ಸಿನಿ ಜಗತ್ತಿನ ಚಿತ್ತ ಪ್ಯಾನ್ ಇಂಡಿಯಾ ಕಬ್ಜ ಚಿತ್ರದತ್ತ ನೆಟ್ಟಿದೆ. ಚಿತ್ರದಲ್ಲಿ ಮಲ್ಟಿ ಸ್ಟಾರ್ ಇದ್ದು, ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಆಗಿಯೇ ಬರ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಇಲ್ಲಿ ರಿಯಲ್ ಭಾಯ್ ಆಗಿ ಕಂಗೊಳಿಸುತ್ತಿದ್ದಾರೆ ಎಂಬ ಸದ್ದು ಸುದ್ದಿ ಬೆನ್ನಲ್ಲೇ ಶಿವರಾಜ್ ಕುಮಾರ್ ಕೂಡ ಗ್ರ್ಯಾಂಡ್ ಎಂಟ್ರಿ ಕೊಡುವ ಸುದ್ದಿ ಸಧ್ಯ ಗಾಂಧಿ ನಗರದಲ್ಲಿ ಹಬ್ಬಿದೆ.
ಕಬ್ಜ ಚಿತ್ರದಲ್ಲಿ ನಾಯಕನಾಗಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಾಯಕಿಯಾಗಿ ಶ್ರೇಯಾ ಶರಣ್ ನಟಿಸಿದ್ದು, ಸ್ಟಾರ್ ನಟ ಕಿಚ್ಚ ಸುದೀಪ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಆದರೆ ಕಬ್ಜ ಸಿನಿಮಾ ತಂಡದಿಂದ ಹೊಸದೊಂದು ಮಾಹಿತಿ ಹೊರ ಬಿದ್ದಿದ್ದು, ಶಿವರಾಜ್ ಕುಮಾರ್ ಸಹ ತಮ್ಮದೇ ಖದರ್ ನಲ್ಲಿ ಎಂಟ್ರಿಯಾಗಲಿದ್ದಾರೆ ಎನ್ನಲಾಗಿದೆ.

ಮೊನ್ನೆಯಷ್ಟೇ ಕಬ್ಜ ಚಿತ್ರತಂಡ ತನ್ನ ಮೊದಲ ಹಾಡನ್ನು ಹೈದರಾಬಾದ್ನಲ್ಲಿ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಆದರೆ ಬಿಡುಗಡೆ ಕಂಡ ಟೀಸರ್ ದೃಶ್ಯವೊಂದರಲ್ಲಿ ಉಪೇಂದ್ರ ಅಕ್ಕಪಕ್ಕ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಸಹ ಇರುವಂತಿತ್ತು. ಈ ದೃಶ್ಯ ಹಿಂಬದಿಯ ದೃಶ್ಯವಾದ ಕಾರಣ ಈ ರೀತಿಯ ಅನುಮಾನ ಹಾಗೂ ಕುತೂಹಲ ಮೂಡಿತ್ತು. ಇದಕ್ಕೆ ಉತ್ತರಿಸಿದ ಕಬ್ಜ ಚಿತ್ರದ ನಿರ್ದೇಶಕ ಆರ್ ಚಂದ್ರು ನಿಮ್ಗೆಲ್ಲಾ ಅಚ್ಚರಿ ಕಾದಿದೆ ಎಂದಿದ್ದಾರೆ.

ಕಬ್ಜ ಚಿತ್ರದಲ್ಲಿ ಶಿವರಾಜ್ ಕುಮಾರ್ ಸಹ ಬಣ್ಣ ಹಚ್ಚಿದ್ದಾರಾ ಎಂಬ ಪ್ರಶ್ನೆಗೆ ಮಾತನಾಡಿದ ನಿರ್ದೇಶಕ ಆರ್ ಚಂದ್ರು, ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಸಹಜವಾಗಿ ಸಾಕಷ್ಟು ಕುತೂಹಲಗಳಿದೆ. ಅದನ್ನ ನಾನು ಈಗಲೇ ಬಿಚ್ಚಿಟ್ರೆ ನಿಮಗೆಲ್ಲಾ ಏನೂ ಗೊತ್ತಾಗಲ್ಲ. ಇನ್ನೂ ಯಾರಾರೆಲ್ಲಾ ಇದ್ದಾರೆ ಎಂಬುದನ್ನು ನೋಡಿದ್ರೆ ನೀವೇ ಓಹ್ ಇವರೆಲ್ಲಾ ಇದ್ದಾರಾ ಎಂದುಕೊಳ್ತೀರಿ. ಯಾರು ಇದ್ದಾರೆ ಎಂಬುದನ್ನು ನಾನು ಈಗಲೇ ಬಿಟ್ಟುಕೊಡಲ್ಲ. ಸರಿಯಾದ ಸಮಯದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡ್ತೀನಿ ಎಂದಿದ್ದಾರೆ.
ಸಧ್ಯ ಟೈಟಲ್ ಹಾಡನ್ನು ಮೊದಲಿಗೆ ಬಿಡುಗಡೆ ಮಾಡಿದ್ದ ಚಿತ್ರತಂಡ ತನ್ನ ಎರಡನೇ ಹಾಡನ್ನು ಫೆಬ್ರವರಿ 16ರಂದು ಬಿಡುಗಡೆ ಮಾಡಲಿದೆ.




