ACTOR PAWAN KALYAN’S THREE MARRIAGE SECRET: ನಾನು ಮದುವೆಯ ವ್ಯಾಮೋಹದಿಂದ 3 ಮದುವೆ ಆಗಿದ್ದಲ್ಲ: ನಟ ಪವನ್ ಕಲ್ಯಾಣ್

ಸಿನಿಮಾದಿಂದ ರಾಜಕೀಯ ಕಡೆ ಮುಖ ಮಾಡಿರುವ ಟಾಲಿವುಡ್ ನಟ ಪವನ್ ಕಲ್ಯಾಣ್ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮದೇ ಸಿನಿಮ್ಯಾಟಿಕ್ ಸ್ಟೈಲ್ ನಲ್ಲಿ ಮತದಾರರ ಬಳಿ ಮತದಾನ ಕೇಳಲು ಪ್ರಾರಂಭಿಸಿದ್ದಾರೆ. ಆದರೆ ಪವನ್ ಕಲ್ಯಾಣ್ ರ ಮದುವೆ ವಿಚಾರ ಮಾತ್ರ ಯಾವಾಗಲೂ ಚರ್ಚೆಗೆ ಗ್ರಾಸವಾಗ್ತಿದೆ.

ಒಂದಲ್ಲ, ಎರಡಲ್ಲ, ಮೂರನೇ ಮದುವೆ ಆಗಿರುವ ನಟ ಪವನ್ ಬಗ್ಗೆ ಆಗಾಗ ಟೀಕೆಗೆ ಒಳಪಡುತ್ತಲೇ ಇರುತ್ತದೆ. ಈ ಬಗ್ಗೆ ಮೊದಲ ಬಾರಿಗೆ ನಟ ಬಾಲಯ್ಯ ಮುಂದೆ ಮಾತನಾಡಿದ ನಟ ಪವನ್, ಹೊಂದಾಣಿಕೆಯ ಕೊರತೆಯಿಂದ ಮೂರು ಸಂಬಂಧಗಳು ಮುರಿದು ಬಿತ್ತು. ನಾನು ಒಂದೇ ಸಲಕ್ಕೆ ಮೂರು ಮದುವೆಯಾಗಿಲ್ಲ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಉತ್ತರಿಸಿದ್ದಾರೆ.
ಬಾಲಯ್ಯ ನಡೆಸಿ ಕೊಡುವ ಅನ್‌ಸ್ಟಾಪೆಬಲ್ ಶೋನಲ್ಲಿ ಮೂರು ಮದುವೆಯಾಗಿದ್ದು ಯಾಕೆ? ಎಂಬುದರ ಬಗ್ಗೆ ಮಾತನಾಡಿದ್ದಾರೆ. ನಾನು ಜೀವನದಲ್ಲಿ ಮದುವೆ ಆಗಲೇ ಬಾರದು ಎಂದು ಯೋಚಿಸಿದ್ದೆ. ಒಂಟಿಯಾಗಿರಬೇಕು ಎಂದು ಅಂದುಕೊಂಡಿದ್ದೆ.

ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲು ಮದುವೆಯಾದೆ ಹೊಂದಾಣಿಕೆ ಆಗಲಿಲ್ಲ, ಎರಡನೇಯದು ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿತ್ತು. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು ಎಂದು ತಿಳಿಸಿದರು.
ಮೂರು ಮದುವೆಯಾದೆ ಅಂತಾರಲ್ಲ. ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿದ್ದೇನಾ? ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು, ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ ಎಂದರು.

#UNSTOPABLE SHOW #ACTOR #TOLLYWOOD #PAWAN KALYAN #BALAIAH #MARRIAGE #THREE MARRIAGE #ADJUSTMENT #DIVORCE #POLITICAL CAMPAIGN #CRITICIZE

More News