Hanuma Vihari : ಗಾಯದ ಸಮಸ್ಯೆ : ಒಂದೇ ಕೈಯಲ್ಲಿ ಬ್ಯಾಟಿಂಗ್‌ ಮಾಡಿ ಗಮನ ಸೆಳೆದ ಹನುಮ ವಿಹಾರಿ

ನವದೆಹಲಿ:ಫೆ.1: ಟೀಂ ಇಂಡಿಯಾ ಟೆಸ್ಟ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ, ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಕೈಯಲ್ಲಿ ಬ್ಯಾಟಿಂಗ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಂಧ್ರಪ್ರದೇಶ ಪರ ಆಡುತ್ತಿರುವ ಹನುಮ ವಿಹಾರಿ, ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಮಧ್ಯಪ್ರದೇಶ ವಿರುದ್ಧದ ಪಂದ್ಯದ ವೇಳೆ ತಮ್ಮ ಬಲ ಮೊಣಕೈನ ಗಾಯದ ಸಮಸ್ಯೆಗೆ ಸಿಲುಕಿದರು. ಆದರೆ ತಮ್ಮ ಛಲಬಿಡದ ಹನುಮ ವಿಹಾರಿ, ಗಾಯದ ಸಮಸ್ಯೆ ನಡುವೆಯೂ ಮೈದಾನಕ್ಕಿಳಿದು ಎಡಗೈನಲ್ಲಿ ಬ್ಯಾಟಿಂಗ್‌ ಮಾಡಿದರು. ‌

ಬಲಗೈ ಫ್ಯಾಕ್ಚರ್‌ ಆದರೂ ಒಂದೇ ಕೈಯಲ್ಲಿ ಬ್ಯಾಟಿಂಗ್‌ ಮಾಡಿದ ವಿಹಾರಿ, 57 ಬಾಲ್‌ಗಳಲ್ಲಿ 27 ರನ್‌ಗಳಿಸಿ ಗಮನ ಸೆಳೆದರು. ಅಂತಿಮವಾಗಿ ಸರಾನ್ಶ್‌ ಜೈನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಹನುಮ ವಿಹಾರಿ ಅವರ ಹೋರಾಟದ ಪರಿಣಾಮ ಆಂಧ್ರ ಪ್ರದೇಶ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 127.1 ಓವರ್‌ಗಳಲ್ಲಿ 379 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.

ಆಂಧ್ರ ಪ್ರದೇಶ ತಂಡದ ನಾಯಕನಾಗಿರುವ ಹನುಮ ವಿಹಾರಿ ಅವರ ಈ ಪ್ರದರ್ಶನ ತಂಡದ ಯುವ ಆಟಗಾರರ ಗಮನ ಸೆಳೆಯಿತು. ಭಾರತ ಟೆಸ್ಟ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿರುವ ವಿಹಾರಿ, ಕಳೆದ 2 ವರ್ಷದಿಂದ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಎರಡು ವರ್ಷದ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯದಲ್ಲಿ ಹನುಮ ವಿಹಾರಿ ಹಾಗೂ ಆರ್.‌ ಅಶ್ವಿನ್‌ ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ಪಂದ್ಯವನ್ನ ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದರು.

More News