ಬೆಂಗಳೂರು:ಫೆ.2: ಸಿನಿಮಾ ಕ್ಷೇತ್ರ ಈಗ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಕೋಟ್ಯಾಂತರ ರೂ.ಗಳನ್ನಯ ವ್ಯಯಿಸಿ, ಹೆಸರುವಾಸಿಯಾಗಿರುವ ಅನೇಕ ಸ್ಟಾರ್ ನಟರನ್ನಿಟ್ಟುಕೊಂಡು ಸಿನಿಮಾ ಮಾಡುವ ನಡುವೆಯೇ ಜನರ ಮೇಲೆ ಕಿರುಚಿತ್ರಗಳು ಸಹ ಹೆಚ್ಚು ಪ್ರಭಾವ ಬೀರಿದೆ. ಅದರ ಸಾಲಿಗೆ ಇದೀಗ ‘ನಮ್ ಏರಿಯಾ ಹಿರೋ ಎಂಬ ಕಿರುಚಿತ್ರ ಸಹ ಸೇರಿಕೊಂಡಿದ್ದು, ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ..

ಮೊಬೈಲ್ ಜನರ ಕೈ ಸೇರಿದ ಮೇಲೆ ಒಟಿಟಿಯಲ್ಲಿ ಬರುವ ಅನೇಕ ಸಿನಿಮಾ, ರಿಯಾಲಿಟಿ ಶೋಗಳನ್ನು ನೋಡಿಕೊಂಡು ಜನ ಸಿನಿಮಾ ಕಡೆ ಹೋಗೋ ಪರಿಪಾಠ ಕಡಿಮೆ ಆಗಿದೆ. ಹೀಗಾಗಿ ಜನರಿಗೆ ಒಂದು ಒಳ್ಳೆಯ ವಿಷಯವನ್ನು ನೀಡಬೇಕು ಎಂಬ ಅಭಿಲಾಷೆಯಿಂದ ನಮ್ ಏರಿಯಾ ಹೀರೋ ಎಂಬ ಕಿರುಚಿತ್ರವನ್ನು ದಿಲೀಪ್ ಎಂಬುವವರು ನಿರ್ದೇಶನ ಮಾಡಿದ್ದು, ದಿನಿ ಕಿರುಚಿತ್ರದ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ರೂಪಶೆಟ್ಟಿ ಹೀರೋಯಿನ್ ಆಗಿದ್ದಾರೆ. ವಿ.ಎಸ್.ಎಂಟರ್ ಪ್ರೈಸಸ್ ನ ಮಂಜುಳಾ ವಸಂತ್ ಅವರು ಪ್ರೊಡ್ಯೂಸರ್ ಆಗಿದ್ದಾರೆ. ಈ ಕಿರುಚಿತ್ರ ಫೆಬ್ರವರಿ 3 ನೇ ತಾರೀಕು ಎಲ್ಲಡೆ ಬಿಡುಗಡೆಗೆ ಸಿದ್ದಗೊಂಡಿದೆ.

ಕಿರುಚಿತ್ರಗಳನ್ನು ಪ್ರೋತ್ಸಾಹಿಸಲು ಅನೇಕರು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಕಿರುಚಿತ್ರಗಳನ್ನು ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುತ್ತಿದೆ. ಅದೇ ತರ ಅನೇಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ 20 ಕ್ಕೂ ಅಧಿಕ ಸೆಲಬ್ರೆಟಿಗಳು ನಮ್ ಏರಿಯಾ ಹೀರೋ ಕಿರುಚಿತ್ರದ ಪೋಸ್ಟರ್ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಾಕಿಕೊಳ್ಳುವ ಮೂಲಕ ಸಿನಿಮಾಗೆ ಭಾರೀ ಬೆಂಬಲ ನೀಡಿದ್ದಾರೆ..




