MS DHONI TOLD ‘LET’S GET MARRIED’: “ಲೆಟ್ಸ್ ಗೆಟ್ ಮ್ಯಾರೀಡ್” ಮುಹೂರ್ತ ನೆರವೇರಿಸಿದ ಮಹೇಂದ್ರ ಸಿಂಗ್ ಧೋನಿ ಸಾಕ್ಷಿ ಎಂಟರ್ಟೈನ್ಮೆಂಟ್ಸ್”

ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಚಿತ್ರಕ್ಕೆ ”ಲೆಟ್ಸ್ ಗೆಟ್ ಮ್ಯಾರೀಡ್” ಟೈಟಲ್ ಫಿಕ್ಸ್ ಮಾಡಿದೆ. ಫ್ಯಾಮಿಲಿ ಒರಿಯೆಂಟೆಡ್ ಚಿತ್ರಕ್ಕೆ ರಮೇಶ್ ತಮಿಲ್ಮನಿ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
‘ಧೋನಿ ಎಂಟರ್ಟೈನ್ಮೆಂಟ್ಸ್’ ಮೊದಲ ತಮಿಳು ಸಿನಿಮಾ ‘ಲೆಟ್ಸ್ ಗೆಟ್ ಮ್ಯಾರೀಡ್’ ಮುಹೂರ್ತ ನೆರವೇರಿಸಿದೆ. ಮುಹೂರ್ತ ಕಾರ್ಯಕ್ರಮಕ್ಕೆ ಸಾಕ್ಷಿ ಹಾಗೂ ಹಲವು ಸೆಲೆಬ್ರಿಟಿಗಳು ಭಾಗಿಯಾಗಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ರು.

ಲೆಟ್ಸ್ ಗೆಟ್ ಮ್ಯಾರೀಡ್’ ಫ್ಯಾಮಿಲಿ ಒರಿಯೆಂಟೆಡ್ ಸಬ್ಜೆಕ್ಟ್ ಒಳಗೊಂಡಿದ್ದು, ಸಾಕ್ಷಿ ಧೋನಿ ಚಿತ್ರದ ಕಥೆ ಹಾಗೂ ಕಾನ್ಸೆಪ್ಟ್ ಹಿಂದಿನ ಶಕ್ತಿ. ಈ ಬಗ್ಗೆ ಮಾಹಿತಿ ನೀಡಿರುವ ಸಾಕ್ಷಿ, ಮುಂದಿನ‌ ದಿನಗಳಲ್ಲಿ ಉತ್ತಮ ಕಂಟೆಂಟ್ ವುಳ್ಳ ಇನ್ನೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಾಣ ಮಾಡಲು ನಾವು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ನಿರ್ದೇಶಕ ರಮೇಶ್ ತಮಿಲ್ಮನಿ ಮಾತನಾಡಿ, ನಾವು ಇಂದು ಈ ಜರ್ನಿ ಆರಂಭಿಸಲು ತುಂಬಾ ಉತ್ಸುಕರಾಗಿದ್ದೇವೆ. ಮನರಂಜನಾತ್ಮಕ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಇಡೀ ಫ್ಯಾಮಿಲಿ ಕುಳಿತು ಎಂಜಾಯ್ ಮಾಡಬಹುದು ಎಂಬ ಭರವಸೆ ಇದೆ ಎಂದರು.
ಇನ್ನು ರಮೇಶ್ ತಮಿಲ್ಮನಿ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ತಾವೇ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹರೀಶ್ ಕಲ್ಯಾಣ್, ನಾದಿಯಾ ಹಾಗೂ ಇವಾನ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಖ್ಯಾತ ಕಾಮಿಡಿಯನ್ ಯೋಗಿ ಬಾಬು ಒಳಗೊಂಡ ತಾರಾಗಣವಿದೆ.

#MSDHONI #SAKSHI ENTERTAINMENT #CRICKTER #LETS GET MARRIED #TAMIL FILM #COMMEDIAN #YOGIBABU #RAMESH TAMILMANI #DIRECTOR #SAKSHI PRESANTS

More News

You cannot copy content of this page