IND v/s NZ T20I Series : ಮನೆಯಂಗಳದಲ್ಲಿ 13ನೇ T20I ಸರಣಿ ಗೆಲ್ಲುವ ನಿರೀಕ್ಷೆಯಲ್ಲಿ ಟೀಂ ಇಂಡಿಯಾ

ನವದೆಹಲಿ: ಜ.27: ವಿಶ್ವ ಕ್ರಿಕೆಟ್‌ನಲ್ಲಿ ಯಶಸ್ಸಿನ ಅಲೆಯಲ್ಲಿ ಮುನ್ನಡೆಯುತ್ತಿರುವ ಟೀಂ ಇಂಡಿಯಾ, ತವರಿನಲ್ಲಿ ನಡೆಯುತ್ತಿರುವ ಮತ್ತೊಂದು ಟಿ20 ಸರಣಿಗಾಗಿ ಸಜ್ಜಾಗಿದೆ.

ತವರಿನಲ್ಲಿ ಅತ್ಯಂತ ಬಲಿಷ್ಠವಾಗಿರುವ ಭಾರತ, ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.
ತವರಿನಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಅತ್ಯಂತ ಬಲಿಷ್ಠವಾಗಿರುವ ಭಾರತ T20I ಹಾಗೂ ODIನಲ್ಲಿ ಬಲಿಷ್ಠವಾಗಿದೆ. ವಿಶೇಷವಾಗಿ T20Iನಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿರುವ ಭಾರತ, ಚುಟುಕು ಕ್ರಿಕೆಟ್‌ನಲ್ಲಿ ನಂ.1 ತಂಡವಾಗಿ ಹೊರಹೊಮ್ಮಿದೆ. ಅದರಲ್ಲೂ ಮನೆಯಂಗಳದಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಟೀಂ ಇಂಡಿಯಾ, ಪ್ರವಾಸಿ ಕಿವೀಸ್‌ ವಿರುದ್ಧ ಮತ್ತೊಂದು ಯಶಸ್ಸು ಕಾಣುವ ತವಕದಲ್ಲಿದೆ.

T20I ಕ್ರಿಕೆಟ್‌ನಲ್ಲಿ ಕಳೆದ ಮೂರು ವರ್ಷಗಳಿಂದಲೂ ಮಿಂಚುತ್ತಿರುವ ಭಾರತ, ತವರಿನಲ್ಲಿ ದೊಡ್ಡ ಸಕ್ಸಸ್‌ ಕಂಡಿದೆ. ಮನೆಯಂಗಳದಲ್ಲಿ ಈವರೆಗೂ ನಡೆದಿರುವ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಭಾರತ 2019ರಿಂದ ಈವರೆಗೂ ಸತತ 12 ಸರಣಿಗಳಲ್ಲಿ ಗೆದ್ದುಬೀಗಿದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ 2-1 ಅಂತರದಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿತ್ತು. ಟಿ20 ಸರಣಿ ಆರಂಭಕ್ಕೂ ಮುನ್ನ ನಡೆದ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಭಾರತ ಕ್ಲೀನ್‌ ಸ್ವೀಪ್‌ ಮಾಡಿತ್ತು. ಅಲ್ಲದೇ ಈ ಹಿಂದೆ 2022ರಲ್ಲಿ 1-0 ಅಂತರದಿಂದ ಸರಣಿ ಗೆದ್ದಿತ್ತು. ಇದೀಗ 2023ರಲ್ಲಿ ಹೊಸ ಉತ್ಸಾಹದಲ್ಲಿರುವ ಭಾರತ ಕಿವೀಸ್‌ ವಿರುದ್ಧದ ಟಿ20 ಸರಣಿ ಗೆದ್ದು, ತವರಿನಲ್ಲಿ ಸತತ 13ನೇ ಟಿ20 ಸರಣಿ ಗೆಲ್ಲುವ ಲೆಕ್ಕಾಚಾರದಲ್ಲಿದೆ.

More News

You cannot copy content of this page