BOLLYWOOD BADSHAH: ಹಿಂದಕ್ಕೆ ಹೋಗಲು ಯಾವ ಆಸಕ್ತಿಯೂ ಉಳಿದಿಲ್ಲ: ‘ಪಠಾಣ್’ ಶಾರುಖ್ ಖಾನ್

ಸೋಲಿನ ಸುಳಿಗೆ ಸಿಲುಕಿದ್ದ ಬಾಲಿವುಡ್ ಬಾದ್ ಷಾಗೆ ‘ಪಠಾಣ್’ ಸಿನಿಮಾ ಗೆಲುವು ತಂದುಕೊಟ್ಟಿದೆ. ಹಾಗೆಯೇ ಒಂದೊಳ್ಳೆ ಕಮ್ ಬ್ಯಾಕ್ ಎಂಬ ಹೇಳಿಕೆಗೆ ನಟ ಶಾರುಖ್ ಪ್ರತಿಕ್ರಿಯೆ ನೀಡಿದ್ದು, ಹಿಂದಕ್ಕೆ ಹೋಗೋ ಮನ್ಸಿಲ್ಲ.. ಜೀವನ ಅಂದ್ರೆನೇ ಮುಂದೆಕ್ಕೆ ಚಲಿಸೋದು ಎಂದು ಹೇಳಿದ್ದಾರೆ.

ಸಿದ್ದಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ‘ಪಠಾಣ್’ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಪ್ರಾರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದರೂ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ಬರೀ ಬಾಲಿವುಡ್ ನಲ್ಲಷ್ಟೇ ಅಲ್ಲದೇ ವಿದೇಶಗಳಿಂದಲೂ ಭಾರೀ ಕಮಾಯಿ ಮಾಡ್ತಿದೆ.

ತೆರೆ ಕಂಡ ಮೊದಲ ದಿನ ವಿಶ್ವಾದ್ಯಂತ ‘ಪಠಾಣ್​’ ಚಿತ್ರಕ್ಕೆ 106 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. 2ನೇ ದಿನ 113.60 ಕೋಟಿ ರೂಪಾಯಿ ಆಗಿದೆ. ಎರಡು ದಿನದಲ್ಲಿ ಒಟ್ಟು 219.60 ಕೋಟಿ ರೂ ಆದಾಯದ ಮೂಲಕ ಸಧ್ಯ ಬಾಲಿವುಡ್ ತುಂಬೆಲ್ಲಾ ಸದ್ದು ಮಾಡ್ತಿದೆ. ಸಾಲು ಸಾಲು ಫ್ಲಾಪ್ ಸಿನಿಮಾಗಳಿಂದ ಕಂಗೆಟ್ಟಿದ್ದ ಬಾಲಿವುಡ್ ಗೆ ದೊಡ್ಡ ಗೆಲುವನ್ನು ಕೊಡುವ ಮೂಲಕ ಕಮ್ ಬ್ಯಾಕ್ ಆದ್ವಿ ಅನ್ನೋ ಸೂಚನೆ ರವಾನಿಸಿದೆ.

ಇನ್ನು ‘ಪಠಾಣ್​’ ಯಶಸ್ಸಿನ ಬಗ್ಗೆ ಬರೆದುಕೊಂಡಿರುವ ಬಾಲಿವುಡ್ ಬಾದ್ ಷಾ, ಹಿಂದಕ್ಕೆ ಹೋಗಲು ಯಾವ ಆಸಕ್ತಿಯೂ ಉಳಿದಿಲ್ಲ. ನನ್ನ ಪ್ರಕಾರ ಜೀವನ ಯಾವಾಗಲೂ ಹಾಗೆಯೇ. ಜೀವನದಲ್ಲಿ ನೀವು ಹಿಂದೆ ಹೋಗುವ ಬಗ್ಗೆ ಆಲೋಚಿಸಬಾರದು. ನೀವು ಮುಂದೆ ಸಾಗಬೇಕು. ನೀವು ಏನನ್ನು ಆರಂಭಿಸಿದ್ದೀರೋ ಅದನ್ನು ಪೂರ್ಣಗೊಳಿಸಬೇಕು. ಇದು ಕೇವಲ 57 ವರ್ಷದವರ ಸಲಹೆಗಳು ಎಂದು ಬರೆದುಕೊಂಡಿದ್ದು, ಸಿನಿ ಪ್ರೇಮಿಗಳು ಹೌದೌದು ಎಂದು ಕತ್ತಾಡ್ಸಿದ್ದಾರೆ.

#PATHAAN #SHAHRUKH KHAN #BOLLYWOOD BADSHAH #BOLLYWOOD #COMEBACK #SUCCESS #DONT WANT GO BACK

More News

You cannot copy content of this page