SCULPTOR AND ARTIST ARUN YOGIRAJ: ವಿಷ್ಣುವರ್ಧನ್ ಅವರ ಸುಂದರವಾದ ಮುಖವನ್ನ ಕಲ್ಲಿನ ಮೇಲೆ ಕೆತ್ತುವುದೇ ಸಮಸ್ಯೆಯಾಗಿಬಿಟ್ಟಿತ್ತು: ಶಿಲ್ಪಿ ಅರುಣ್

ಮೈಸೂರು: ಕಲ್ಲಿನಲ್ಲಿ ಡಾ.ವಿಷ್ಣು ಪ್ರತಿಮೆ ನಿರ್ಮಾಣ ಅಷ್ಟು ಸುಲಭದ ವಿಷಯವಾಗಿರಲಿಲ್ಲ. ಪ್ರತಿಮೆ ನಿರ್ಮಿಸುವಾಗ ಸಾಕಷ್ಟು ಸವಾಲು ಎದುರಾಗಿತ್ತು ಎಂದು ಶಿಲ್ಪಿ ಅರುಣ್ ಯೋಗಿರಾಜ್ ಪ್ರತಿಮೆ ನಿರ್ಮಾಣದ ವೇಳೆ ತಮಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ಮೈಸೂರಿನ ಅಗ್ರಹಾರದ ನಿವಾಸಿ ಶಿಲ್ಪಿ ಅರುಣ್(ArunYogiraj – Sculptor & Artist)
ಯೋಗಿರಾಜ್ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಈ ಪ್ರತಿಮೆ ನಿರ್ಮಾಣದ ವೇಳೆ ತಮಗೆ ಎದುರಾದ ಸವಾಲಿನ ಬಗ್ಗೆ ಕೆಲವೊಂದು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ‌ಖಾಸಗಿ ವಾಹಿನಿಗೆ ಮಾತನಾಡಿದ ಅವರು, ಸುಂದರವಾದ ಮುಖವನ್ನು ಕಲ್ಲಿನ ಮೇಲೆ ಕೆತ್ತುವುದೇ ಸಮಸ್ಯೆಯಾಗಿಬಿಟ್ಟಿತ್ತು ಎಂದು ತಿಳಿಸಿದರು.

ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಅವರು ವಿಷ್ಣು ಅವರ ಪ್ರತಿಮೆ ಮಾಡುವಂತೆ ಸೂಚಿಸಿದ್ದರು. ನಾನು ವಿಷ್ಣು ಅವರ ಅಪ್ಪಟ ಅಭಿಮಾನಿ. ಹೀಗಾಗಿ ಖುಷಿಯಿಂದ ಒಪ್ಪಿದೆ. ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುವಾಗ ಸಾಕಷ್ಟು ಸವಾಲು ಎದುರಾಗಿತ್ತು. ನಟ ವಿಷ್ಣುವರ್ಧನ್ ರ ಸುಂದರ ಮುಖವನ್ನು ಕಲ್ಲಿನ ಮೇಲೆ ಚಿತ್ರಿಸುವುದು ಬಹಳ ಕಠಿಣವಾಗಿತ್ತು.

ನಾನು ವಿಷ್ಣು ಅಪ್ಪಟ ಅಭಿಮಾನಿ. ಹೀಗಾಗಿ ಕೊಂಚ ಹೆಚ್ಚೇ ನರ್ವಸ್ ಆಗಿದ್ದೆ. ನಾ ಕಲಾವಿದನಾದರೂ ವಿಷ್ಣುವಿನ ಪ್ರತಿಮೆ ಕಲ್ಲಿನಲ್ಲಿ ಕೆತ್ತಿ ಚಿತ್ರಿಸುವುದು ಕಷ್ಟವಾಗಿತ್ತು. ಸಾಕಷ್ಟು ಸಮಯ ತೆಗೆದುಕೊಂಡು ನಿರ್ಮಿಸಿರುವೆ ಎಂದಿದ್ದಾರೆ.

ಇನ್ನು ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ಮಾತನಾಡಿದ ಅರುಣ್ ಶಿಲ್ಪಿ(ArunYogiraj – Sculptor & Artist), ವಿಷ್ಣು ರನ್ನು ಕಲ್ಲಿನಲ್ಲಿ ಕೆತ್ತುವುದು ನನ್ನ ಮಹದಾಸೆಯಾಗಿತ್ತು. ಮನದಲ್ಲಿ ಅವರನ್ನ ನೆನೆದು ಕೆತ್ತನೆ ಕೆಲಸ ಆರಂಭಿಸಿದೆ.‌ ಸ್ಮಾರಕ ಉದ್ಘಾಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಆಸೆ ಇದೀಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.

#DR VISHNUVERDHAAN #ACTOR #SAHASASHIMHA #BHARATI VISHNUVERDHAN #ANIRUDD #ARUN YOGIRAJ #ARTIST #STATUE #VERY DIFFICULT #BEAUTIFUL FACE #CARVING #EASY TASK

More News