ನವದೆಹಲಿ:ಜ.31: ಬಿಡುಗಡೆ ಸಂದರ್ಭದಲ್ಲಿ ಸಾಕಷ್ಟು ವಿರೋಧ ಎದುರಿಸಿದ್ದರೂ ಪಠಾಣ್ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡದ ನಟ ಶಾರುಖ್ ಮೊದಲ ಬಾರಿಗೆ ಮಾತನಾಡಿದ್ದಾರೆ.. ಗೆಲುವಿನ ಖುಷಿಯಲ್ಲಿರುವ ಪಠಾಣ್ ಸಿನಿಮಾ ತಂಡ ಮುಂಬೈ ನಲ್ಲಿ ಪ್ರೆಸ್ ಮೀಟ್ ಆಯೋಜಿಸಿತ್ತು. ಈ ವೇಳೆ ಸಿನಿಮಾ ವಿರೋಧದ ಕುರಿತು ಮೊದಲ ಬಾರಿಗೆ ಮಾತನಾಡಿದ ನಟ ಶಾರುಖ್, ನಿಮ್ಮನ್ನು ಪ್ರೀತಿಸುತ್ತೇವೆ.. ಅದಕ್ಕಾಗಿ ಸಿನಿಮಾ ಮಾಡ್ತಿದ್ದೇವೆ ಎಂದಿದ್ದಾರೆ.

“ನಾವೆಲ್ಲರೂ ಒಂದೇ. ನಾವೆಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಮತ್ತು ಆ ಪ್ರೀತಿಯನ್ನು ತುಂಬಾ ಸರಳವಾಗಿ ಹೇಳಬೇಕು ಅಂದ್ರೆ, ಇವರು ದೀಪಿಕಾ ಪಡುಕೋಣೆ.. ಇವರು ಅಮರ್. ನಾನು ಶಾರುಖ್ ಖಾನ್.. ನಾನು ಅಕ್ಬರ್. ಇವರು ಜಾನ್ ಅಬ್ರಾಹಂ.. ಇವರು ಆಂಟೋನಿ. ದಿಸ್ ಈಸ್ ವಾಟ್ ಮೇಕ್ಸ್ ಸಿನಿಮಾ. ನಮ್ಮಲ್ಲಿ ಯಾರಿಗೂ ಯಾವುದೇ ಸಂಸ್ಕೃತಿ, ಜೀವನದ ಅಂಶಗಳ ಬಗ್ಗೆ ವ್ಯತ್ಯಾಸಗಳಿಲ್ಲ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಅದಕ್ಕಾಗಿಯೇ ಚಲನಚಿತ್ರಗಳನ್ನು ನಿರ್ಮಿಸುತ್ತೇವೆ ಎಂದು ಪ್ರೀತಿಯಿಂದಲೇ” ತಮ್ಮ ವಿರುದ್ಧದ ಟೀಕೆಗೆ ಉತ್ತರಿಸಿದರು.
“ಪ್ರತಿಯೊಬ್ಬರ ಉದ್ದೇಶ ಒಂದೇ ಆಗಿರುತ್ತದೆ. ನಾವು ಸಂತೋಷ, ಸೋದರತ್ವ, ಪ್ರೀತಿಯನ್ನ ಹಂಚಬೇಕು ಎಂಬುದು. ನಾನು ‘ಡರ್’, ‘ಬಾಜಿಗರ್’ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದೇನೆ. ಈಗ ‘ಪಠಾಣ್’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಅವರದ್ದು ನೆಗೆಟಿವ್ ಕ್ಯಾರೆಕ್ಟರ್ ಇರಬಹುದು. ಆದರೆ, ನಾವ್ಯಾರೂ ಕೆಟ್ಟವರಲ್ಲ. ನಿಮ್ಮನ್ನೆಲ್ಲ ಖುಷಿ ಪಡಿಸಲು ನಾವು ಪಾತ್ರಗಳಿಗೆ ಜೀವ ತುಂಬುತ್ತಿದ್ದೇವೆ. ಸಿನಿಮಾದಲ್ಲಿ ನಾವು ಏನೇ ಹೇಳಿದರೂ, ಅದು ಯಾರದ್ದೇ ಭಾವನೆಗಳಿಗೆ ಧಕ್ಕೆ ತರುವ ಅಥವಾ ಯಾರಿಗೂ ನೋವು ಕೊಡುವ ಉದ್ದೇಶ ನಮಗಿಲ್ಲ. ಅದು ಎಂಟರ್‌ಟೇನ್ಮೆಂಟ್ ಅಷ್ಟೇ” ಎಂದು ತಿಳಿಸಿದರು.

ತಮ್ಮ ಹಿಂದಿನ ಚಿತ್ರ ಫ್ಲಾಪ್ ಆದ ಕುರಿತು ಮಾತನಾಡಿದ ಅವರು, ನನ್ನ ಚಿತ್ರ ಹಿಟ್ ಆಗದಿದ್ದರೂ ನನಗೆ ಅಭಿಮಾನಿಗಳು ಅದೇ ರೀತಿಯ ಪ್ರೀತಿಯನ್ನು ನೀಡುತ್ತಾರೆ. ನಿನಗೆ ದುಃಖವಾದಾಗ ನಿನಗೆ ಪ್ರೀತಿ ನೀಡುವವರ ಬಳಿ ಹೋಗು ಎಂದು ಹಿರಿಯರು ನನಗೆ ಹೇಳಿದ್ದರು. ಎಲ್ಲರಿಗೂ ಎಲ್ಲದೂ ಕೈಗೂಡುವುದಿಲ್ಲ. ಜೀವನವೇ ಹಾಗೆ. ಅದು ಹಾಗೆಯೇ ಇರಬೇಕು. ಮನುಷ್ಯನಿಗೆ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎರಡೂ ಬರುತ್ತವೆ ಎಂದರು.
#Shah Rukh Khan #pathan #deepikapadukone #hindifilm #bollywood




