Ramesh Jarakiholi : ರಾಜಕಾರಣಕ್ಕೆ ಬರುವ ಮೊದಲು ಡಿಕೆಶಿ  ‘ಬ್ಲೂ ಫಿಲಂ ’ ತೋರಿಸುತ್ತಿದ್ದ : ರಮೇಶ್ ಜಾರಕಿಹೊಳಿ ಆರೋಪ

ಬೆಳಗಾವಿ:ಜ.30: ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಸುದ್ದಿಗೋಷ್ಠಿ ನಡೆಸಿ ಡಿ.ಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಚನ್ನರಾಜ ಹಟ್ಟಿಹೊಳಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಚನ್ನರಾಜ ಹಟ್ಟಿಹೊಳಿ ಆರೋಪಕ್ಕೆ ಉತ್ತರಿಸಿದ, ಮಾಜಿ ಸಚಿವ ರಮೇಶ್ ಜಾರಕಿಹೊಳಿ,

ನನ್ನ ವ್ಯಕ್ತಿತ್ವದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಆಡಿಯೋದಂತೆ ಸಾಕಷ್ಟು ಆಡಿಯೋಗಳು ಇವೆ ಎಂದು ಆರೋಪಿಸಿದ್ದಾರೆ. ಮುಂದುವರೆದು ಮಾತನಾಡಿದ ರಮೇಶ್ ಜಾರಕಿಹೊಳಿ, ಬೆತ್ತಲಾಗಿ ನಿಂತಿದ್ದಕ್ಕೆ ದೇವರೆ ಹೆದರುತ್ತೆ. ಮಿಸ್ಟರ್ ಚನ್ನರಾಜ ಹಟ್ಟಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಏನೂ ಅನ್ನುವದು ರಾಜ್ಯದ ಜನತೆಗೆ ಗೊತ್ತಿದೆ. ನೀನು ನನ್ನ ಲೆವಲ್ ಅಲ್ಲ ಎಂದ ರಮೇಶ್ ಜಾರಕಿಹೊಳಿ, ಕಳೆದ ನಾಲ್ಕು ವರ್ಷಗಳಿಂದ  ಕಾರ್ಖಾನೆಯ ರಿಕವರಿಯಲ್ಲಿ ಗೋಲ್ಮಾಲ್ ಮಾಡಲಾಗಿದೆ. 8 ಲಕ್ಷ ಕಬ್ಬು ಕ್ರಶಿಂಗ್ ಮಾಡಿ 12 ಲಕ್ಷ ತೋರಿಸುತ್ತಾರೆ. ಸಾಕಷ್ಟು ವರ್ಷಗಳಿಂದ ಸಾವಿರಾರು ಕೋಟಿ ಲೂಟಿ ಮಾಡಲಾಗಿದೆ. ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಗೂ ನನಗೂ ಸಂಬಂಧವಿಲ್ಲ. ನನ್ನ ಮಗ ನಡೆಸುತ್ತಾನೆ. ಕಾರ್ಖಾನೆಯಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ. ನನ್ನ ವಿಡಿಯೋ ಜನರ ಬಳಿ ಹೋಗಬೇಕು. ಸ್ಪಷ್ಟವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನನ್ನ ಬಗ್ಗೆ ಮಾತನಾಡಿರುವ ಆಡಿಯೋ ಇದೆ ಎಂದು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಹಾಗೂ ಸಿಡಿ ಗ್ಯಾಂಗ್ ಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ರಮೇಶ್ ಜಾರಕಿಹೊಳಿ, ಸಿಡಿ ಮಹಾನಾಯಕ ಡಿ.ಕೆ.ಶಿವಕುಮಾರ್ ಬಳಿ ಕೆಲವು ಅಧಿಕಾರಿ, ರಾಜಕಾರಣಿಗಳ ಸಾಕಷ್ಟು ವಿಡಿಯೋಗಳು ಇವೆ. ಸಿಡಿ ಗ್ಯಾಂಗ್ ಕ್ಯಾಪ್ಟನ್ ಎಲ್ಲರನ್ನ ಬ್ಲಾಕ್ ಮೇಲ್ ಮಾಡಿ ರಾಜಕಾರಣ ಮಾಡುತ್ತಿದ್ದಾರೆ. ಇಂತವರ ಕೈಗೆ ಅಧಿಕಾರ ಕೊಟ್ಟರೆ ರಾಜ್ಯದ ಪರಿಸ್ಥಿತಿ ಏನಾಗುತ್ತದೆ ಎಂದು ಜನ ಯೋಚಿಸಬೇಕಿದೆ ಎಂದು ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಹಾಕಿದ್ರು.

ರಾಜಕಾರಣಕ್ಕೆ ಬರುವ ಮೊದಲು ಡಿ.ಕೆ ಶಿವಕುಮಾರ್ ‘ಬ್ಲೂ ಫಿಲಂ’ ತೋರಿಸುತ್ತಿದ್ದ. ರಾತ್ರಿ  12 ಗಂಟೆ ನಂತರ ಬ್ಲೂ ಫಿಲಂ ತೋರಿಸುತ್ತಿದ್ದ ಎಂದು ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.

More News