Tarakarat : ತಾರಕರತ್ನ ಸ್ಥಿತಿ ಇನ್ನೂ ಚಿಂತಾಜನಕ : ಮೆದುಳು ಹಾನಿ ಹಿನ್ನಲೆ ನಿರಂತರ ಚಿಕಿತ್ಸೆ

ಬೆಂಗಳೂರು:ಫೆ.2; ತಾರಕರತ್ನ ಅವರ ಹೃದಯ ಮತ್ತಿತರ ಅಂಗಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಆದರೆ ಮೆದುಳು ಹಾನಿಯಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ ಎನ್ನಲಾಗಿದೆ. ತಾರಕ ರತ್ನ ಆರೋಗ್ಯ ಸ್ಥಿತಿ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ವೈದ್ಯರು, ತಾರಕ್ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಟಿಡಿಪಿ ನಾಯಕ ಬುಚ್ಚಯ್ಯ ಚೌಧರಿ, ತಾರಕರತ್ನ ಕುಪ್ಪಂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರ ನಾಡಿಮಿಡಿತವೂ ಕ್ಷೀಣಿಸಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ತಾರಕ ರತ್ನ ಅವರ ಮೆದುಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ತಾರಕರತ್ನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ನೀಡಿದರು.

ತಾರಕ್ ರತ್ನ ಆಸ್ಪತ್ರೆ ದಾಖಲಾಗುತ್ತಿದ್ದಂತೆ ನಟರ ದಂಡು ಆಸ್ಪತ್ರೆ ಗೆ ದೌಡಾಯಿಸಿದೆ. ಈ ವೇಳೆ ಮಾತನಾಡಿದ ನಟ
ಜೂನಿಯರ್ ಎನ್ ಟಿಆರ್, ತಾರಕರತ್ನ ದೇಹ ಚಿಕಿತ್ಸೆಗೆ ಸಹಕರಿಸುತ್ತಿದ್ದು, ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು. ತಾರಕರತ್ನ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮಂಚು ಮನೋಜ್ ಹೇಳಿದ್ದಾರೆ.

ತಾರಕರತ್ನ ತಂದೆ ರಾಮಕೃಷ್ಣ ಮಾತನಾಡಿ, ತಾರಕ್ ಗೆ ಕೃತಕ ಉಸಿರಾಟ ಚಿಕಿತ್ಸೆ ಕೊಟ್ಟಿಲ್ಲ. ಸಹಜವಾಗಿ ಉಸಿರಾಡುತ್ತಿದ್ದಾರೆ. ಮೆದುಳು ಹಾನಿಯಾದ ಕಾರಣ ಚಿಕಿತ್ಸೆ ಮುಂದು ವರೆದಿದೆ ಎಂದು ತಿಳಿಸಿದರು.

More News