Vishnu Memorial : ವಿಷ್ಣು ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ : ಅದ್ಧೂರಿ ಕಾರ್ಯಕ್ರಮ ಸಿದ್ದತೆ ಹೇಗಿದೆ ಗೊತ್ತಾ?

ಮೈಸೂರು:ಜ.28: ಕಳೆದ 13 ವರ್ಷಗಳಿಂದ ಅನೇಕ ಅಡೆತಡೆಗಳ ಮ‌ೂಲಕ ನಿರ್ಮಾಣ ಹಂತದಲ್ಲೇ ಉಳಿದುಬಿಟ್ಟಿರುವ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದು, ರಾಜ್ಯ ಸರ್ಕಾರವೇ ಮುತುವರ್ಜಿ ವಹಿಸಿ ಸ್ಮಾರಕ ಉದ್ಘಾಟನೆಗೆ ಮುಂದಾಗಿದೆ.

ಹಲವಾರು ವರ್ಷಗಳಿಂದ ಸ್ಮಾರಕವನ್ನು ಉದ್ಘಾಟನೆ ಮಾಡಬೇಕಂತ ಅವರ ಸಾವಿರಾರು ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದರು. ಆದರೆ, ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಆದರೆ, ವಿಷ್ಣು ಅವರ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ  ಸ್ಮಾರಕ ನಿರ್ಮಾಣ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಆದರೆ, ಸರ್ಕಾರವು ಮೈಸೂರಿನಲ್ಲಿ  ನಿರ್ಮಿಸಲಾಗಿದ್ದು, ಅದು ಇದೇ ಜನವರಿ 29 ಕ್ಕೆ ಬೆಳಗ್ಗೆ 11 ಗಂಟೆ ಹೊತ್ತಿಗೆ ಲೋಕಾರ್ಪಣೆ ಮಾಡಲಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಇನ್ನು ವಿಷ್ಣು ಸ್ಮಾರಕ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ವಿಷ್ಣು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಿದ್ದಾರೆ. ಸ್ಮಾರಕ ಉದ್ಘಾಟನೆಗೆ ಸಂಬಂಧಿಸಿದಂತೆ ತಯಾರಿಗಳು ಭರದಿಂದ ಸಾಗಿವೆ.  ಈ ಸಂಭ್ರಮವನ್ನು ಜಾತ್ರೆಯ ರೀತಿ ತಯಾರಿ ನಡೆಸಿದ್ದು, ವಿಷ್ಣು ಸೇನಾ ಸಮಿತಿ ವತಿಯಿಂದ ಸಿದ್ದತೆ ನಡೆಸಲಾಗುತ್ತಿದೆ.

ಬೆಂಗಳೂರು-ಮೈಸೂರು ರಸ್ತೆಯಲ್ಲಿ ವಿಷ್ಣು ಕಟೌಟ್ ಗಳನ್ನು ನಿಲ್ಲಿಸಲಾಗುತ್ತಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಸ್ಮಾರಕ ಹಬ್ಬ ಶುರುವಾಗಲಿದೆ. ವಿಷ್ಣು ಅವರ ಅಭಿಮಾನಿಗಳು ನಾಳೆ ಬೆಳಗ್ಗೆ 6.30 ರಿಂದ ಅಭಿಮಾನ್ ಸ್ಟುಡಿಯೋ ದಿಂದ ಮೈಸೂರಿನ ಕಡೆಗೆ ಮೆರವಣಿಗೆ ಮಾಡಲಿದ್ದಾರೆ. ಅನಂತರ ಎಲ್ಲರೂ ಅಭಿಮಾನಿಗಳು ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದಿಂದ ವಿಷ್ಣು ಸ್ಮಾರಕದವರೆಗೂ ಮೆರವಣಿಗೆ ನಡೆಸಲಾಗುತ್ತದೆ.

ವಿಷ್ಣು ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ಗೋಡೆಗಳನ್ನು ಪೋಸ್ಟರ್ ಮೂಲಕ ಅಲಂಕರಿಸಲಾಗಿದೆ. ವಿಷ್ಣುಸೇನಾ ಸಮಿತಿಯ ಸದಸ್ಯರು ಹತ್ತು ಹಲವು ಕಾರ್ಯಕ್ರಮಗಳನ್ನ ಕೂಡ ಹಮ್ಮಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಾಹನಜಾಥ, ದೀಪೋತ್ಸವ, ಜಾನಪದ ಕಾರ್ಯಕ್ರಮ, ಕುಂಭಮೇಳ ಹೀಗೆ ವಿವಿಧ ತರಹದ ಕಾರ್ಯಕ್ರಮಗಳನ್ನು ವಿಷ್ಣು ಸೇನಾ ಸಮಿತಿ ಮೂಲಕ ಆಯೋಜನೆ ಮಾಡಲಾಗುತ್ತಿದೆ.

More News

You cannot copy content of this page