ಬೆಂಗಳೂರು:ಫೆ.4: ಡಿಗ್ರಿ ಫೇಲಾಗ್ಬೇಕು.. ಕನ್ನಡ ಮರ್ತು, ಇಂಗ್ಲಿಷ್ ಕಲ್ತು, ಕಾಲ್ ಸೆಂಟರ್ ನಲ್ಲಿ ಕೆಲಸ ಹಿಡ್ಕೋ.. ವರ್ಷಕ್ಕೊಂದು ಹುಡ್ಗಿ ಕಳ್ಕೋ.. ಎಣ್ಣೆ ಏಟಲ್ಲಿ ಗಡ್ಡ ಬಿಟ್ಕೋ.. ಯಾರ್ ಸಿಗ್ತಾರೆ ತಾಳಿ ಕಟ್ಕೋ ಅಂತ ಹೇಳೋಕೆ ಮತ್ತೇ ದೂದ್ ಪೇಡ ದಿಗಂತ್ ಬರ್ತಿದ್ದಾರೆ. ವ್ಯಾಲಂಟೈನ್ಸ್ ಡೇ ಪ್ರಯುಕ್ತ ಪಡ್ಡೆ ಹೈಕ್ಳಿಗೆ ಪಾಠ ಮಾಡೋಕೆ ಬರ್ತಿದ್ದಾರೆ ದಿಗಂತ್, ಪವನ್..
ದೊಡ್ಡಮಟ್ಟದಲ್ಲಿ ತೆರೆ ಕಂಡು, ಸದ್ದು, ಸುದ್ದಿ ಮಾಡಿದ್ದ ಸಿನಿಮಾಗಳನ್ನು ರೀ ರಿಲೀಸ್ ಮಾಡೋ ಟ್ರೆಂಡ್ ಶುರುವಾಗಿದೆ.. ಇತ್ತೀಚೆಗೆ ಅಷ್ಟೇ ನಟ ಉಪೇಂದ್ರ ನಟನೆಯ ಉಷ್ ಚಿತ್ರಕ್ಕೆ ಈಗಿನ ಟ್ರೆಂಡ್ ನ ಟಚ್ ಕೊಟ್ಟು ತೆರೆ ಮೇಲೆ ತರೋ ಸಿದ್ದತೆ ಕುರಿತು ಮಾಹಿತಿ ಕೊಡಲಾಗಿತ್ತು.. ಇದೀಗ ನಟ ದಿಗಂತ್ ನಟನೆಯ ಲೈಫು ಇಷ್ಟೇನೆ ಮರುಬಿಡುಗಡೆಯಾಗಲು ರೆಡಿಯಾಗಿದೆ.

2011ರಲ್ಲಿ ತೆರೆಕಂಡಿದ್ದ ಪವನ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾ ಲೈಫು ಇಷ್ಟೇನೆ ಮತ್ತೇ ತೆರೆ ಮೇಲೆ ಬರ್ತಿದೆ.. ಫೆಬ್ರವರಿ 10 ರಂದು ಮರು ಬಿಡುಗಡೆ ಕುರಿತು ನಿರ್ದೇಶಕ ಪವನ್ ಕುಮಾರ್ ಪೋಸ್ಟ್ ಹಂಚಿಕೊಂಡಿದ್ದು, ಪ್ರೇಮಿಗಳ ದಿನಾಚರಣೆಯ ವಾರದ ಪ್ರಯುಕ್ತ ಲೈಫು ಇಷ್ಟೇನೆ ಚಿತ್ರವನ್ನು ಮರು ಬಿಡುಗಡೆ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದ್ದಾರೆ..
ಲೈಫು ಇಷ್ಟೇನೆ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಮತ್ತು ಸಂಯುಕ್ತ ಬೆಳವಾಡಿ , ರಮ್ಯ ಬರ್ನ, ನಾಯಕಿಯರಾಗಿ ಅಭಿನಹಿಸಿದ್ದಾರೆ. ಅನಂತ್ ನಾಗ್, ಸಿಂಧು ಲೋಕನಾಥ್, ಮೊದಲಾದವರ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.. ಪವನ್ ಕುಮಾರ್ ಅವರ ನಿರ್ದೇಶನ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಸಿನಿಮಾದಲ್ಲಿದೆ.




