ಕೆಜಿಎಫ್, ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ನಟ ರಾಕ್ಷಸ ಸಹ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸೌಂಡ್ ಮಾಡಲು ಸಜ್ಜಾಗಿದ್ದಾರೆ. ಡಾಲಿ ಧನಂಜಯ್, ತೆಲುಗಿನ ನಟ ಸತ್ಯದೇವ್ ನಟನೆಯ ಬಹುಭಾಷಾ ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಚಿತ್ರಕ್ಕೆ ‘ಜೇಬ್ರಾ’ ಎಂದು ಶೀರ್ಷಿಕೆ ಇಡುವ ಮೂಲಕ ಚಿತ್ರದ ಸಂಗೀತ ನಿರ್ದೇಶಕ ಯಾರು ಅನ್ನೋದನ್ನು ರಿವೀಲ್ ಮಾಡಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಜೇಬ್ರಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್ ‘ಜೇಬ್ರಾ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಜೇಬ್ರಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲು ಸಜ್ಜಾಗಿದೆ ಎನ್ನಲಾಗಿದೆ. ಈಗಾಗಲೇ ಕೆಜಿಎಫ್ ಸಿನಿಮಾ ಮೂಲಕ ತಮ್ಮ ಕೈ ಚಳಕ ತೋರಿಸಿದ್ದ ರವಿ ಬಸ್ರೂರು, ಜೀಬ್ರಾ ಚಿತ್ರದಲ್ಲಿಯೂ ಬೇರೆಯದೇ ಲೆವೆಲ್ ನಲ್ಲಿ ಸದ್ದು ಮಾಡಲು ಸಿದ್ದವಾಗಿದ್ದಾರಂತೆ.

ಜೀಬ್ರಾ ಚಿತ್ರ ಕ್ರೈಮ್ ಆಕ್ಷನ್ ಎಂಟರ್ಟೈನರ್ ಕಥಾಹಂದರ ಒಳಗೊಂಡಿದ್ದು, ಚಿತ್ರದಲ್ಲಿ ನಾಯಕಿಯಾಗಿ ಭವಾನಿ ಶಂಕರ್ ನಟಿಸುತ್ತಿದ್ದಾರೆ. ಇನ್ನು ಈಗಾಗಲೇ 50 ದಿನಗಳ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮುಂದಿನ ಚಿತ್ರೀಕರಣವನ್ನು ಹೈದ್ರಾಬಾದ್, ಕೋಲ್ಕತ್ತ, ಮುಂಬೈನಲ್ಲಿ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸತ್ಯ ಪೊನ್ಮಾರ್ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ರುಬಿನ್ ಸುಬ್ಬು ಸಾಹಸ ಸಿನಿಮಾಗಿದೆ.

#TELAGU ACTOR #SATHYADEV #DAALI DHANANJAYA #BHAVANI SHANKAR #RAVI BASROORU #MUSIC DIRECTOR #KGF