ಅಂಕಾರಾ.ಫೆ.8: ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಒಂದೇ ದಿನ ಮೂರು ಬಾರಿ ಕಂಪಿಸಿದ ಭೂಮಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಘನ ಘೋರ ಭೂಕಂಪಂನದಿಂದಾಗಿ ಮೃತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಮೆರಿಕದ ಜಿಯೋಲಾಜಿಕಲ್ ಸಮೀಕ್ಷೆಯ ಅಂದಾಜು ನಿಜವಾಗುತ್ತಿದ್ದು, ಪ್ರಬಲ ಭೂಕಂಪನದಲ್ಲಿ ಸಾವಿನ ಸಂಖ್ಯೆ 8 ಸಾವಿರಕ್ಕ ಅಧಿಕ ಎಂದು ವರದಿಯಾಗಿದೆ.
ಇದೆಲ್ಲದರ ಮಧ್ಯ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಪೋಟೋ ಮನಸ್ಸು ಕರಗಿಸುವಂತಿದೆ. ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ವಿಶ್ವಸಂಸ್ಥೆ ಪ್ರತಿನಿಧಿ ಮೊಹಮದ್ ಸಫಾ, ಇಬ್ಬರೂ 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದು ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಫೋಟೊ, ನೆಟ್ಟಿಗರ ಮನಸ್ಸನ್ನು ಕರಗಿಸಿದ್ದು ಸಂಕಟದ ಪರಿಸ್ಥಿತಿಯಲ್ಲೂ ಆಕೆಗಿರುವ ತಮ್ಮನ ಬಗೆಗಿನ ಕಾಳಜಿಗಾಗಿ ಆ ಬಾಲಕಿಯನ್ನು ಅನೇಕರು ಹೊಗಳಿದ್ದಾರೆ.

While under the rubble of her collapsed home this beautiful 7yr old Syrian girl has her hand over her little brothers head to protect him.
— Vlogging Northwestern Syria (@timtams83) February 7, 2023
Brave soul
They both made it out ok. pic.twitter.com/GrffWBGd1C
ಏಳು ವರ್ಷದ ಬಾಲಕಿ ತನ್ನ ಕಿರಿಯ ಸಹೋದರನ ತಲೆಯನ್ನು ಮುಚ್ಚಿ ಇಟ್ಟುಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದು. ಇಲ್ಲಿ ಇಬ್ಬರೂ ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿರುವ ಈ ಮಕ್ಕಳು ರಕ್ಷಣಾ ತಂಡದ ಗಮನಕ್ಕೆ ಬಂದಿದ್ದಾರೆ.

ಸಂಕಷ್ಟದಲ್ಲಿರುವ ಟರ್ಕಿ ಮತ್ತು ಸಿರಿಯಾ ದೇಶಗಳ ನೆರವಿಗೆ ಹಲವು ರಾಷ್ಟ್ರಗಳು ಬಂದಿವೆ. ಭಾರತ ಈಗಾಗಲೇ ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿರುವುದಲ್ಲದೆ, ಎಕ್ಸ್‌ರೆೇ, ವೆಂಟಿಲೇಟರ್‌ಗಳು, ಆಮ್ಲಜನಕ ಪ್ಲಾಂಟ್‌ಗಳು, ಕಾರ್ಡಿಯಾಕ್ ಮಾನಿಟರ್‌ಗಳು, ಮೆಡಿಸಿನ್ ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಉತ್ಪನ್ನಗಳನ್ನು ಈ ದೇಶಗಳಿಗೆ ಕಳುಹಿಸಿಕೊಟ್ಟಿದೆ.
ಫೆ.6 ರಂದು ಸಿರಿಯಾದಲ್ಲಿ 7.8 ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ನೆರೆಯ ಸಿರಿಯಾದಲ್ಲೂ ದೊಡ್ಡ ಪ್ರಮಾಣದಲ್ಲಿ ಭೂಕಂಪಿಸುವ ಮೂಲಕ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ




