಬಿಕೊಂಡು ಬಂದಿದ್ದ ರಜನೀ ಜರ್ನಿಯೇ ಅದ್ಭುತ..
ಹಿರಿಯ ನಟ ಅಶೋಕ್ ರಜನೀಕಾಂತ್ ಬದುಕಿನ ಜರ್ನಿಯನ್ನು ದಾಖಲಿಸೋ ಪ್ರಯತ್ನ ಮಾಡಿದ್ದಾರೆ. ರಜನೀಕಾಂತ್ ಮತ್ತು ಇವರು ಒಟ್ಟಿಗೆ ಇದ್ದ ದಿನಗಳನ್ನು ಮೆಲುಕು ಹಾಕುತ್ತಾ ಖಾಸಗಿ ವಾಹಿನಿಗೆ ಮಾತನಾಡಿದ ಅವರು, ರಜನೀಕಾಂತ್ ಇಷ್ಟು ಎತ್ತರಕ್ಕೆ ಬೆಳೆಯಬಲ್ಲ ಅನ್ನೋದು ನಮಗಷ್ಟೇ ಅಲ್ಲ.. ಆತನಿಗೂ ಅಂದಾಜಿರ್ಲಿಲ್ಲ.. ಆತನ ಬದುಕಲ್ಲಿ ಪವಾಡವೊಂದು ನಡೆದುಬಿಟ್ಟಿದೆ ಎಂದು ಅಚ್ಚರಿ ಪಟ್ಟರು.


ನಟ ರಜನೀಕಾಂತ್ ಜೊತೆಗಿನ ತಮ್ಮ ಅನುಭವ ವನ್ನು ಮೆಲುಕು ಹಾಕಿದ ನಟ ಅಶೋಕ್, ರಜನೀ ಅದೆಷ್ಟು ಒರಟ ಅಂದರೆ.. ಸಾರಾಯಿ ಸಿಗರೇಟು ಹೆಚ್ಚು ತಕೊಳ್ತಿದ್ದ. ಅವನ ಬಳಿ ಇದ್ದದ್ದೇ ಒಂದ್ ಪ್ಯಾಂಟ್ ಎರಡ್ ಶರ್ಟ್ ಒಂದು ಲುಂಗಿ. ಒಂದು ಟೂತ್ ಪೌಡರ್ ಬ್ಯಾಗಲ್ ಹಾಕೊಂಡು ಓಡಾಡ್ತಿದ್ದ. ಆದರೆ ಶಿವಾಜಿ ತನ್ನನ್ನು ತಾನು ಪ್ರಯೋಗಕ್ಕೆ ಒಡ್ಡಿಕೊಂಡ.. ಸಿನಿಮಾ ಫೀಲ್ಡ್ ಗೆ ಬಂದು ಇಂಗ್ಲಿಷ್ ಕಲಿತಾರೆ.. ಹಿಂದಿ, ತಮಿಳು, ಕಲಿಯೋದ್ರ ಜೊತೆಗೆ ತಮ್ಮನ್ನೇ ತಾವು ಮಾಡಿಫೈ ಮಾಡಿಕೊಂಡು ಬರ್ತಾರೆ.

ಆಗ ನಾವು ಹೀಗೂ ಬೆಳೆಯಬಹುದು ಅಂತ ಯೋಚನೆ ಮಾಡೋಕು ಆಗದ ಪರಿಸ್ಥಿತಿ ಯಲ್ಲಿ ಇದ್ದೆವು. ಆದರೆ ರಜನೀಕಾಂತ್ ದೊಡ್ಡ ದೊಡ್ಡ ನಟ, ನಟಿಯರ ಜೊತೆಗೆ ಮುಜುಗರ ಆಗದ ಮಟ್ಟದಲ್ಲಿ ನಟಿಸಲು ತೊಡಗ್ತಾನೆ.. ಆತನನ್ನ ಆತ ಅಷ್ಟು ಮಾಡಿಫೈ ಮಾಡಿಕೊಂಡಿದ್ದ ಎಂದು ತಿಳಿಸಿದರು.


ಪ್ರಾರಂಭದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದರೂ ರಜನೀಕಾಂತ್ ಯಾಕೆ ತಮಿಳು ಇಂಡಸ್ಟ್ರಿ ಕಡೆ ಮುಖ ಮಾಡಿದರು ಎಂಬ ಪ್ರಶ್ನೆ ಉತ್ತರಿಸಿದ ಅವರು, ಸಂಭಾವನೆ ಇಲ್ಲಿಗಿಂತ ಅಲ್ಲಿ ಹೆಚ್ಚು.. ಮತ್ತು ಅದು ದೊಡ್ಡ ಮಾರುಕಟ್ಟೆ. ಜೊತೆಗೆ ಆತನಿಗೆ ತಮಿಳು ನಾಡಿನ ಜನ ಕೊಟ್ಟ ಪ್ರೀತಿ ವಿಶ್ವಾಸ ಮಮತೆ.. ನಮ್ಮ ಕನ್ನಡ ನೆಲದಲ್ಲಿ ಸಿಗಲಿಲ್ಲ. ಆ ಜನ ಆತನನ್ನ ಪೂಜಿಸ್ತಾರೆ. ಒಮ್ಮೆ ಈ ಬಗ್ಗೆ ಮಾತನಾಡಿದ್ದ ರಜನಿ, ಕನ್ನಡ ಸಿನಿಮಾದಲ್ಲಿ ನಾನು, ವಿಲನ್ ಆಗ್ಬಹುದೇ ವಿನಯ ಹೀರೋ ಆಗಿ ನಟಿಸಲು ಆಗಲ್ಲ ಎಂದಿದ್ದ ಎಂದು ನೆನಪು ಮಾಡಿಕೊಂಡರು.

