MASTER ANAND AND HIS DAUGHTER: ಎಲ್ಲರನ್ನೂ ಓದಿಸಿಯೇ ದೊಡ್ಡವರನ್ನಾಗಿ ಮಾಡ್ಬೇಕಾ..?: ನಟ ಆನಂದ್ ಪ್ರಶ್ನೆ..!

ರಿಯಾಲಿಟಿ ಶೋ ಗಳು ಮಕ್ಕಳ ಇನೋಸೆನ್ಸ್ ನ್ನ ಹಾಳು ಮಾಡ್ತವೆ.. ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ.. ಮಕ್ಕಳ ಬಾಲ್ಯವನ್ನ ಕಸಿದುಕೊಳ್ತಿವೆ ಎಂದೆಲ್ಲಾ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಓದಿಸಿಯೇ ಮಕ್ಕಳನ್ನ ದೊಡ್ಡವರನ್ನಾಗಿ ಮಾಡ್ಬೇಕಾ ಎಂದು ಪ್ರಶ್ನೆ ಹಾಕಿದ್ದಾರೆ ನಟ ಆನಂದ್..!
ಆನಂದ್ ಪುತ್ರಿ ವಂಶಿಕ ನಿರಂತರವಾಗಿ ರಿಯಾಲಿಟಿ ಶೋ ಗಳಲ್ಲಿ ಭಾಗಿಯಾಗುತ್ತಿರುವ ಹಿನ್ನಲೆಯಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಖಾಸಗಿ ಚಾನಲ್ ನಲ್ಲಿ ಮಾತನಾಡಿದ ಅವರು, ದುಡ್ಡಿನ ಆಸೆ ಗೋಸ್ಕರ ಮಗಳು ವಂಶಿಕಾಳಿಂದ ಕಂಟಿನ್ಯೂ ಆಗಿ ಶೋ ಮಾಡಿಸ್ತಿದ್ದೇನೆ.. ಅವ್ಳನ್ನ ಓದಿಸೋದಿಲ್ವಾ ಎಂದೆಲ್ಲಾ ಪ್ರಶ್ನೆ ಬರ್ತಿವೆ.. ಆದರೆ ಎಲ್ಲರನ್ನೂ ಓದಿಸಿಯೇ ದೊಡ್ಡವರನ್ನಾಗಿ ಮಾಡ್ಬೇಕಾ ಎಂದು ನಟ ಆನಂದ್ ಪ್ರಶ್ನೆ ಹಾಕಿದ್ದಾರೆ.

ಕಾಮನ್ ಮ್ಯಾನ್ ಗೆ ಇದು ಅರ್ಥ ಆಗಲ್ಲ.. ನಾವು ಏನೋ ಕಮರ್ಷಿಯಲೀ ಮಾಡ್ತಿದ್ದೀವಿ ಅನಿಸುತ್ತೆ. ದೈವದತ್ತವಾಗಿ ಅವಳಿಗೆ ನಟನೆ ಬಂದಿದೆ. ತಂದೆಯಾಗಿ ನಾನು ಪ್ರೋತ್ಸಾಹ ನೀಡುತ್ತಿದ್ದೇನೆ. ಮಗಳು ಆ್ಯಕ್ಟ್ ಮಾಡ್ತಾಳೆ ಎಂದು ಅಂದಾಜಿರ್ಲಿಲ್ಲ.. ಶೋ ಒಂದಕ್ಕೆ ಹೋದಾಗ ಎಲ್ಲಾ ಕಂಟೆಸ್ಟೆಂಟ್ ರೀತಿ ಹೋಗಿ ಬರ್ತಾಳೆ ಅನ್ಕೊಂಡ್ವಿ. ಆದರೆ ಅವಳ ಡೈಲಾಗ್ ಡೆಲಿವರಿಯಿಂದ ಕ್ಲಿಕ್ ಆದಳು ದೇವರ ದಯೆ ಯಿಂದ ಎಂದರು.
“ತಂದೆಯಾಗಿ ನೋವಾಗಿದೆ ನಂಗೆ”

