ದಾವಣಗೆರೆ ಫೆ.8: ಯಾವ ಜಾತಿಯವರು ಬೇಕಾದ್ರು ಸಿಎಂ ಆಗಬಹುದ, ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಿದರೆ ಸಾಕು. ಇದು ಜಾತ್ಯಾತೀತ ರಾಷ್ಟ್ರ, ಯಾರು ಬೇಕಾದ್ರು ಸಿಎಂ ಆಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ದಾವಣೆಗೆರೆಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ‘ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ, ಲಿಂಗಾಯಿತರು ಮತ್ತು ಒಕ್ಕಲಿಗರಲ್ಲಿ ವಿಷ ಬೀಜ ಬಿತ್ತಿ, ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೂಸು ಹುಟ್ಟುವ ಮುನ್ನ ಕುಲಾವಿ ಒಲಿಸೊದು ಕಾಂಗ್ರೆಸ್ ಸಂಸ್ಕೃತಿ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಬ್ಬರು ನಾನೇ ಸಿಎಂ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದ್ರೆ ಭಾರತೀಯ ಜನತಾ ಪಕ್ಷದಲ್ಲಿ ಆ ರೀತಿ ಇಲ್ಲ. ಪಕ್ಷದ ವರಿಷ್ಠರು, ಶಾಸಕರು ಸಿಎಂ ಆಯ್ಕೆ ಮಾಡುತ್ತಾರೆ ಎಂದರು.

ಕುಮಾರಸ್ವಾಮಿ ಠುಸ್ ಗಿರಾಕಿ

ಹೆಚ್.ಡಿ.ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಿಸಿ ಪಾಟೀಲ್, ಮಾಜಿ ಸಿಎಂ ಕುಮಾರಸ್ವಾಮಿ ಠುಸ್ ಗಿರಾಕಿ, ದಾಖಲೇನೋ ಇಲ್ಲ.. ಎಂತದೋ ಇಲ್ಲ.. ಅವರು ಯಾವಾಗಲೂ ಹಿಟ್ ಅಂಡ್ ರನ್ ಕೇಸ್ ಮಾಡ್ತಾರೆ. ವಿಧಾನಸೌಧದಲ್ಲಿ ಸಚಿವ ಅಶ್ವತ್ ನಾರಾಯಣ್ ಮುಂದೆ ಹಿಂಗೆ ಹೇಳಿದ್ರು. ಇವತ್ತು ಜಗತ್ತು ಪ್ರಳಯ ಆಗುತ್ತೆ ಅಂದಿದ್ರು, ಆದರೆ ಏನೂ ಆಗಿಲಿಲ್ಲ ಎಂದು ಹೆಚ್ ಡಿಕೆ ವಿರುದ್ಧ ವ್ಯಂಗ್ಯ ವಾಡಿದರು..




