Politics of Rowdies : ಮಂಡ್ಯದಲ್ಲಿ ಶುರುವಾಯ್ತು ರೌಡಿಗಳ ರಾಜಕೀಯ..!

ಮಂಡ್ಯ: ಫೆ.8: ಸೈಲೆಂಟ್ ಸುನೀಲನ ಬಳಿಕ ಮಂಡ್ಯದಲ್ಲಿ ರೌಡಿಗಳ ರಾಜಕೀಯ ಗರಿಗೆದರಿದೆ. ಮಂಡ್ಯದಲ್ಲೂ ಶುರುವಾಯ್ತು ರೌಡಿ ರಾಜಕಾರಣ, ರೌಡಿಸಂ ಜೊತೆಗೆ ರಾಜಕೀಯದತ್ತ ಮುಖ ಯುವ ರೌಡಿಗಳು ಮುಖ ಮಾಡಿದ್ದಾರೆ.  

ಇಬ್ಬರು ರೌಡಿ ಶೀಟರ್ಸ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ರೌಡಿಸಂ ಜೊತೆಗೆ ರಾಜಕೀಯವನ್ನು ಆರಂಭಿಸಿದ್ದಾರೆ. ಹೌದು, ಮದ್ದೂರು ಪೊಲೀಸ್ ಠಾಣೆಯ ರೌಡಿ ಶೀಟರ್ ವರುಣ್ ಗೌಡ ಅಲಿಯಾಸ್ 202 ಹಾಗೂ ಪ್ರಶಾಂತ್ ಅಲಿಯಾಸ್ ಕುಳ್ಳಿ ಈ ಇಬ್ಬರು ರೌಡಿಗಳು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ. ಮದ್ದೂರು ಶಾಸಕ ಡಿಸಿ ತಮ್ಮಣ್ಣ ನೇತೃತ್ವದಲ್ಲಿ ಸೇರ್ಪಡೆಗೊಂಡರು.

ವಿಧಾನಸಭಾ ಚುನಾವಣಾ ಹೊಸ್ತಿಲಲ್ಲೇ ಜೆಡಿಎಸ್ ಪಕ್ಷವನ್ನು ರೌಡಿಗಳು ಸೇರಿಕೊಂಡಿದ್ದಾರೆ. ಭರ್ಜರಿ ಬಾಡೂಟ ಹಾಕಿಸಿ ನೂರಾರು ಯುವಕರನ್ನ ಜೆಡಿಎಸ್ ಗೆ ಸೇರಿಸಿಕೊಂಡರು.

More News