ನವದೆಹಲಿ:ಫೆ.7: ನನ್ನ ಬಟ್ಟೆ ಹರಿಯುವಂತಿಲ್ಲ. ಬೇಕಿದ್ದರೆ ನೀನು ರೇಪ್ ಸೀನ್ ಮಾಡು ಎನ್ನುತ್ತಿದ್ದೆ ಇದಕ್ಕೆ ನನ್ನನ್ನು ಅಹಂಕಾರಿ ಎಂದರು ಎಂದು ಬಾಲಿವುಡ್ ನಟಿ ರವೀನಾ ಟಂಡನ್ ಸಿನಿಮಾ ಅನುಭವದ ಕುರಿತು ಮಾತನಾಡಿದ್ದಾರೆ.

ಥೂ ಚೀಸ್ ಬಡಿ ಹೈ ಮಸ್ತ್ ಮಸ್ತ್.. ಥೂ ಚೀಸ್ ಬಡಿ ಹೈ ಮಸ್ತ್.. ಎಂದು ಬಾಲಿವುಡ್ ನಲ್ಲಿ ಮಿಂಚನ್ನು ಹರಿಸಿದ್ದ
90ರ ದಶಕದ ಬಾಲಿವುಡ್‌ನ ಬಹುಬೇಡಿಕೆಯ ನಟಿ ರವೀನಾ ಟಂಡನ್ ಬರು ಬರುತ್ತಾ ಸಿನಿಮಾ ಆಫರ್ ಇಲ್ಲದೇ ಬ್ಯುಸಿನೆಸ್ ಕಡೆ ಮುಖ ಮಾಡಿದ್ದಾರೆ.. ಬಹಳಷ್ಟು ಹಿಟ್ ಸಿನಿಮಾ ನೀಡಿದ ನಟಿ ಏಕಾಏಕಿ ಯಾಕೆ ಮಂಕಾದರು.? ಬಾಲಿವುಡ್ ಸಿನಿ ಇಂಡಸ್ಟ್ರಿ ಯಿಂದ ಆಫರ್ ಕಡಿಮೆ ಆಯಿತಾ ಎಂಬ ಪ್ರಶ್ನೆ ಗೆ ನಂಗೆ ಅಹಂಕಾರಿ ಪಟ್ಟ ಕೊಟ್ಟ ಕಾರಣ ಆಫರ್ ಕಡಿಮೆ ಆದವು ಎಂದು ತಿಳಿಸಿದ್ದಾರೆ.

ಸಂದರ್ಶನ ವೊಂದರಲ್ಲಿ ಮಾತನಾಡಿದ ನಟಿ ರವೀನಾ, ಸಿನಿಮಾ ಇಂಡಸ್ಟ್ರಿ ಯಲ್ಲಿ ಕೆಲ ವಿಚಾರಗಳು ಕಂಫರ್ಟ್ ಎನಿಸುತ್ತಿರಲಿಲ್ಲ. ನನಗೆ ಕಂಪರ್ಟ್ ಅನಿಸದಿದ್ರೆ ನೇರವಾಗಿ ಹೇಳ್ತಿದ್ದೆ. ಅನ್ ಕಂಫರ್ಟೆಬಲ್ ಅನಿಸೋ ಸ್ಟೆಪ್ ಮಾಡಲ್ಲ, ಸ್ವಿಮ್‌ಸೂಟ್ ಧರಿಸಲು ಇಷ್ಟ ಇರಲಿಲ್ಲ.. ಅಲ್ಲದೇ ನನಗೆ ಕಿಸ್ಸಿಂಗ್ ಸೀನ್‌ಗಳಲ್ಲಿ ನಟಿಸಲು ಇಷ್ಟ ಇರಲಿಲ್ಲ. ಇದನ್ನು ನೇರವಾಗಿ ಹೇಳಿದ ಕಾರಣ ನನಗೆ ದುರಹಂಕಾರಿ ಪಟ್ಟ ಕೊಟ್ಟರು. ಬರು ಬರುತ್ತಾ ಆಫರ್ಸ್ ಕಡಿಮೆ ಆದವು ಎಂದು ಮಾತನಾಡಿದ್ದಾರೆ.
ಶೂಟಿಂಗ್‌ಗೂ ಮೊದಲೇ ಒಪ್ಪಂದದ ಸಮಯದಲ್ಲಿ ಈ ಷರತ್ತುಗಳನ್ನೆಲ್ಲಾ ಹೇಳುತ್ತಿದ್ದೆ ಇದರಿಂದಲೇ ಸಾಕಷ್ಟು ಅವಕಾಶಗಳು ಕಳೆದುಕೊಂಡವು. ಎರಡು ರೇಪ್ ಸೀನ್‌ಗಳಲ್ಲಿ ಕಾಣಿಸಿಕೊಂಡೆ. ಆದರೆ ಅಶ್ಲೀಲತೆಗೆ ಆಸ್ಪದ ಕೊಡದಂತೆ ನಟಿಸಿದೆ. ಬಟ್ಟೆ ಹರಿಯದೇ ರೇಪ್ ಸೀನ್‌ನಲ್ಲಿ ನಟಿಸಿದ್ದು ನಾನು ಮಾತ್ರ ಎನಿಸುತ್ತೆ ಎಂದು ನೆನೆದು ನಕ್ಕರು.

‘ಢರ್’ ಸಿನಿಮಾ ಅವಕಾಶ ಮೊದಲು ನನಗೆ ಬಂದಿತ್ತು. ಚಿತ್ರದಲ್ಲಿ ಅಶ್ಲೀಲ ಇಲ್ಲದಿದ್ರೂ ಮೊದಲ ಒಂದು ಸೀನ್ ನಲ್ಲಿ ನಾನು ಸ್ವಿಮ್ ಸೂಟ್ ನಲ್ಲಿ ಬರಬೇಕೆಂದು ತಿಳಿಸಿದರು. ಅದು ನನಗೆ ಕಂಫರ್ಟ್ ಎನ್ನಿಸಲಿಲ್ಲ. ಸ್ವಿಮ್ ಸೂಟ್ ಧರಿಸಲ್ಲ ಎಂದು ಹೇಳಿದ್ದೆ. ಹಾಗಾಗಿ ಆ ಪ್ರಾಜೆಕ್ಟ್ ನನ್ನ ಕೈ ತಪ್ಪಿ ಹೋಯ್ತು ಎಂದು ತಮ್ಮ ಸಿನಿ ಜರ್ನಿಯನ್ನು ಮೆಲುಕು ಹಾಕಿದರು.




