CBI SHOULD INQUIRE ON ‘CD’: ಬೆಳಗಾವಿ ಟು ಕನಕಪುರದವರೆಗೆ ಸಿಡಿ ಕಾರ್ಖಾನೆಗಳಿವೆ: ಸಹೋದರ ರಮೇಶ್ ಪರ ಬ್ಯಾಟ್ ಬೀಸಿದ ಲಖನ್ ಜಾರಕಿಹೊಳಿ

ಬೆಳಗಾವಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸುವುದರ ಮೂಲಕ ಅವರ ಸಹೋದರ ಪಕ್ಷೇತರ ಎಂಎಲ್ ಸಿ ಲಖನ್ ಜಾರಕಿಹೊಳಿ ಬೆಂಬಲ ಸೂಚಿಸಿದ್ದಾರೆ.
ಸಿಡಿ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸಿದರೆ ಯಾರು ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ, ಲುಂಗಿ ಬಿಚ್ಚುತ್ತಾರೆ ಎಲ್ಲಾವೂ ಜನಸಾಮಾನ್ಯರಿಗೆ ಗೊತ್ತಾಗಲಿದೆ ಎಂದು ಕಿಡಿಕಾರಿದ್ದಾರೆ.

ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಕೇಸ್ ನಲ್ಲಿ ಷಡ್ಯಂತ್ರ ನಡೆದಿರುವುದು ಜಗತ್ಜಜಾಹಿರ್ ಆಗಿದೆ. ಬೆಳಗಾವಿ ಟೂ ಕನಕಪುರದವರೆಗೆ ಸಿಡಿ ಕಾರ್ಖಾನೆ ಇದೆ, 2000 ಇಸವಿಯಿಂದ ಈ ಸಿಡಿ ಫ್ಯಾಕ್ಟರಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್ ನಿಂದ ದೂರವಾದೆ. ಆಲ್ಟೋ 800 ನಿಂದ ಬಿಎಂಡ್ಲ್ಯೂವರೆಗೆ ನಡೆದ ಪ್ರಕರಣಗಳ ಸಿಡಿ ಅವರ ಬಳಿಯಿದೆ, ಅದರಲ್ಲಿ ಯಾರು ಇದ್ದಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರಿಗೆ ಶಕ್ತಿ ಇದೆ ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರೋರು ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಒಂದು ವರ್ಷದಿಂದ ನಮ್ಮ ಬೇಡಿಕೆ ಇದೆ ಸಿಬಿಐಗೆ ವಹಿಸಬೇಕು ಎಂದು. ಅನೇಕರು ನೊಂದು, ಬೆಂದು ಹೋಗಿದ್ದಾರೆ. ಅವರಿಗೆ ಬೆಂಗಳೂರು, ಮುಂಬೈ, ಕೇರಳಾದವರೆಗೆ ಲಿಂಕ್ ಇದೆ ಎಂದು ಆರೋಪಿಸಿದರು.

ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದ ನಡೆಯುತ್ತಿದೆ, ಚುನಾವಣೆ 6 ತಿಂಗಳು ಇರೋವಾಗಲೇ ಮತ್ತೆ ಜೋರು ಮಾಡಿದ್ದಾರೆ. ವಿಷಕನ್ಯ, ಮಟಾಶ್ ಲೆಗ್ಗ್, ರಕ್ತ ಕಣ್ಣೀರು ಅಂತ ಜನ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಾಂಗ್ ನೀಡಿದರು.
ಇವರಿಂದಲೇ ಸಿದ್ದರಾಮಯ್ಯ ಮಾಜಿ ಆದರು,‌ ಕುಮಾರಸ್ವಾಮಿ ಸರ್ಕಾರ ಬಿದ್ದು ಹೋಯಿತು, ಸಿಬಿಐ ತನಿಖೆ ಆದರೇ ಎಲ್ಲವೂ ಬಹಿರಂಗ ಆಗಲಿದೆ. ಸಂತ್ರಸ್ತರೋ ಸಂತೃಪ್ತರೋ ಗೊತ್ತಾಗಲಿದೆ ಎಂದು ಹೇಳಿದ ಅವರು, ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಅಧ್ಯಕ್ಷ ಎಂದು ವ್ಯಂಗ್ಯವಾಡಿದರಲ್ಲದೆ, ಸಿಬಿಐ ತನಿಖೆ ಆದರೇ ಲಂಚ, ಮಂಚ ಎಲ್ಲ ಹೊರಗೆ ಬರಲಿದೆ ಎಂದು ತಿಳಿಸಿದರು.

ನಾನು ಪಕ್ಷೇತರ ಪರಿಷತ್ ಸದಸ್ಯ, ಆದರೆ, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಗುರುಗಳು ಎಂದು ಲಖನ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

#CD CASE #LAKHAN JARKIHOLI #RAMESH JARKIHOLI #CBI INQUIRY #LAXMI HEBBALKAR #KANAKAPURA #BELAGAVI #CD FACTORY #H D KUMARASWAMY #D K SHIVAKUMAR

More News