Shah Rukh : ಶಾರುಖ್ ಗೆಲುವು ಗೆಲುವೇ ಅಲ್ಲ: ಯಶ್ ವಿಚಾರದಲ್ಲಿ ಹಾಗಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಬೆಂಗಳೂರು:ಫೆ.2; ಯಾರಿಗೂ ಗೊತ್ತಿಲ್ಲದ ನಟ ಯಶ್ ಕೆಜಿಎಫ್ ಸಿನಿಮಾ ಮೂಲಕ ₹500 ಕೋಟಿ ಮಾಡೋದಾದ್ರೆ, ಶಾರುಖ್ ಖಾನ್ ₹500 ಕೋಟಿ ರೂ ಬ್ಯುಸಿನೆಸ್ ಮಾಡೋದ್ರಲ್ಲಿ ದೊಡ್ಡ ವಿಷಯ ಏನಿಲ್ಲ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟೀಕಿಸಿದ್ದಾರೆ.

ಪಠಾಣ್ ಸಿನಿಮಾ ತೆರೆಗೆ ಬಂದು ಎರಡು ವಾರವೇ ಕಳೆಯುತ್ತಿದೆ. ಇಷ್ಟಾದರೂ ಬಾಕ್ಸ್ ಆಫೀಸ್ ನಲ್ಲಿ ಮಾಡ್ತಿರೋ ಸದ್ದು ನಿಲ್ತಿಲ್ಲ. ದಿನದಿಂದ ದಿನಕ್ಕೆ ಕಲೆಕ್ಷನ್ ಮೊತ್ತ ಏರುಗತಿಯಲ್ಲೇ ಇದೆ. ಯಶ್ ನಟನೆಯ ಕೆಜಿಎಫ್ ದಾಖಲೆಯನ್ನ ಶಾರುಖ್ ಖಾನ್ ರ ಪಠಾಣ್ ಸಿನಿಮಾ ಉಡೀಸ್ ಮಾಡ್ತಿದೆ ಎಂಬ ವಿಶ್ಲೇಷಣೆ ಬೆನ್ನಲ್ಲೇ
ಸದಾ ವಿವಾದದಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಶಾರುಖ್ ಖಾನ್ ಕುರಿತು ಖಾರವಾಗಿ ಟೀಕಿಸುವ ಮೂಲಕ ಮತ್ತೇ ಚರ್ಚೆ ಯಲ್ಲಿದ್ದಾರೆ.

ಕನೆಕ್ಟ್ ದಿಲ್ ಸೇ ಎಂಬ ಕಾರ್ಯಕ್ರಮದ ಸಂವಾದದ ವೇಳೆ ಪಠಾಣ್ ಬಾಕ್ಸಾಫೀಸ್‌ ಸಕ್ಸಸ್ ಬಗ್ಗೆ ಮಾತನಾಡಿದ ಅವರು, ಶಾರುಖ್ ಖಾನ್ ಬಾಲಿವುಡ್ ನಲ್ಲಿ ಬೇರೂರಿರುವ ನಟ. ತುಂಬಾನೇ ಫ್ಯಾನ್ ಫಾಲೋವರ್ಸ್ ಇರೋ ನಟ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಸ್ಯಾಂಡಲ್ ವುಡ್ ನಟ ಯಶ್ ಬಾಲಿವುಡ್ ಗೆ ಏನೇನೂ ಅಲ್ಲ. ಹೊಸಬ. ಬಾಲಿವುಡ್ ಗೆ ಪರಿಚಯವೇ ಇಲ್ಲದ ಯಶ್ ಐನೂರು ಕೋಟಿ ಗಳಿಕೆ ಮಾಡುತ್ತಾರೆ ಅಂದ್ರೆ ಶಾರುಖ್ ಗೆಲುವು ನನಗೆ ಗೆಲುವು ಅನಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದೆ ಇದ್ದಂತೆ ಸ್ಟಾರ್‌ಢಮ್ ಇದೆ ಅನ್ನೋದು ನನಗೀಗ ಅನುಮಾನ. ಯಶ್‌ಗಿಂತ ಶಾರುಖ್ ಖಾನ್ ದೊಡ್ಡ ನಟ. ಆದರೆ, ಯಶ್ ಕೂಡ ಅಷ್ಟೇ ದೊಡ್ಡ ಬ್ಯುಸಿನೆಸ್ ಮಾಡುತ್ತಾರೆ. ಅಂದರೆ ಜನರ ಅಭಿರುಚಿ ಬದಲಾಗಿದೆ. ಕಾಂತಾರ’ ಅಥವಾ ‘ಪುಷ್ಪ’ ದೊಡ್ಡ ಹಿಟ್ ಆಗುತ್ತೆ ಅಂದರೆ ಜನರ ದೃಷ್ಟಿಕೋನ ಬದಲಾಗಿದೆ ಎಂದರ್ಥ ಎಂದು ವಿಶ್ಲೇಷಣೆ ನೀಡಿದರು.

More News