ನಮ್ಮ ಮೇಲೆ ಕಲ್ಲು ಎಸೆದರೂ ನಾವು ರಿಯಾಕ್ಟ್ ಮಾಡ್ಬಾರ್ದು.. ಆದರೆ ನಾನು ರಿಯಾಕ್ಟ್ ಆದೆ. ಆ್ಯಸ್ ಎ ಫಾದರ್ ಆಗಿ ನೋವಾಗಿದೆ.. ಆದರೆ ಅವಳ ತಂದೆ ನಾನು.. ಜೊತೆಗೆ ನಾನು ಬಾಲ ನಟನಾಗಿಯೇ ಈ ಫೀಲ್ಡ್ ಗೆ ಬಂದವನು. ನನ್ನ ಲೈಫ್ ಅನುಭವವೇ ನಂಗೆ ಇದೆ. ಹಾಗಿದ್ದಾಗ ನಾನು ಸ್ಕೂಲ್ ಗೆ ರಜೆ ಹಾಕಿಸಿ ಡ್ರಾಮಾ ಮಾಡಿಸ್ತಾರೆ ಎಂದೆಲ್ಲಾ ಹೇಳ್ತಾರೆ.. ಅವಳ ಹಾಜರಾತಿ ಕಡಿಮೆ ಇರಬಹುದು.. ಮತ್ತು ಈಗ ಅವಳು ಓದ್ತಿರೋದು ಎಲ್ ಕೆ ಜಿ.‌. ಕಮೆಂಟ್ ಮಾಡವ್ರಿಗೆ ಅವಳ ಸ್ಕೂಲ್ ಟೈಂ ಏನು ಗೊತ್ತಿದೆ..? 11.30 ಕ್ಕೆ ಶಾಲೆ ಬಿಟ್ಟು ಬಿಡುತ್ತೆ. ಸ್ಕೂಲ್ ಮುಗಿಸಿ ಕ್ಲಾಸ್ ಗೆ ಹೋಗ್ತಾಳೆ.. ಶೂಟಿಂಗ್ ಇದ್ದ ದಿನ ಸ್ಕೂಲ್ ಮಿಸ್ ಆಗುತ್ತೆ ಅಷ್ಟೇ.. ಬೇರೆ ಮಕ್ಕಳ ರೀತಿ 100 ರಲ್ಲಿ 90% ಹಾಜರಾತಿ ಇಲ್ಲದಿರಬಹುದು. ಆದರೆ ಕಳೆದುಕೊಳ್ಳುವಂತಹದ್ದೇನು ಇಲ್ಲ..! ನಿರಂತರವಾಗಿ ಅವ್ಳನ್ನ ನಟನೆಗೆ ಬಿಡಬೇಕೆಂದು ನಂಗೆ ಅನಿಸಿಲ್ಲ. ಸಿನಿಮಾ ಕಡೆ ಅವಕಾಶ ಹುಡುಕ್ತಿದ್ದೇನೆ. ಆ ಕಡೆಯೇ ಹೆಚ್ಚು ಫೋಕಸ್ ಮಾಡ್ತಿದ್ದೇನೆ ಎಂದರು.

ನಟ ಆನಂದ್ ಪುತ್ರಿ ವಂಶಿಕ ಸಧ್ಯಕ್ಕೆ ಎರಡು ಸಿನಿಮಾಗಳಲ್ಲಿ ಬ್ಯುಸಿ ಇದ್ದಾಳೆ. “ನಾಲಕ್ಕನೇ ಆಯಾಮ” ಮತ್ತು ಲವ್ ಲೀ ಸಿನಿಮಾ ದಲ್ಲಿ ಬಣ್ಣ ಹಚ್ಚಿದ್ದಾಳೆ. ಲವ್ ಲೀ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ನಟಿಸಿದ್ದಾಳೆ. ಸಧ್ಯಕ್ಕೆ ಪಟಾಕಿ ಪೋರಿ ಎಂಬ ಯೂಟ್ಯೂಬ್ ಚಾನಲ್ ನಲ್ಲಿ ನಟಿಸುತ್ತಿದ್ದು, ವೆಬ್ ಸೀರಿಸ್ ಮಾದರಿ ಬಿಡುಗಡೆ ಆಗುತ್ತಿದೆ.

#MASTER ANAND #VAMSHIKA ANAND #REALITY SHOW #BUSY #PATAKI PORI #WE SERIES ACT #SCHOOL #DAUGTER #EDUCATION

More News