ಬೆಂಗಳೂರು:ಫೆ.6: ಟೀಂ ಇಂಡಿಯಾ ಆಟಗಾರ ಶಿಖರ್ ದವನ್ ಇಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಮನೆಗೆ ದಿಢೀರ್ ಅಂತ ಭೇಟಿ ಮಾಡಿದ್ದಾರೆ.


ಕ್ರೀಡಾ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರ ಪರಸ್ಪರ ಮುಖಾಮುಖಿಯಾಗಿ ಕೆಲಸ ಮಾಡ್ತಿದೆ. ಕ್ರಿಕೆಟ್ ದಿಗ್ಗಜ ಎಂದೇ ಹೆಸರಾದ ಸಚಿನ್ ತೆಂಡೂಲ್ಕರ್ ಕುರಿತು ಸಿನಿಮಾ ಮಾಡಿದ್ದು, ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದ ದೋನಿ ಕುರಿತು ಸಿನಿಮಾ ಮಾಡಿದ್ದು ಎಲ್ಲವೂ ಒಂದೊಂದು ಇತಿಹಾಸ ವಾಗಿ ಉಳಿದುಕೊಂಡಿದೆ. ಅನೇಕ ಸಂದರ್ಭಗಳಲ್ಲಿ ನಡೆಯುವ ಸಭೆ, ಸಮಾರಂಭದಲ್ಲಿ ಸಿನಿಮಾ ತಾರೆಯರು ಹಾಗೂ ಕ್ರಿಕೆಟ್ ದಿಗ್ಗಜರು ಒಂದೇ ವೇದಿಕೆಯಲ್ಲಿ ಸಮಾಗಮ ಆಗ್ತಾರೆ. ಈ ಪದ್ದತಿಯು ಬಾಲಿವುಡ್ ನಲ್ಲಿ ಹೆಚ್ಚಿತ್ತು. ಆದರೆ, ಇದೀಗ ದಕ್ಷಿಣ ಭಾರತಕ್ಕೂ ವಿಸ್ತರಿಸಿಕೊಂಡಿದ್ದು, ನಟ ಕಿಚ್ಚನ ಮನೆಗೆ ದವನ್ ಆಗಮನ ಗಮನ ಸೆಳೆದಿದೆ.

ಕಿಚ್ಚ ಸುದೀಪ್ ಮತ್ತು ದವನ್ ಯಾವ ಕಾರಣಕ್ಕಾಗಿ ಭೇಟಿಯಾಗಿದ್ದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ಬಗ್ಗೆ ಟ್ವಿಟರ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟ ಕಿಚ್ಚ ಸುದೀಪ್, ನನ್ನ ಗೆಳೆಯನಿಗೆ ಮುಂದಿನ ದಿನಗಳಲ್ಲಿ ಬರುವ ಐಪಿಎಲ್ ಪಂದ್ಯಾವಳಿಯಲ್ಲಿ ಗೆಲುವು ಸಿಗಲಿ ಎಂದಿದ್ದಾರೆ. ಶಿಖರ್ ಧವನ್ ಜೊತೆ ಅವರದ್ದೇ ಸ್ಟೈಲ್‌ನಲ್ಲಿ ಕಿಚ್ಚ ಪೋಸ್ ಕೊಟ್ಟ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ನನ್ನ ಗೆಳೆಯನೊಂದಿಗೆ ಅಪೂರ್ವವಾದ ರಾತ್ರಿಯನ್ನು ಕಳೆದಿರುವೆ ಎಂದು ಟ್ವೀಟ್ ಮಾಡಿದ್ದಾರೆ.




