CM Bommai : ಅಮಿತ್ ಶಾ ‘ಉಕ್ಕಿನ ಮನುಷ್ಯ’ : ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ:ಜ.28: ಭಾರತವನ್ನು ನಕ್ಸಲೈಟ್ ಮುಕ್ತ, ಟೆರೆರಿಸ್ಟ್ ಮುಕ್ತ ಮಾಡಿದ್ದು ಅಮಿತ್ ಶಾ. ಅಮಿತ್ ಶಾ ಉಕ್ಕಿನ ಮನುಷ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿವಿಬಿ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮನ್ನು ನೋಡಿದರೆ ಹೊಟ್ಟೆಕಿಚ್ಚ ಆಗುತ್ತದೆ. ನಾನು ಇಲ್ಲಿ ಕುಳಿತುಕೊಳ್ಳುವ ಬದಲು ಮುಂದೆ ಕುಳಿತುಕೊಳ್ಳಬೇಕಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕ್ಯಾಂಪಸ್ ನೋಡಿದರೆ ನಾವು ಈಗ ಇಲ್ಲಿ ವಿದ್ಯಾರ್ಥಿಗಳು ಆಗಬೇಕಿತ್ತು. ಕಾಲೇಜ್‌ನಲ್ಲಿ ಮೊದಲು ಸಿವಿಲ್, ಮೆಕ್ಯಾನಿಕಲ್ ಬಿಟ್ಟರೆ ಯಾವಾಗ ಏನೂ ಇರಲಿಲ್ಲ. ಕ್ಯಾಂಟಿನ್ ನಮ್ಮ ಫೇವರೇಟ್ ಪ್ಲೇಸ್. ಕ್ಯಾಂಟಿನ್‌ನಲ್ಲಿ ಕೊಡುವ ಬೋಂಡಾ ಸೂಪ್ ನೆನಪಿಸಿಕೊಂಡ ಭಾವುಕರಾದರು. ಭಾರತದ ನವ ನಿರ್ಮಾಣದಲ್ಲಿ ಕೆಎಲ್ಇ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ನಾವು ಎಷ್ಟೇ ದೊಡ್ಡವರಾದರೂ ಕಲಿತ ಶಾಲೆ, ಗುರುಗಳನ್ನು ಎಂದು ಮರೆಯಬಾರದು, ಇದು ನಮ್ಮ ಧರ್ಮ ಎಂದರು.

ಆರ್ಥಿಕವಾಗಿ ಒಂದು ರಾಜ್ಯ ಬೆಳೆದರೆ, ಶೈಕ್ಷಣಿಕವಾಗಿ ರಾಜ್ಯ ಬೆಳೆಯುತ್ತದೆ. ಇಡೀ ದೇಶದಲ್ಲಿ FDIನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಜೊತೆಗೂಡಿ ಉತ್ತಮ ಕೆಲಸ ಮಾಡುತ್ತಿದ್ದೇವೆ. ಇದು ಡಬಲ್ ಇಂಜಿನ್ ಸರ್ಕಾರ. ಅಮಿತ್ ಶಾ ಗೃಹ ಖಾತೆಯಲ್ಲಿ ಬಹಳ ಬದಲಾವಣೆ ಮಾಡಿದ್ದಾರೆ. ಇವತ್ತು ಕರ್ನಾಟಕಕ್ಕೆ ವಿಧಿ ವಿಜ್ಞಾನ ಕ್ಯಾಂಪಸ್ ಕೊಟ್ಟಿದ್ದು ಅಮಿತ್ ಶಾ. ಇದು ಮುಂದಿನ ದಿನಗಳಲ್ಲಿ ದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಿದರು.

ಹೆಣ್ಣು ಮಕ್ಕಳಿಗಾಗಿ 700 ಕೋಟಿ ಹಣ ಕೊಟ್ಟಿದ್ದಾರೆ. ಅಮಿತ್ ಶಾ ಸಹಕಾರಿ ಸಚಿವರು, ಬರುವ ದಿನಗಳಲ್ಲಿ ಸಹಕಾರ ಇಲಾಖೆಯಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಬಿವಿಬಿ ಕಾಲೇಜ್‌ಗೆ ಅಭಿನಂದನೆ ಸಲ್ಲಿಸಿದ ಸಿಎಂ, ಮತ್ತೆ ಸೆಂಚುರಿ ಸಂಭ್ರಮದಲ್ಲಿ ಭಾಗಿಯಾಗೋಣ ಎಂದು ಹೇಳಿದರು.

#cmbommai #bjp #amithsha #hubli #bvb #bsy #bjpkarnataka #pmmodi #bsbommai

More News

You cannot copy content of this page