CM Ibrahim : ಸಿಡಿ ವಿಚಾರ ಕುರಿತು ನನ್ನ ಮಕ್ಕಳು ಕೇಳುತ್ತಿದ್ದಾರೆ ; ನಾನು ಏನೆಂದು ಉತ್ತರಿಸಲಿ : ಸಿಎಂ ಇಬ್ರಾಹಿಂ ಹೇಳಿಕೆ

ಬೆಳಗಾವಿ.ಫೆ.2: ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ‘ಸಿಡಿ ಷಡ್ಯಂತ್ರ’  ವಿಚಾರದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದರು.

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಡಿ ವಿಚಾರದ ಬಗ್ಗೆ ನಮ್ಮ ಮಕ್ಕಳು ಕೇಳುತ್ತಿದ್ದಾರೆ. ಸಿಡಿ ಅಂದ್ರೆ ಏನು? ಅದರಲ್ಲೇನಿದೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಆ ಮಕ್ಕಳಿಗೆ ನಾನು ಏನು ಹೇಳಲಿ? ಸಿಡಿ ಯಾಕೆ ತೆಗೆದರು ಎಂದು ಹೇಳಲಾ? ಥೂ ನಿಮ್ಮ ಜನ್ಮಕ್ಕೆ ಬೆಂಕಿಹಾಕಾ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ನಾಗಕನ್ಯೆ ಅಂತಾರೆ..ಇವರು ವಿಷಕನ್ಯೆ ಅಂತಾರೆ.. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳೋದು ಸತ್ಯ.. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳೋದು ಸತ್ಯ…ಇವರಿಗೆಲ್ಲ ಮಾನಮರ್ಯಾದೆ ಇದ್ದರೆ ಸಿಡಿ ಪ್ರಕಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ. ಇಂತಹ ಮಂತ್ರಿಗಳು ಇಂತಹ ಸಿಡಿಗಳು ಇದ್ರೆ ಮಹಾಮಾರಿ ಕೋರೋನ ಬರದೆ ಇರುತ್ತಾ? ಅತೀವೃಷ್ಠಿ ಆಗದೇ ಇರುತ್ತಾ ಎಂದು ಟೀಕಿಸಿದರು. ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಲೇ ಬಂದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ರಮೇಶ್ ಜಾರಕಿಹೊಳಿ ಹೇಳಿದ್ದು ಸರಿಯಾಗಿಯೇ ಇದೆ. ಪಾಪಾ ರಮೇಶ್‌ ಜಾರಕಿಹೊಳಿ ಚೌರಾನೇ ಮಾಡಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆ ಮಹಾನ್ ನಾಯಕರನ್ನ ರಾಜಕೀಯಕ್ಕೆ ಕೊಟ್ಟ ಜಿಲ್ಲೆ. ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥರೆಂದು ಹೇಳಕೊಳ್ಳುವಂತ ಅರ್ಹತೆ ಯಾರಿಗೂ ಇಲ್ಲ. ಪೂಜಾತಾ ಭಾವನೆಯಿಂದ ಆ ತಾಯಿಯನ್ನು ನೋಡಿಕೊಳ್ಳ ಬೇಕು. ಯಾರಾದರು ದುರುಪಯೋಗ ಪಡೆಸಿಕೊಂಡರೇ ನಾನೇ ಕೋರ್ಟಿಗೆ ಹೋಗಬೇಕಾಗುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು..

More News