ಅದೂ ಹೌದು. ರಜನೀಕಾಂತ್ ಒಬ್ಬ ಹೀರೋ ಆಗ್ತಾರೆ ಅಂದ್ರೆ ಅದನ್ನ ಯಾರೂ ನಂಬಲೇ ಆಗ್ತಿರ್ಲಿಲ್ಲ. ಆದರೆ ಆತನಲ್ಲಿ ಒಬ್ಬ ಕಲೆಗಾರನಿದ್ದ ಯಾವುದೇ ಪಾತ್ರ ಕೊಡ್ಲಿ..ಅದನ್ನು ಸಾಧ್ಯವಾದಷ್ಟು ಚನ್ನಾಗಿ ನಟಿಸುತ್ತಿದ್ದ. ಆದರೆ ಈ ಮಟ್ಟದಲ್ಲಿ ಬೆಳೆಯುತ್ತಾನೆ ಎಂದು ನಾವು ಊಹಿಸಿರ್ಲಿಲ್ಲ. ಅದನ್ನು ಅವನೂ ಅಂದಾಜಿಸಿರಲಿಲ್ಲ. ಅದೊಂದು ಪವಾಡವೇ ನಡೆದುಬಿಡ್ತು ಅವನ ಬದುಕಿನಲ್ಲಿ. ನಾನು ಅವನು ಸಿಕ್ಕಾಗ ತುಂಬಾ ಸಲಿ ಇದರ ಬಗ್ಗೆ ಮಾತನಾಡಿದ್ದೇವೆ. ಹೌದು.. ಇದೊಂದು ಪವಾಡ.. ನಂದೇನಿಲ್ಲ.. ದೇವರು ಕರೆದುಕೊಂಡು ಹೋಗ್ತಿದ್ದಾನೆ.. ನಾನು ಅವನಂತೇ ಹೋಗ್ತಿದ್ದೀನಿ ಅನಿಸುತ್ತೆ ಎಂದಿದ್ದ. ಆದರೆ ಈಗಿನ ಯುಗದಲ್ಲಿ ಅದೃಷ್ಟ ಒಂದೇ ಕೈ ಹಿಡಿಯುತ್ತೆ ಎನ್ನಲಾಗುವುದಿಲ್ಲ., ಬದ್ಕಲ್ಲಿ ಏನೋ ಮಾಡ್ಬೇಕು.. ಅಂತ ಎಲ್ಲೆಲ್ಲೋ ಹೋಗಿ ದಾರಿ ತಪ್ಪಿ ಜೀವನವನ್ನೇ ಕಳೆದುಕೊಂಡು ಬಿಟ್ಟವರು ಇದ್ದಾರೆ. ಆದರೆ ರಜನಿ ವಿಷಯದಲ್ಲಿ ಹೀಗೆ ಆಗ್ಲಿಲ್ಲ..

ರಾಮಕೃಷ್ಣ ಆಶ್ರಮದ ಓದು.. ವೇದಾಂತಗಳ ಸೆಳೆತ.. ಹಿಮಾಲಯದ ಓಡಾಟ, ಮಹತ್ಮರ ಜೊತೆಗೆ ಮಾತುಕತೆ ಗಳು.. ಹೀಗೆ ಆಧ್ಯಾತ್ಮಿಕ ಆಕರ್ಷಣೆ ಬೆಳೆಸಿಕೊಳ್ಳುವ ಜೊತೆಗೆ ಜನಪ್ರಿಯ ತೆ ಸಹ ರಜನೀಕಾಂತ್ ಗೆ ಇದೆ. ಇಷ್ಟೆಲ್ಲ ಶಕ್ತಿ ಯನ್ನು ಏನ್ ಮಾಡ್ತಾನೆ ಎಂಬ ಕುತೂಹಲ ನಂಗಿದೆ. ಅವಕಾಶ ಇದ್ರೂ ರಾಜಕೀಯ ಕ್ಕೆ ಬರ್ಲಿಲ್ಲ. ಕೋಟ್ಯಾಂತರ ರೂಪಾಯಿ ಹಣ ಇದ್ರೂ ಮಜಾ ಮಾಡಲ್ಲ. ಯಾವ ಶೋಕಿಯೂ ಇಲ್ಲ. ಏನಾಗ್ಬಹುದು ಈತ.. ಈ ಮನ್ಷ ಯಾತಕ್ಕಾಗಿ ಹುಟ್ಟಿದ್ದಾನೆ.. ಅನ್ನೋ ಕುತೂಹಲ ನಂಗಿದೆ ಎಂದು ಅಚ್ಚರಿ ಪಟ್ಟರು.




