ಹೈದ್ರಾಬಾದ್: ಜ.27: ತೆಲುಗು ನಟ ನರೇಶ್ ರ ಲವ್ವಿ ಡವ್ವಿ ಕೇಸ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೊಸ ವರ್ಷದಂದು ನಟಿ ಪವಿತ್ರ ಲೋಕೇಶ್ ರೊಂದಿಗೆ ಲಿಪ್ ಲಾಕ್ ಮಾಡೋ ಮೂಲಕ ಹೊಸ ಬದ್ಕನ್ನ ಪ್ರಾರಂಭಿಸ್ತಿರೋದಾಗಿ ಘೋಷಿಸಿದ್ದ ನಟ ಇಂದು ನನ್ನನ್ನು ಕಾಪಾಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ನಟ ನರೇಶ್ ಹಾಗೂ ಪತ್ನಿ ರಮ್ಯಾ ರಘುಪತಿ ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ನಂಗೆ ವಿಚ್ಚೇದನ ಬೇಕು ಎಂದು ನರೇಶ್ ಕೋರ್ಟ್ ಮೆಟ್ಟಿಲೇರಿದರೂ ಪತ್ನಿ ರಮ್ಯಾ ನಿರಾಕರಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮತ್ತೆ ನರೇಶ್ ಜೊತೆ ಬದುಕು ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಯಾವ್ದೇ ಕಾರಣಕ್ಕೂ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗಲು ಬಿಡುವುದಿಲ್ಲ ಎಂದು ಬಹಿರಂಗ ಸವಾಲ್ ಹಾಕಿದ್ದ ಪತ್ನಿ ರಮ್ಯಾ ಹೇಳಿಕೆ ನರೇಶ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದ ಬೇಸತ್ತ ನಟ ನರೇಶ್ ಕೋರ್ಟ್ ಮೆಟ್ಟಿಲೇರಿ ರಕ್ಷಿಸುವಂತೆ ಕೋರಿದ್ದಾರೆ..

ರಮ್ಯಾ ಅವರಿಂದ ದೂರವಾಗಿ ನಟಿ ಪವಿತ್ರಾ ಲೋಕೇಶ್ ಜೊತೆ ಮದುವೆ ತಯಾರಿಯಲ್ಲಿದ್ದ ನರೇಶ್ ಗೆ ಪತ್ನಿ ಹಾಕಿದ ಸವಾಲ್ ನಿದ್ದೆ ಗೆಡಿಸಿದೆ. ಹೀಗಾಗಿ ಕೋರ್ಟ್ ಮೊರೆ ಹೋದ ನರೇಶ್, ತಮ್ಮ ಹೆಂಡತಿ ರಮ್ಯಾ ರಘುಪತಿ ವಿಪರೀತ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಕೊಲ್ಲಲ್ಲು ಹಲವರು ನನ್ನ ಮನೆ ಸುತ್ತ ಮುತ್ತ ತಿರುಗುತ್ತಾರೆ. ರಮ್ಯಾಳಿಂದ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ. ಕೂಡಲೇ ನನಗೆ ಬಿಡುಗಡೆ ಕೊಡಿ ಎಂದು ಅವರು ಕೋರ್ಟಿಗೆ ಮನವಿ ಮಾಡಿದ್ದಾರೆ.